ಭಾರೀ ಬೆಲೆ ಇಳಿಕೆ ಕಂಡ ಸ್ಯಾಮ್‌ಸಂಗ್ ಗ್ಯಾಲಕ್ಸಿ M31s ಸ್ಮಾರ್ಟ್‌ಫೋನ್!
ಸ್ಯಾಮ್‌ಸಂಗ್ ಮೊಬೈಲ್ ಕಂಪನಿಯು ಇತ್ತೀಚಿಗೆ ಗ್ಯಾಲ್ಯಾಕ್ಸಿ M ಸರಣಿಯಲ್ಲಿ ಇತ್ತೀಚಿಗೆ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಗ್ಯಾಲ್ಯಾಕ್ಸಿ M ಸರಣಿಯಲ್ಲಿನ ಬಜೆಟ್ ಬೆಲೆಯ ಫೋನ್‌ಗಳಿಂದ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದು, ಗ್ರಾಹಕರ ಗಮನ ಸೆಳೆದಿವೆ. ಆ ಪೈಕಿ ಭಾರಿ ಸದ್ದು ಮಾಡಿರುವ ಗ್ಯಾಲ್ಯಾಕ್ಸಿ M31s ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಈಗ ಇಳಿಕೆ ಆಗಿದ್ದು, ಮತ್ತೆ ಗ್ರಾಹಕರನ್ನು ತನ್ನತ್ತ ಆಕರ್ಷಿಸುವಂತಾಗಿದೆ.

ಹೌದು, ಸ್ಯಾಮ್‌ಸಂಗ್ ಸಂಸ್ಥೆಯು ಜನಪ್ರಿಯ ಗ್ಯಾಲಕ್ಸಿ M31s ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಶಾಶ್ವತವಾಗಿ ಕಡಿತ ಮಾಡಿದೆ. ಈ ಫೋನ್ 6GB RAM ಮತ್ತು 128GB ಸ್ಟೋರೇಜ್ ಮತ್ತು 8GB RAM ಮತ್ತು 128GB ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಫೋನ್ ಪ್ರೈಸ್ನಲ್ಲಿ ಈಗ 1,000ರೂ. ದರ ಕಡಿತವಾಗಿದ್ದು, ಆರಂಭಿಕ ವೇರಿಯಂಟ್ 18,499ರೂ.ಗಳಿಗೆ ಲಭ್ಯವಾಗಲಿದೆ. ಆನ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯ. ಇನ್ನುಳಿದಂತೆ ಗ್ಯಾಲಕ್ಸಿ M31s ಸ್ಮಾರ್ಟ್‌ಫೋನ್ ಫೀಚರ್ಸ್‌ಗಳು ಏನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್
ಗ್ಯಾಲಕ್ಸಿ M31s ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಹೊಂದಿರುವ 6.5 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಜೊತೆಗೆ sAMOLED ಡಿಸ್‌ಪ್ಲೇ ಹೊಂದಿದೆ. ಈ ಫೋನಿನ ಡಿಸ್‌ಪ್ಲೇ ಅನುಪಾತವು 19.5:9 ಆಗಿದ್ದು, 420ನಿಟ್ಸ್ ಸಾಮರ್ಥ್ಯದ ಬ್ರೈಟ್ನೆಸ್ ವ್ಯವಸ್ಥೆ ಪಡೆದಿದೆ. ಹಾಗೂ ಪಂಚ್ ಹೋಲ್ ಡಿಸ್‌ಪ್ಲೇ ಸೌಲಭ್ಯವನ್ನು ಪಡೆದಿದೆ.

ಪ್ರೊಸೆಸರ್ ದಕ್ಷತೆ
ಗ್ಯಾಲಕ್ಸಿ M31s ಸ್ಮಾರ್ಟ್‌ಫೋನ್ ಸಂಸ್ಥೆಯ ಆಕ್ಟಾ ಕೋರ್ exynos 9611 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 10 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಫೋನ್ ಎರಡು ವೇರಿಯಂಟ್ ಆಯ್ಕೆಗಳಿದ್ದು, ಅವುಗಳು ಕ್ರಮವಾಗಿ 6GB RAM ಮತ್ತು 128GB ಸ್ಟೋರೇಜ್ ಮತ್ತು 8GB RAM ಮತ್ತು 128GB ಸಾಮರ್ಥ್ಯ ಸ್ಟೋರೇಜ್ ಆಯ್ಕೆಗಳನ್ನು ಪಡೆದಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶ ಇದೆ.

ಕ್ಯಾಮೆರಾ ಸೆನ್ಸಾರ್
ಗ್ಯಾಲಕ್ಸಿ M31s ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಆಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 64ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 12ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಇನ್ನು ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾವು ಕ್ರಮವಾಗಿ 5ಎಂಪಿ ಸೆನ್ಸಾರ್ ಬಲವನ್ನು ಪಡೆದಿವೆ. ಇದರೊಂದಿಗೆ ಸೆಲ್ಫಿಗಾಗಿ 32ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಜೊತೆಗೆ ಎಡಿಟಿಂಗ್ ಆಯ್ಕೆಗಳು ಹಾಗೂ 480fps ಸ್ಲೋ ಮೋಷನ್ ರೆಕಾರ್ಡಿಂಗ್ ಆಯ್ಕೆಗಳಿವೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್
ಗ್ಯಾಲಕ್ಸಿ M31s ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ ಅಪ್ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ 25W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಿದೆ. ಇದರೊಂದಿಗೆ ಸೈಡ್ ಮೌಂಟ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಆಂಡ್ರಾಯ್ಡ್ 10 ಓಎಸ್, 4G VoLTE, ವೈಫೈ, ಬ್ಲೂಟತ್, ಜಿಪಿಎಸ್ ಆಡಿಯೊ ಜಾಕ್ ಸೇರಿದಂತೆ ಇತ್ತೀಚಿನ ಅಗತ್ಯ ಫೀಚರ್ಸ್‌ಗಳನ್ನು ಒಳಗೊಂಡಿದೆ.


Click it and Unblock the Notifications








