Samsung: ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಸ್ಮಾರ್ಟ್‌ಫೋನ್ ಬೆಲೆ ಕಡಿತ! ಆಫರ್ ಮಿಸ್ ಮಾಡಿಕೊಳ್ಳಬೇಡಿ
ಸ್ಯಾಮ್‌ಸಂಗ್ (Samsung) ಸ್ಮಾರ್ಟ್‌ಫೋನ್‌ಗಳಿಗೆ ಇರುವ ಬೇಡಿಕೆ ಇತರೆ ಯಾವ ಫೋನ್‌ಗಳಿಗೂ ಇಲ್ಲ ಎಂದರೆ ತಪ್ಪಾಗಲಾರದು. ಅಷ್ಟರಮಟ್ಟಿಗೆ ಈ ಫೋನ್‌ಗಳಿಗೆ ಭಾರತದಲ್ಲಿ ಬೇಡಿಕೆ ಇದೆ. ಅದರಲ್ಲೂ ಕೆಲವು ಫೋನ್‌ಗಳಂತೂ ಭಾರೀ ಜನಪ್ರಿಯತೆ ಪಡೆದುಕೊಂಡಿದ್ದು, ಈ ಮೂಲಕ ಸ್ಮಾರ್ಟ್‌ಫೋನ್ ವಲಯದಲ್ಲಿ ದೊಡ್ಡ ಸಂಚಲನವನ್ನೇ ಉಂಟು ಮಾಡುತ್ತಿವೆ. ಆ ಫೋನ್‌ಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಮುಖ್ಯವಾಗಿದೆ.
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಸ್ಮಾರ್ಟ್‌ಫೋನ್‌ಗೆ (Samsung Galaxy M34 5G smartphone) ದೊಡ್ಡ ಮಟ್ಟದ ಬೇಡಿಕೆ ಇದೆ. ಈ ಫೋನ್‌ಗಳನ್ನು ಈ ಕ್ಷಣಕ್ಕೂ ಪ್ರಮುಖ ಇ ಕಾಮರ್ಸ್ ಸೈಟ್‌ನಲ್ಲಿ ದೊಡ್ಡ ಮಟ್ಟದಲ್ಲಿ ಖರೀದಿ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಈ ಫೋನ್ ಬೆಲೆಯನ್ನು ಅಧಿಕೃತವಾಗಿ ಕಡಿಮೆ ಮಾಡಲಾಗಿದೆ. ಈ ಫೋನ್ ಅನ್ನು ಕಳೆದ ವರ್ಷ ಅನಾವರಣ ಮಾಡಲಾಗಿದ್ದು, ಎರಡು ವೇರಿಯಂಟ್ ಆಯ್ಕೆಯಲ್ಲಿ ಲಭ್ಯ ಇದೆ. ಹಾಗಿದ್ರೆ, ಈ ಫೋನ್‌ಗೆ ಇರುವ ಆಫರ್ ಏನು?, ಇದರ ಫೀಚರ್ಸ್ ಏನು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G: ಕಳೆದ ವರ್ಷ ಜುಲೈನಲ್ಲಿ ಅನಾವರಣ ಮಾಡಲಾದ ಈ ಸ್ಮಾರ್ಟ್‌ಫೋನ್ ಇದೀಗ 3,000 ರೂ.ಗಳ ಬೆಲೆ ಇಳಿಕೆ ಕಂಡಿದೆ. ಮೊದಲೇ ತಿಳಿಸಿದಂತೆ ಈ ಫೋನ್ ಎರಡು ವೇರಿಯಂಟ್ ಆಯ್ಕೆಯಲ್ಲಿ ಲಭ್ಯ ಇದ್ದು, ಎರಡಕ್ಕೂ ಸಹ ಇದೇ ಆಫರ್ ನೀಡಲಾಗಿದೆ. ಅಷ್ಟೇ ಅಲ್ಲದೆ ಬ್ಯಾಂಕ್ ಆಫರ್ ಅನ್ನೂ ಸಹ ನೀಡಲಾಗಿದ್ದು, ಈ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ.
ಈ ಫೋನ್‌ನ ಹೊಸ ಬೆಲೆ ಎಷ್ಟು?: 6GB+128GB ಸ್ಟೋರೇಜ್ ವೇರಿಯಂಟ್ ಹಾಗೂ 8GB+128GB ಸ್ಟೋರೇಜ್ ವೇರಿಯಂಟ್‌ಗೆ ಈ ಮೊದಲು ಕ್ರಮವಾಗಿ 18,999 ರೂ.ಗಳು ಮತ್ತು 20,999 ರೂ.ಗಳನ್ನು ನಿಗದು ಮಾಡಲಾಗಿತ್ತು. ಆದರೆ ಈಗ ನೀವು ಬೆಲೆ ಕಡಿತದ ಪ್ರಯೋಜನ ಪಡೆದುಕೊಳ್ಳುವ ಮೂಲಕ ಈ ಫೋನ್‌ಗಳನ್ನು ಕ್ರಮವಾಗಿ 15,999 ರೂ.ಗಳು ಮತ್ತು 17,999ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಈ ಫೋನ್ ಮೂರು ಕಲರ್ ವೇರಿಯಂಟ್ ಆಯ್ಕೆಯಲ್ಲಿ ಲಭ್ಯ ಇವೆ. ಅಂದರೆ ಮಿಡ್ನೈಟ್ ಬ್ಲೂ, ಪ್ರಿಸ್ಮ್ ಸಿಲ್ವರ್ ಮತ್ತು ವಾಟರ್‌ಫಾಲ್ ಬ್ಲೂ ಬಣ್ಣದ ಫೋನ್‌ಗಳನ್ನು ಕಾಣಬಹುದಾಗಿದೆ. ಉಳಿದಂತೆ ಈ ಫೋನ್ ಅನ್ನು ಖರೀದಿ ಮಾಡುವಾಗ ನೀವು ಐಸಿಐಸಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ನಲ್ಲಿ 1000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಸಹ ಪಡೆಯಬಹುದಾಗಿದೆ. ಇದರಿಂದ ಇನ್ನೂ ಕಡಿಮೆ ದರದಲ್ಲಿ ಈ ಫೋನ್ ನಿಮ್ಮ ಕೈ ಸೇರಲಿದೆ. ಹಾಗಿದ್ರೆ ಈ ಫೋನ್‌ನ ಪ್ರಮುಖ ಫೀಚರ್ಸ್ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಸ್ಮಾರ್ಟ್‌ಫೋನ್ 1080x2340 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ 6.5 ಇಂಚಿನ ಫುಲ್‌ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್ ಮತ್ತು 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಆಕ್ಟಾಕೋರ್ ಎಕ್ಸಿನೋಸ್ 1280 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಲಿದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಲು ಅನುವು ಮಾಡಿಕೊಟ್ಟಿದೆ.
ಹಾಗೆಯೇ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡಲಿದ್ದು, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಸೆಲ್ಫಿಗಳಿಗಾಗಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, 25W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.


Click it and Unblock the Notifications








