ಹೊಸ ಸ್ಯಾಮ್‌ಸಂಗ್ ಫೋನ್ ಖರೀದಿಸುವ ಗ್ರಾಹಕರೇ, ಈ ಚಾನ್ಸ್ ಮಿಸ್ ಮಾಡ್ಕೋಬೇಡಿ!
ಸ್ಯಾಮ್‌ಸಂಗ್ ಸಂಸ್ಥೆಯ ಆಕರ್ಷಕ ಫೀಚರ್ಸ್‌ಗಳೊಂದಿಗೆ ಭಿನ್ನ ಮೊಬೈಲ್ ಶ್ರೇಣಿಯನ್ನು ಹೊಂದಿದೆ. ಅದರಲ್ಲಿಯೂ ಇತ್ತೀಚಿಗಿನ ಫೋನ್‌ಗಳ ಫೀಚರ್ಸ್ ಗ್ರಾಹಕರನ್ನು ಆಕರ್ಷಿಸುವಂತಿವೆ. ನೀವೇನಾದರೂ ಹೊಸದಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್ ಖರೀದಿಸುವ ಯೋಚನೆ ಮಾಡಿದ್ರೆ, ನಿಮಗೆ ಇಲ್ಲಿದೆ ಸಖತ್ ಖುಷಿಸುದ್ದಿ.
ಹೌದು, ಸ್ಯಾಮ್‌ಸಂಗ್ ಸಂಸ್ಥೆಯ ಗ್ಯಾಲಕ್ಸಿ M33 5G ಫೋನ್ ಈಗ 2,000ರೂ. ಗಳ ಇಳಿಕೆ ಪಡೆದಿದೆ. ಈ ಫೋನ್ 6GB + 128GB ಮತ್ತು 8GB + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದ್ದು, 8GB ವೇರಿಯಂಟ್‌ಗಳ ಬೆಲೆಯಲ್ಲಿ ಮಾತ್ರ ಈಗ ದರ ಕಡಿತ ಆಗಿದೆ. ಇನ್ನು ಈ ಫೋನ್ ಆಕ್ಟಾ-ಕೋರ್ 5nm ಎಕ್ಸಿನೋಸ್ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ.

ಗ್ಯಾಲಕ್ಸಿ M33 5G ಫೋನಿನ 8GB + 128GB ಸ್ಟೋರೇಜ್ ವೇರಿಯಂಟ್ 20,499ರೂ. ಗಳ ಬೆಲೆ ಹೊಂದಿದ್ದು, ಬೆಲೆ ಇಳಿಕೆಯಿಂದಾಗಿ 18,499ರೂ. ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಫೋನ್ ಡೀಪ್ ಓಷನ್ ಬ್ಲೂ, ಮಿಸ್ಟಿಕ್ ಗ್ರೀನ್ ಮತ್ತು ಎಮರಾಲ್ಡ್ ಬ್ರೌನ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಾಗಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಗ್ಯಾಲಕ್ಸಿ M33 5G ಡಿಸ್‌ಪ್ಲೇ ರಚನೆಯ ಮಾಹಿತಿ : ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ HD + ಇನ್ಫಿನಿಟಿ V ಡಿಸ್‌ಪ್ಲೇ ಪಡೆದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದ್ದು, ಈ ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಅನ್ನು ಹೊಂದಿದೆ.
ಗ್ಯಾಲಕ್ಸಿ M33 5G ಪ್ರೊಸೆಸರ್ ಪವರ್ ಯಾವುದು : ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ 5nm ಎಕ್ಸಿನೋಸ್ ಪ್ರೊಸೆಸರ್ ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 UI 4.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB + 128GB ಮತ್ತು 8GB + 128GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ.
ಗ್ಯಾಲಕ್ಸಿ M33 5G ಕ್ವಾಡ್ ಕ್ಯಾಮೆರಾ ಸೆನ್ಸಾರ್ : ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ರಚನೆ ಪಡೆದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಸೆಕೆಂಡರಿ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್, ತೃತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಹಾಗೂ ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಗ್ಯಾಲಕ್ಸಿ M33 5G ಬ್ಯಾಟರಿ ಮತ್ತು ಇತರೆ ಆಯ್ಕೆ : ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ. ಅದಕ್ಕೆ ಪೂರಕವಾಗಿ 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi, ಬ್ಲೂಟೂತ್ ಮತ್ತು GPS ಅನ್ನು ಒಳಗೊಂಡಿದ್ದು, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸಹ ಹೊಂದಿದೆ.
ಗ್ಯಾಲಕ್ಸಿ M33 5G ವೇರಿಯಂಟ್ ಹಾಗೂ ಕಲರ್ : ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್ 6GB + 128GB ಸ್ಟೋರೇಜ್ ಹಾಗೂ 8GB + 128GB ಸ್ಟೋರೇಜ್ ಆವೃತ್ತಿಯಗಳ ಆಯ್ಕೆ ಪಡೆದಿದೆ. ಹಾಗೆಯೇ ಇದು ಓಶಿಯನ್ ಬ್ಲೂ, ಎಮರಾಲ್ಡ್ ಬ್ರೌನ್ ಹಾಗೂ ಗ್ರೀನ್ ಕಲರ್ ಆಯ್ಕೆ ಪಡೆದಿದೆ.


Click it and Unblock the Notifications








