Home
ಸುದ್ದಿಜಾಲ

Samsung ನ ಈ 5G ಫೋನ್‌ಗೆ ಬೃಹತ್‌ ಆಫರ್! 6000mAh ಬ್ಯಾಟರಿ.. 50MP ಕ್ಯಾಮೆರಾ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ (Samsung Galaxy) ಫೋನ್‌ಗಳಿಗೆ ಸದಾ ಬೇಡಿಕೆ ಇದೆ. ಅದರಲ್ಲೂ ಭಾರತದಲ್ಲಿ ಈ ಫೋನ್‌ಗಳಿಗೆ ವಿಶೇಷ ಗ್ರಾಹಕ ವರ್ಗ ಇದೆ. ಈ ನಡುವೆ ಪ್ರಮುಖ ಇ- ಕಾಮರ್ಸ್‌ ಸೈಟ್‌ನಲ್ಲಿ ಸ್ಯಾಮ್‌ಸಂಗ್‌ನ ಈ 5G ಸ್ಮಾರ್ಟ್‌ಫೋನ್‌ಗೆ ಭರ್ಜರಿ ಡಿಸ್ಕೌಂಟ್‌ ನೀಡಲಾಗಿದೆ.

ಹೌದು, ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಬಹಳ ಸದ್ದು ಮಾಡುತ್ತಿರುವ ಹಾಗೂ ಹೆಚ್ಚಿನ ಜನರು ಇಷ್ಟಪಡುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M34 5G (Samsung Galaxy M34 5G) ಫೋನ್‌ಗೆ ಅಮೆಜಾನ್‌ನಲ್ಲಿ ದೊಡ್ಡ ಮಟ್ಟದ ಆಫರ್‌ ನೀಡಲಾಗಿದೆ. ಈ ಫೋನ್ 120Hz ರಿಫ್ರೆಶ್ ರೇಟ್ ನೊಂದಿಗೆ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ, 6000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಫೋನ್‌ನ ಆಫರ್‌ ಬೆಲೆ ಎಷ್ಟು ಫೀಚರ್ಸ್‌ ಏನು ಎಂದು ತಿಳಿಸಿಕೊಡಲಾಗಿದೆ ಈ ಲೇಖನ ಓದಿರಿ.

Samsung ನ ಈ 5G ಫೋನ್‌ಗೆ ಬೃಹತ್‌ ಆಫರ್! 6000mAh ಬ್ಯಾಟರಿ.. 50MP ಕ್ಯಾಮೆರಾ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M34 5G ಫೋನ್ ಆಫರ್‌ ವಿವರ: ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ 2023 ನಲ್ಲಿ(Amazon Great Indian Festival 2023) ಈ ಫೋನ್‌ಗೆ ಆಫರ್‌ ನೀಡಲಾಗಿದೆ. ಅಂದರೆ ಈ ಫೋನ್‌ಗೆ 35 % ರಷ್ಟು ಡಿಸ್ಕೌಂಟ್‌ ನೀಡಲಾಗಿದೆ. ಈ ಮೂಲಕ ನೀವು 15,999 ರೂ. ಬೆಲೆಯಲ್ಲಿ ಇದನ್ನು ಖರೀದಿ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಕೆ ಮಾಡಿ ಖರೀದಿ ಮಾಡಿದ್ರೆ ಇನ್ನೂ ಹೆಚ್ಚಿನ ಡಿಸ್ಕೌಂಟ್ ಈ ಫೋನ್‌ಗೆ ಸಿಗಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M34 5G ಫೋನ್ ಆಫರ್ ಫೀಚರ್ಸ್‌: ಇನ್ನು ಈ ಫೋನ್‌ನ ಪ್ರಮುಖ ಫೀಚರ್ಸ್‌ ಕಡೆ ಕಣ್ಣಾಯಿಸುವುದಾದರೆ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್ ರೆಸಲ್ಯೂಶನ್ ಸಾಮರ್ಥ್ಯದ 120Hz ರಿಫ್ರೆಶ್ ರೇಟ್ ಆಯ್ಕೆ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಪಡೆದುಕೊಂಡಿದೆ. ಈ ಮೂಲಕ ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ.

ಈ 5G ಸ್ಮಾರ್ಟ್‌ಫೋನ್ ಅಕ್ಸಿನೋಸ್‌ 1280 ಚಿಪ್‌ಸೆಟ್ (Exynos 1280 SoC) ನ ಬಲ ಪಡೆದಿದ್ದು, ಇದೇ ಚಿಪ್‌ಸೆಟ್ ಅನ್ನು ಗ್ಯಾಲಕ್ಸಿ M33 5G, ಗ್ಯಾಲಕ್ಸಿ A53 5G ಮತ್ತು ಗ್ಯಾಲಕ್ಸಿ A33 5G ಗೂ ನೀಡಲಾಗಿದೆ. ಈ ಮೂಲಕ ಅತ್ಯುತ್ತಮ ಫೋನ್‌ ಎನಿಸಿಕೊಂಡ ಎಲ್ಲಾ ಫೋನ್‌ಗಳು ಇದೇ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷ ಸಂಗತಿ. ಇದರೊಂದಿಗೆ 6GB RAM + 128GB ಇಂಟರ್‌ ಸ್ಟೋರೇಜ್‌ ಮತ್ತು 8GB RAM + 128GB ಇಂಟರ್‌ ಸ್ಟೋರೇಜ್‌ ಆಯ್ಕೆಯೊಂದಿಗೆ ಈ ಫೋನ್‌ ಕಾಣಿಸಿಕೊಂಡಿದೆ. ಆಂಡ್ರಾಯ್ಡ್ 13 ಓಎಸ್ ಅನ್ನು ರನ್ ಮಾಡುತ್ತದೆ.

ಇದರೊಂದಿಗೆ ಈ ಸ್ಮಾರ್ಟ್‌ಫೋನ್ ಟ್ರಿಪಲ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 8MP+2MP ಕ್ಯಾಮೆರಾ ಆಯ್ಕೆ ಇರಲಿದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 13MP (F2.0) ಸೆಲ್ಫಿ ಕ್ಯಾಮೆರಾದ ಆಯ್ಕೆ ನೀಡಲಾಗಿದೆ. ಈ ಕ್ಯಾಮೆರಾ ಸೆನ್ಸರ್‌ಗಳು ಇತ್ತೀಚಿನ ಎಲ್ಲಾ ಸುಧಾರಿತ ಫೀಚರ್ಸ್‌ ಅನ್ನು ಹೊಂದಿವೆ.

ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ನಾಲ್ಕು ವರ್ಷಗಳ ಓಎಸ್‌ ನವೀಕರಣಗಳನ್ನು ಮತ್ತು ಐದು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆದುಕೊಳ್ಳಲಿದೆ. ಅಂತಿಮವಾಗಿ ಈ ಸ್ಮಾರ್ಟ್ಫೋನ್ 25W ವೇಗದ ಚಾರ್ಜಿಂಗ್‌ ಬೆಂಬಲದೊಂದಿಗೆ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಮೂಲಕ ದೀರ್ಘ ಸಮಯದ ಬ್ಯಾಕಪ್‌ ಅನ್ನು ಈ ಫೋನ್‌ನಲ್ಲಿ ನಿರೀಕ್ಷೆ ಮಾಡಬಹುದಾಗಿದೆ.

Samsung ನ ಈ 5G ಫೋನ್‌ಗೆ ಬೃಹತ್‌ ಆಫರ್! 6000mAh ಬ್ಯಾಟರಿ.. 50MP ಕ್ಯಾಮೆರಾ

ನೀವೇನಾದರೂ 5G ಫೋನ್‌ಗಳನ್ನು ಸರ್ಚ್ ಮಾಡುತ್ತಿದ್ದರೆ ಅದರಲ್ಲೂ ಕ್ಯಾಮೆರಾ ಹಾಗೂ ಬ್ಯಾಟರಿ ವಿಭಾಗದಲ್ಲಿ ಅತ್ಯುತ್ತಮ ಫೋನ್‌ ಹುಡುಕುತ್ತಿದ್ದರೆ ಈ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M34 5G ಫೋನ್‌ ಉತ್ತಮ ಆಯ್ಕೆ ಆಗಿರಲಿದೆ. ಅದರಲ್ಲೂ ಹಲವು ವರ್ಷಗಳ ಭದ್ರತಾ ನವೀಕರಣ ಈ ಫೋನ್‌ಗೆ ಇರುವುದರಿಂದ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸುವ ಮಾತೇ ಇಲ್ಲ. ಇನ್ನು ಇದೇ ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ಹೆಚ್ಚಿನ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಅಮೆಜಾನ್‌ ಮೂಲಕ ಖರೀದಿ ಮಾಡಿದ್ರೆ ಇನ್ನೂ ಹೆಚ್ಚಿನ ಹಣ ಉಳಿತಾಯ ಮಾಡಬಹುದಾಗಿದೆ.

Best Mobiles in India

English summary
Samsung Galaxy M34 5G phone has a great deal on Amazon. This phone has an AMOLED display option with a 120Hz refresh rate, and a 6000mAh battery option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+