Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಗೆ ಬೃಹತ್‌ ಡಿಸ್ಕೌಂಟ್‌! 128GB ಸ್ಟೋರೇಜ್.. 50MP ಕ್ಯಾಮೆರಾ

ಸ್ಯಾಮ್‌ಸಂಗ್ ಗ್ಯಾಲಕ್ಸಿ (Samsung Galaxy) ಫೋನ್‌ಗಳೆಂದರೆ ಭಾರತದಲ್ಲಿ ಹೆಚ್ಚು ಇಷ್ಟ ಪಡುತ್ತಾರೆ. ಈ ಕಾರಣಕ್ಕೆ ಭಾರತ ಸ್ಯಾಮ್‌ಸಂಗ್‌ ಅನ್ನು ಅಗ್ರ ಸ್ಥಾನದಲ್ಲಿ ಇರುವಂತೆ ಮಾಡಿದೆ. ಅದರಲ್ಲೂ ಇತ್ತೀಚಿನ ವರದಿ ಪ್ರಕಾರ ಹೆಚ್ಚು ಸಾಗಣೆಯಾದ ಫೋನ್‌ಗಳ ವಿಭಾಗದಲ್ಲಿ ಸ್ಯಾಮ್‌ಸಂಗ್‌ ಮೊದಲ ಸ್ಥಾನ ಪಡೆದಿದೆ. ಈ ಎಲ್ಲಾ ಬೆಳವಣಿಗೆ ನಡುವೆ ನೀವು ಈ ಬಹು ಬೇಡಿಕೆಯ ಸ್ಯಾಮ್‌ಸಂಗ್‌ ಫೋನ್‌ ಅನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದು.

ಹೌದು, ಸ್ಯಾಮ್‌ಸಂಗ್‌ ಫೋನ್‌ಗಳು ದೀರ್ಘ ಬಾಳಿಕೆ ಹಾಗೂ ಅತ್ಯುತ್ತಮ ಕಾರ್ಯಕ್ಷಮತೆಗೆ ಹೆಸರುವಾಸಿ. ಅದರಂತೆ ಸ್ಯಾಮ್‌ಸಂಗ್ ಗ್ಯಾಲಕ್ಸಿ M13 (Samsung Galaxy M13) ಸ್ಮಾರ್ಟ್‌ಫೋನ್‌ಗೆ ಪ್ರಮುಖ ಇ-ಕಾಮರ್ಸ್‌ ತಾಣವಾದ ಅಮೆಜಾನ್‌ (Amazon) ಭರ್ಜರಿ ಆಫರ್ ನೀಡಿದೆ. ಈ ಮೂಲಕ ನೀವು ಭಾರೀ ಹಣ ಉಳಿತಾಯ ಮಾಡಬಹುದು. ಈ ಸ್ಮಾರ್ಟ್‌ಫೋನ್ ಎಸ್‌ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್‌ ಹೆಚ್ಚಿಗೆ ಮಾಡಿಕೊಳ್ಳಲು ಅನುಮತಿ ನೀಡಲಿದ್ದು, 50MP ಕ್ಯಾಮೆರಾ ಆಯ್ಕೆ ಪಡೆದಿದೆ. ಹಾಗಿದ್ರೆ, ಈ ಫೋನ್‌ನ ಆಫರ್ ವಿವರ ಹಾಗೂ ಆಫರ್ ಬೆಲೆ ಎಷ್ಟು ಎಂದು ನೋಡೋಣ ಬನ್ನಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಗೆ ಬೃಹತ್‌ ಡಿಸ್ಕೌಂಟ್‌! 128GB ಸ್ಟೋರೇಜ್..

ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಆಫರ್ ವಿವರ: ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ದರ 14,999ರೂ.ಗಳಾಗಿದ್ದು, ಇದಕ್ಕೆ ಅಮೆಜಾನ್ 39% ರಿಯಾಯಿತಿ ಘೋಷಣೆ ಮಾಡಿದೆ. ಈ ಮೂಲಕ ನೀವು ಇದನ್ನು ಕೇವಲ 9,199ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಬ್ಯಾಂಕ್ ರಿಯಾಯಿತಿಗಳು ಮತ್ತು ವಿನಿಮಯ ಕೊಡುಗೆಗಳು ಸಹ ಲಭ್ಯವಿದ್ದು, ವಿನಿಮಯ ಆಫರ್ ಮೂಲಕ ನೀವು 8,650 ರೂ. ವರೆಗೆ ಉಳಿಸಬಹುದು.

ಅಮೆಜಾನ್‌ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 3 ತಿಂಗಳ ಪ್ರಧಾನ ಸದಸ್ಯತ್ವದ ಜೊತೆಗೆ 2,000ರೂ.ಗಳ ಸ್ವಾಗತ ಬಹುಮಾನಗಳನ್ನು ಈ ಫೋನ್‌ ಖರೀದಿ ಮೇಲೆ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಶಾಪಿಂಗ್‌ನಲ್ಲಿ ಪ್ರೈಮ್ ಸದಸ್ಯರಿಗೆ 5% ಕ್ಯಾಶ್‌ಬ್ಯಾಕ್ ಸಹ ಲಭ್ಯವಿದ್ದು, ಈ ಮೂಲಕ ಭಾರೀ ಲಾಭ ಪಡೆಯಬಹುದಾಗಿದೆ. ಇದರೊಂದಿಗೆ ಯಾವುದೇ ಯುಪಿಐ ಪಾವತಿಗಳನ್ನು (UPI payment) ಬಳಕೆ ಮಾಡಿ ಖರೀದಿ ಮಾಡಿದ್ರೆ ಕ್ಯಾಶ್‌ಬ್ಯಾಕ್ ಸಿಗಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಗೆ ಬೃಹತ್‌ ಡಿಸ್ಕೌಂಟ್‌! 128GB ಸ್ಟೋರೇಜ್..

ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.6 ಇಂಚಿನ ಐಪಿಎಸ್‌ ಎಲ್‌ಸಿಡಿ ಇನ್ಫಿನಿಟಿ-ವಿ ಡಿಸ್ಪ್ಲೇ (IPS LCD Infinity-V display) ಆಯ್ಕೆ ಪಡೆದಿದ್ದು ಇದು FHD+ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಈ ಮೂಲಕ ಗೇಮ್ ನಲ್ಲಿ ಹಾಗೂ ವಿಡಿಯೋ ವೀಕ್ಷಣೆಯಲ್ಲಿ ಉತ್ತಮವಾದ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಪ್ರೊಸೆಸರ್‌ ಮಾಹಿತಿ: ಈ ಸ್ಮಾರ್ಟ್‌ಫೋನ್ ಎಕ್ಸಿನೋಸ್‌ 850 ಪ್ರೊಸೆಸರ್‌ನಿಂದ (Exynos 850 processor) ಕಾರ್ಯನಿರ್ವಹಿಸಲಿದ್ದು, 4GB RAM ಮತ್ತು 64GB/128GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ. ಅದರಲ್ಲೂ ಪ್ರಮುಖವಾಗಿ ಮೈಕ್ರೋ ಎಸ್‌ಡಿ ಕಾರ್ಡ್ ಬಳಕೆ ಮಾಡಿಕೊಂಡು ನೀವು 1TB ವರೆಗೆ ಸ್ಟೋರೇಜ್‌ ಅನ್ನು ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಕ್ಯಾಮೆರಾ ರಚನೆ: ಇನ್ನು ಈ ಫೋನ್ ಟ್ರಿಪಲ್‌ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ f/1.8 ದ್ಯುತಿರಂಧ್ರದೊಂದಿಗೆ 50MP ಪ್ರಾಥಮಿಕ ಕ್ಯಾಮರಾ, 5MP ನ f/2.2 ಅಲ್ಟ್ರಾವೈಡ್ ಸ್ನ್ಯಾಪರ್ ಮತ್ತು f/2.4 ದ್ಯುತಿರಂಧ್ರದೊಂದಿಗೆ 2MP ನ ಡೆಪ್ತ್ ಸೆನ್ಸರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 8MP ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಗೆ ಬೃಹತ್‌ ಡಿಸ್ಕೌಂಟ್‌! 128GB ಸ್ಟೋರೇಜ್..

ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಬ್ಯಾಟರಿ ಹಾಗೂ ಇತರೆ: ಬ್ಯಾಟರಿ ವಿಚಾರದಲ್ಲಿ ಸ್ಯಾಮ್‌ಸಂಗ್ ಒಂದು ಹೆಜ್ಜೆ ಮುಂದೆಯೇ ಇರುತ್ತದೆ. ಅದರಂತೆ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಇದು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಉಳಿದಂತೆ ಈ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಸ್ಯಾಮ್‌ಸಂಗ್ ನಾಕ್ಸ್ ಅನ್ನು ಹೊಂದಿದ್ದು, ಡಾಲ್ಬಿ ಅಟ್ಮಾಸ್ ಅನ್ನು ಸಹ ಬೆಂಬಲಿಸುತ್ತದೆ.

Best Mobiles in India

English summary
Amazon, the leading e-commerce site, has given a great offer for the Samsung Galaxy M13 smartphone. By this you can save huge money.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+