Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್‌ ಗ್ಯಾಲಕ್ಸಿ M35 ಸ್ಮಾರ್ಟ್‌ಫೋನ್ ಫೀಚರ್ಸ್‌ ಲೀಕ್‌! ಎಕ್ಸಿನೋಸ್ 1380 ಪ್ರೊಸೆಸರ್‌

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳು (Samsung smartphone) ಮಾರುಕಟ್ಟೆಯಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿವೆ. ಈ ನಡುವೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M35 ಸ್ಮಾರ್ಟ್‌ಫೋನ್ (Samsung Galaxy M35 smartphone) ಬಗ್ಗೆ ಮಾಹಿತಿ ಲೀಕ್‌ ಆಗಿದ್ದು, ಸ್ಮಾರ್ಟ್‌ಫೋನ್‌ ವಲಯದಲ್ಲಿ ಸಂಚಲನ ಉಂಟು ಮಾಡಲಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ M35 ಸ್ಮಾರ್ಟ್‌ಫೋನ್ ಇನ್ನೇನು ಕೆಲವೇ ದಿನಗಳಲ್ಲಿ ಲಾಂಚ್‌ ಆಗಲಿದ್ದು, ಈ ಫೋನ್ ಎಕ್ಸಿನೋಸ್‌ 1380 ಪ್ರೊಸೆಸರ್ ಬಲ ಹಾಗೂ 6,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಫೋನ್‌ ನಲ್ಲಿ ಏನೆಲ್ಲಾ ಫೀಚರ್ಸ್‌ ಅನ್ನು ನಿರೀಕ್ಷೆ ಮಾಡಬಹುದು?, ವಿನ್ಯಾಸ ಹೇಗಿರಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M35 ಸ್ಮಾರ್ಟ್‌ಫೋನ್ ಫೀಚರ್ಸ್‌ ಲೀಕ್‌...

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M35 ಸ್ಮಾರ್ಟ್‌ಫೋನ್: ಸ್ಯಾಮ್‌ಸಂಗ್ ಶೀಘ್ರದಲ್ಲೇ M ಸರಣಿಯ ಅಡಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಅನ್ನು ಲಾಂಚ್‌ ಮಾಡಲಿದೆ. ಗೂಗಲ್ ಪ್ಲೇ ಕನ್ಸೋಲ್‌ನಲ್ಲಿ ಕಾಣಿಸಿಕೊಂಡಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ M35 ಅನ್ನು ಕಂಪನಿಯು ಘೋಷಣೆ ಮಾಡಬಹುದು ಎನ್ನಲಾಗಿದ್ದು, ಪಟ್ಟಿಯು ಫೋನ್‌ನ ವಿನ್ಯಾಸ ಮತ್ತು ವಿಶೇಷಣಗಳ ನೋಟವನ್ನು ನೀಡುತ್ತದೆ.

ಈ ಫೋನ್‌ನ ವಿನ್ಯಾಸ ವಿಷಯಕ್ಕೆ ಬಂದರೆ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದ್ದು, ಕ್ಯಾಮೆರಾ ಸೆನ್ಸರ್‌ ಅನ್ನು ಲಂಬವಾಗಿ ಜೋಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಎಲ್ಇಡಿ ಫ್ಲ್ಯಾಶ್‌ ಅನ್ನು ಬದಿಯಲ್ಲಿ ಇರಿಸಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಜೊತೆಗೆ ಮುಂಭಾಗದಲ್ಲಿ, ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ ಹ್ಯಾಂಡ್‌ಸೆಟ್ ಒಂದೇ ಕ್ಯಾಮೆರಾ ಸೆನ್ಸರ್‌ ಅನ್ನು ಹೊಂದಿರಬಹುದು. ಕ್ಯಾಮರಾವನ್ನು ಇರಿಸಲು ಇದು ಪಂಚ್ ಹೋಲ್ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದೆ ಎಂದು ಹೇಳಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M35 ಸ್ಮಾರ್ಟ್‌ಫೋನ್ ಫೀಚರ್ಸ್‌ ಲೀಕ್‌...

ಇದರ ಜೊತೆಗೆ ಈ ಫೋನ್ ಎಕ್ಸಿನೋಸ್‌ 1380 ಪ್ರೊಸೆಸರ್‌ನಿಂದ ಕಾರ್ಯ ನಿರ್ವಹಿಸಬಹುದು ಎನ್ನಲಾಗಿದ್ದು, 6.6 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ರನ್‌ ಆಗಲಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಸ್ವಂತ ಒನ್‌ಯುಐ ಅನ್ನು ರನ್ ಮಾಡಬಹುದು ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ. ಆದಾಗ್ಯೂ, ಸ್ಮಾರ್ಟ್‌ಫೋನ್ ಒನ್‌ಯುಐ 6.0 ಅಥವಾ ಒನ್‌ಯುಐ 6.1 ಅನ್ನು ಹೊಂದಿರಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಹಾಗೆಯೇ ಗ್ಯಾಲಕ್ಸಿ M35 ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಟರಿ ಪಡೆದಿರಲಿದೆ ಎನ್ನಲಾಗಿದ್ದು, 25W ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ ಎಂದು ವದಂತಿಗಳಿವೆ. ಇನ್ನು 50 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿರಬಹುದು ಎನ್ನಲಾಗಿದೆ. ಈ ನಿರೀಕ್ಷಿತ ಫೀಚರ್ಸ್‌ ನಿಜವೇ ಆದರೆ ಸ್ಮಾರ್ಟ್‌ಫೋನ್‌ ವಲಯದಲ್ಲಿ ದೊಡ್ಡ ಸಂಚಲನ ಉಂಟಾಗುವುದಂತೂ ಸತ್ಯ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M35 ಸ್ಮಾರ್ಟ್‌ಫೋನ್ ಫೀಚರ್ಸ್‌ ಲೀಕ್‌...

ಈ ನಡುವೆ ಸ್ಯಾಮ್‌ಸಂಗ್ 2024 ರಲ್ಲಿ ತೆಳುವಾದ ಮತ್ತು ಅಗ್ಗದ ಗ್ಯಾಲಕ್ಸಿ Z ಫೋಲ್ಡ್ 6 ಅನ್ನು ಲಾಂಚ್‌ ಮಾಡಲಿದೆ ಎಂದು ತಿಳಿದುಬಂದಿದೆ. ದಕ್ಷಿಣ ಕೊರಿಯಾದ ಕಂಪನಿಯು ಪ್ರತಿ ವರ್ಷ ಎರಡು ಫೋಲ್ಡ್‌ ಮಾಡಬಹುದಾದ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದ್ದು, ಇದೀಗ ಅಗ್ಗದ ಆವೃತ್ತಿಯನ್ನು ಲಾಂಚ್‌ ಮಾಡಲಿದೆ ಎನ್ನಲಾಗಿದೆ. ಉತ್ಪನ್ನದ ವ್ಯತ್ಯಾಸದ ಅಂಶಗಳು ಮತ್ತು ಉದ್ಯಮದ ಅನಿಶ್ಚಿತತೆಯ ಕೊರತೆಯಿಂದಾಗಿ ಸ್ಯಾಮ್‌ಸಂಗ್ ಕೈಗೆಟುಕುವ ಗ್ಯಾಲಕ್ಸಿ Z ಫೋಲ್ಡ್ 6 ಅನ್ನು ತರುವ ತನ್ನ ಯೋಜನೆಗಳನ್ನು ಮರುಪರಿಶೀಲಿಸುತ್ತಿದೆ ಎಂದು ಕೆಲವು ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ.

ಅಂದರೆ ಗ್ಯಾಲಕ್ಸಿ Z ಫೋಲ್ಡ್‌ 6 FE ಜೊತೆಗೆ ಗ್ಯಾಲಕ್ಸಿ Z ಫೋಲ್ಡ್‌ 6 ಮತ್ತು ಗ್ಯಾಲಕ್ಸಿ Z ಫ್ಲಿಪ್‌ 6 ಅನ್ನು ಪ್ರಾರಂಭಿಸಬಹುದು ಎಂಬ ಊಹಾಪೋಹಗಳಿದ್ದವು. ಈ ನಡುವೆ ಕಂಪನಿಯ ಕಾಂಪೊನೆಂಟ್ ಪಾಲುದಾರರು ಈ ತಿಂಗಳು ಗ್ಯಾಲಕ್ಸಿ Z ಫ್ಲಿಪ್‌ 6 ಮತ್ತು ಗ್ಯಾಲಕ್ಸಿ Z ಫೋಲ್ಡ್‌ 6 ಫೋಲ್ಡಬಲ್‌ಗಳ ಘಟಕಗಳ ಬೃಹತ್ ಉತ್ಪಾದನೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ ಎಂದು ವರದಿ ಹೇಳುತ್ತವೆ.

Best Mobiles in India

English summary
Samsung Galaxy M35 smartphone will be launched in a few days, it is known that this phone will be powered by Exynos 1380 processor and 6,000mAh battery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+