ಇಂದು ಸ್ಯಾಮ್‌ಸಂಗ್ ಗ್ಯಾಲಕ್ಸಿ M51 ಫೋನ್ ಸೇಲ್!..ಖರೀದಿಗೆ ಕ್ಯೂ ಪಕ್ಕಾ!
ಸ್ಯಾಮ್‌ಸಂಗ್ ಕಂಪನಿಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಹೊಸ ದೈತ್ಯ ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯದ ಗ್ಯಾಲಕ್ಸಿ M51 ಸ್ಮಾರ್ಟ್‌ಫೋನ್ ಈಗಾಗಲೇ ಗ್ರಾಹಕರನ್ನು ಆಕರ್ಷಿಸಿದೆ. ಈ ಸ್ಮಾರ್ಟ್‌ಫೋನ್ ಇಂದು (ಸೆ.18) ಜನಪ್ರಿಯ ಇ-ಕಾಮರ್ಸ್ ತಾಣ ಅಮೆಜಾನ್ ಮತ್ತು ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಧ್ಯಾಹ್ನ 12ರಂದು ಮಾರಾಟ ಪ್ರಾರಂಭಿಸಿಲಿದೆ. ಇನ್ನು ಈ ಸ್ಮಾರ್ಟ್‌ಫೋನ್ 7,000mAh ಬ್ಯಾಟರಿ ಮತ್ತು ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ.

ಹೌದು, ಸ್ಯಾಮ್‌ಸಂಗ್ ಕಂಪೆನಿಯ ಗ್ಯಾಲಕ್ಸಿ M51 ಸ್ಮಾರ್ಟ್‌ಫೋನ್ ಇಂದು ಭಾರತದಲ್ಲಿ ಸೇಲ್ ಆರಂಭಿಸಲಿದೆ. ಈ ಸ್ಮಾರ್ಟ್‌ಫೋನ್ 6GB RAM ಮತ್ತು 8GB RAM ಜೊತೆಗೆ 128GB ಆಂತರಿಕ ಸ್ಟೋರೇಜ್ ಸಾಮರ್ಥ್ಯದ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ. ಇದರೊಂದಿಗೆ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730 ಪ್ರೊಸೆಸರ್ ಅನ್ನು ಒಳಗೊಂಡಿರುವುದು ಪ್ಲಸ್ ಪಾಯಿಂಟ್ ಆಗಿದೆ. ಇನ್ನು ಗ್ಯಾಲಕ್ಸಿ M51 ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳು ಹೇಗಿವೆ ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ
ಗ್ಯಾಲಕ್ಸಿ M51 ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಹೊಂದಿರುವ 6.5 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಜೊತೆಗೆ ಸೂಪರ್ sAMOLED ಇನ್‌ಫಿನಿಟಿ O ಡಿಸ್‌ಪ್ಲೇ ಹೊಂದಿದೆ. ಈ ಫೋನಿನ ಡಿಸ್‌ಪ್ಲೇ ಅನುಪಾತವು 19.5:9 ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅನುಪಾತವು 86.7% ಪರ್ಸೆಂಟ್ ಆಗಿದೆ.

ಪ್ರೊಸೆಸರ್ ದಕ್ಷತೆ
ಗ್ಯಾಲಕ್ಸಿ M51 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730 ಪ್ರೊಸೆಸರ್ ಹೊಂದಿದ್ದು, ಒನ್UI ಜೊತೆ ಆಂಡ್ರಾಯ್ಡ್ 10 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಫೋನ್ 6GB RAM ಮತ್ತು 128GB ಆಂತರಿಕ ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಹಾಗೆಯೇ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶ ಇದೆ.

ಕ್ವಾಡ್ ಕ್ಯಾಮೆರಾ ಸೆನ್ಸಾರ್
ಗ್ಯಾಲಕ್ಸಿ M51 ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಆಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 64ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 12ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಇನ್ನು ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾವು ಕ್ರಮವಾಗಿ 5ಎಂಪಿ ಸೆನ್ಸಾರ್ ಬಲವನ್ನು ಪಡೆದಿವೆ. ಇದರೊಂದಿಗೆ ಸೆಲ್ಫಿಗಾಗಿ 32ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ಗ್ಯಾಲಕ್ಸಿ M51 ಸ್ಮಾರ್ಟ್‌ಫೋನ್ 7000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ ಅಪ್ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ 25W ಸಾಮರ್ಥ್ಯದ ಕ್ವಿಕ್ ಚಾರ್ಜಿಂಗ್ ಸೌಲಭ್ಯವನ್ನು ನೀಡಿದೆ. ಇದರೊಂದಿಗೆ ಸೈಡ್ ಮೌಂಟ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಆಂಡ್ರಾಯ್ಡ್ 10 ಓಎಸ್, 4G VoLTE, ವೈಫೈ, ಬ್ಲೂಟೂತ್, ಜಿಪಿಎಸ್ ಆಡಿಯೊ ಜಾಕ್ ಸೇರಿದಂತೆ ಇತ್ತೀಚಿನ ಅಗತ್ಯ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M51 ಬೆಲೆ 6GB RAM ರೂಪಾಂತರಕ್ಕೆ 24,999ರೂ, ಮತ್ತು 8GB RAM ಆಯ್ಕೆಗೆ 26,999 ರೂ. ಬೆಲೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಎಲೆಕ್ಟ್ರಿಕ್ ಬ್ಲೂ ಮತ್ತು ಸೆಲೆಸ್ಟಿಯಲ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಲಭ್ಯ.


Click it and Unblock the Notifications








