Home
ಸುದ್ದಿಜಾಲ

ಸ್ಯಾಮ್‌ಸಂಗ್‌ನ ಈ ಜನಪ್ರಿಯ ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ!

ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಹಬ್ಬದ ಸೇಲ್ ಮೇಳವನ್ನು ಆಯೋಜಿಸಿದ್ದು, ಈ ಮಾರಾಟದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಬೊಂಬಾಟ್‌ ರಿಯಾಯಿತಿ ಘೋಷಿಸಿದೆ. ಅವುಗಳಲ್ಲಿ ಬಜೆಟ್‌ ದರದ ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಸ್ಮಾರ್ಟ್‌ಫೋನ್‌ ಗ್ರಾಹಕರು ಹಿಂತಿರುಗಿ ನೋಡುವಂತಹ ಡಿಸ್ಕೌಂಟ್‌ ಪಡೆದುಕೊಂಡಿದೆ.

ಹೌದು, ಜನಪ್ರಿಯ ಅಮೆಜಾನ್‌ ತಾಣವು ಹಬ್ಬದ ವಿಶೇಷ ಮಾರಾಟದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಮೊಬೈಲ್‌ ಶೇ. 33% ರಷ್ಟು ನೇರ ರಿಯಾಯಿತಿ ಪಡೆದುಕೊಂಡಿದೆ. 6GB + 128GB ಸ್ಟೋರೇಜ್‌ ವೇರಿಯಂಟ್‌ ಫೋನ್‌ ಅನ್ನು ಗ್ರಾಹಕರು 16,499ರೂ. ಗಳಿಗೆ ಖರೀದಿ ಮಾಡಲು ಅವಕಾಶ ಇದೆ. ಇದರ ಜೊತೆಗೆ ಲಭ್ಯ ಇರುವ ಇತರೆ ಕೊಡುಗೆ ಸೇರಿ 14,999ರೂ. ಗಳಿಗೆ ಪಡೆಯಬಹುದಾಗಿದೆ.

ಸ್ಯಾಮ್‌ಸಂಗ್‌ನ ಈ ಜನಪ್ರಿಯ ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ!

ಇನ್ನು ಗ್ಯಾಲಕ್ಸಿ M34 5G ಫೋನ್‌ ಆಕ್ಟಾ-ಕೋರ್ Exynos 1280 SoC ಬಲ ಪಡೆದಿದ್ದು, ಮೊದಲ ರಿಯರ್ ಕ್ಯಾಮೆರಾ 50 ಮೆಗಾಪಿಕ್ಸಲ್‌ ಸೆನ್ಸಾರ್‌ ರಚನೆಯಲ್ಲಿ ಇದೆ. ಹಾಗೆಯೇ ಈ ಮೊಬೈಲ್‌ ಪ್ರಿಸ್ಮ್ ಸಿಲ್ವರ್, ಮಿಡ್ನೈಟ್ ಬ್ಲೂ ಮತ್ತು ವಾಟರ್‌ಫಾಲ್‌ ಬ್ಲೂ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸದ ಮಾಹಿತಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಮೊಬೈಲ್‌ 2,400 x 1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ ಪ್ಲಸ್‌ ಅಮೊಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಪಡೆದಿದ್ದು, ಡಿಸ್‌ಪ್ಲೇಯು ಪಂಚ್‌ ಹೋಲ್‌ ಕಟ್‌ಔಟ್‌ ಮಾದರಿಯಲ್ಲಿದೆ. ಇದರೊಂದಿಗೆ ಗೊರಿಲ್ಲಾ ಗ್ಲಾಸ್‌ 5 ರಕ್ಷಣೆ ಸಹ ಪಡೆದಿದೆ.

ಸ್ಯಾಮ್‌ಸಂಗ್‌ನ ಈ ಜನಪ್ರಿಯ ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ!

ಪ್ರೊಸೆಸರ್‌ ಪವರ್ ಯಾವುದು ಮತ್ತು ಮೆಮೊರಿ ಆಯ್ಕೆ

ಸ್ಯಾಮ್‌ಸಂಗ್ ಸಂಸ್ಥೆಯ ಈ ಮೊಬೈಲ್‌ ಆಕ್ಟಾ ಕೋರ್ Exynos 1280 SoC ಪ್ರೊಸೆಸರ್‌ ನಲ್ಲಿ ಕಾರ್ಯ ಮಾಡಲಿದ್ದು, ಇದರ ಜೊತೆಗೆ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಹೊಂದಿದೆ. ಇನ್ನು ಈ ಫೋನ್ 6GB + 128 GB ಮತ್ತು 8GB RAM + 128 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಒಳಗೊಂಡಿದೆ.

ಕ್ಯಾಮೆರಾ ಸೆನ್ಸಾರ್ ಮಾಹಿತಿ ಹೀಗಿದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಮೊಬೈಲ್‌ ತ್ರಿವಳಿ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಆಗಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಹಾಗೂ ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ಪಡೆದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 13 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ.

ಸ್ಯಾಮ್‌ಸಂಗ್‌ನ ಈ ಜನಪ್ರಿಯ ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ!

ಬ್ಯಾಟರಿ ಬ್ಯಾಕ್‌ಅಪ್‌ ಪವರ್ ಹೀಗಿದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಮೊಬೈಲ್‌ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ. ಇದಕ್ಕೆ ಬೆಂಬಲವಾಗಿ 25W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಸಹ ಹೊಂದಿದೆ. ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ ಆಯ್ಕೆಗಳ ಜೊತೆಗೆ ಬ್ಲೂಟೂತ್ 5.2, ಎನ್‌ಎಫ್‌ಸಿ ಸೌಲಭ್ಯಗಳು ಸಹ ಇವೆ.

ಮೆಮೊರಿ ಮತ್ತು ಕಲರ್‌ ಆಯ್ಕೆ ಮಾಹಿತಿ

ಸ್ಯಾಮ್‌ಸಂಗ್‌ನ ಈ ಫೋನ್‌ 6GB RAM + 128GB ಸ್ಟೋರೇಜ್ ವೇರಿಯಂಟ್‌ ಮತ್ತು 8GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಹೊಂದಿವೆ. ಇನ್ನು ಈ ಫೋನ್‌ ಪ್ರಿಸ್ಮ್ ಸಿಲ್ವರ್, ಮಿಡ್ನೈಟ್ ಬ್ಲೂ ಮತ್ತು ವಾಟರ್‌ಫಾಲ್‌ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಆಗಲಿದೆ.

Best Mobiles in India

English summary
Samsung Galaxy M34 5G available at Massive Price drop on amazon. price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+