ಆಫರ್‌ನಲ್ಲಿ ಸ್ಯಾಮ್‌ಸಂಗ್ ಫೋನ್ ಖರೀದಿಸುವ ಪ್ಲ್ಯಾನ್ ಇದೆಯಾ?.. ಈ ಆಫರ್ ನೋಡಿ!
ದಕ್ಷಿಣ ಕೊರಿಯಾದ ಟೆಕ್ ದೊಡ್ಡಣ್ಣ ಸ್ಯಾಮ್‌ಸಂಗ್ ಕಂಪನಿಯು ಈಗಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ಮೊದಲ ಪಂಥಿಯಲ್ಲಿ ಕಾಣಿಸಿಕೊಂಡಿದೆ. ಸ್ಯಾಮ್‌ಸಂಗ್ ಕಂಪನಿಯು ಬಜೆಟ್, ಮೀಡ್‌ರೇಂಜ್, ಪ್ರೀಮಿಯಂ ಹಾಗೂ ಹೈ ಎಂಡ್ ಮಾದರಿಯಲ್ಲಿಯೂ ಫೋನ್‌ಗಳನ್ನು ಪರಿಚಯಿಸಿ, ಗ್ರಾಹಕರ ಗಮನ ಸೆಳೆದಿದೆ. ಆ ಪೈಕಿ ಸಂಸ್ಥೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಮೊಬೈಲ್ ಬಿಗ್ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿದೆ.
ಹೌದು, ಅಮೆಜಾನ್ ಆನ್‌ಲೈನ್ ಫ್ಲಿಪ್‌ಕಾರ್ಟ್ ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಮೊಬೈಲ್ ಶೇ. 26% ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದ್ದು, ಈ ಫೋನಿನ 8 GB RAM + 128 GB ಸ್ಟೋರೇಜ್ ವೇರಿಯಂಟ್ 18,999ರೂ. ಗಳ ಆಫರ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ಕೆಲವು ಆಯ್ದ ಬ್ಯಾಂಕ್ ಕೊಡುಗೆ ಹಾಗೂ ಕ್ಯಾಶ್‌ಬ್ಯಾಕ್‌ಗಳು ಕೂಡಾ ಲಭ್ಯ ಸಿಗಲಿವೆ.

ಇನ್ನು ಸ್ಯಾಮ್‌ಸಂಗ್ ಸಂಸ್ಥೆಯ ಈ ಫೋನ್ 6,000mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಹಾಗೆಯೇ ಈ ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ರಚನೆ ಪಡೆದಿದೆ. ಅಲ್ಲದೇ ಆಕ್ಟಾ-ಕೋರ್ 5nm ಎಕ್ಸಿನೋಸ್ ಪ್ರೊಸೆಸರ್ ಸಪೋರ್ಟ್ ಪಡೆದಿದೆ. ಹಾಗಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G - ಫೀಚರ್ಸ್
ಸ್ಯಾಮ್‌ಸಂಗ್ ಸಂಸ್ಥೆಯ ಗ್ಯಾಲಕ್ಸಿ M33 5G ಫೋನ್ 6.6 ಇಂಚಿನ ಫುಲ್ HD + ಇನ್ಫಿನಿಟಿ V ಡಿಸ್‌ಪ್ಲೇ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಅನ್ನು ಪಡೆದಿದೆ.
ಗ್ಯಾಲಕ್ಸಿ M33 5G ಫೋನ್ ಆಕ್ಟಾ-ಕೋರ್ 5nm ಎಕ್ಸಿನೋಸ್ ಪ್ರೊಸೆಸರ್ ಸೌಲಭ್ಯ ಅನ್ನು ಪಡೆದಿದ್ದು, ಇದು ಆಂಡ್ರಾಯ್ಡ್ 12 UI 4.1 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ. ಇದರ ಜೊತೆಗೆ ಸ್ಯಾಮ್‌ಸಂಗ್‌ನ RAM ಪ್ಲಸ್ ಫೀಚರ್ಸ್ ಮೂಲಕ, RAM ಅನ್ನು ಅದರ 16GB ವರೆಗೆ ವಿಸ್ತರಿಸುವ ಆಯ್ಕೆ ಸಹ ಇದೆ.

ಸ್ಯಾಮ್‌ಸಂಗ್ ಸಂಸ್ಥೆಯ ಈ ಮೊಬೈಲ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಪ್ರಾಥಮಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಎರಡನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಸೆನ್ಸಾರ್ ಪಡೆದಿದ್ದು, ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಶೂಟರ್ ಹಾಗೂ ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ.

ಅಂದಹಾಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಮೊಬೈಲ್ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 25W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi, ಬ್ಲೂಟೂತ್ ಮತ್ತು GPS ಅನ್ನು ಒಳಗೊಂಡಿದೆ. ಇದಲ್ಲದೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ.
ಸ್ಯಾಮ್‌ಸಂಗ್ ಕಂಪನಿಯ ಈ ಮೊಬೈಲ್ 6GB + 128GB ಸ್ಟೋರೇಜ್ ಹಾಗೂ 8GB + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ. ಅಲ್ಲದೇ ಈ ಫೋನ್ ಓಶಿಯನ್ ಬ್ಲೂ, ಎಮರಾಲ್ಡ್ ಬ್ರೌನ್ ಹಾಗೂ ಗ್ರೀನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿ ಮಾಡಬಹುದು.


Click it and Unblock the Notifications








