ಆಕರ್ಷಕ ಬೆಲೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಲೈಟ್ ಫೋನ್ ಲಭ್ಯ!
ದಕ್ಷಿಣ ಕೊರಿಯಾ ಟೆಕ್ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆಯ ಗ್ಯಾಲಕ್ಸಿ ನೋಟ್ 10 ಸರಣಿಯ ಸ್ಮಾರ್ಟ್‌ಫೋನ್‌ಗಳು ಫ್ಲ್ಯಾಗ್‌ಶಿಫ್ ವರ್ಗದಲ್ಲಿ ಭಾರಿ ಸದ್ದು ಮಾಡಿವೆ. ಅವುಗಳಲ್ಲಿ ಗ್ಯಾಲಕ್ಸಿ ನೋಟ್ 10 ಲೈಟ್ ಸ್ಮಾರ್ಟ್‌ಫೋನ್ ಹೈ ಎಂಡ್ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್ ಆರಂಭಿಕ ವೇರಿಯಂಟ್ ಬೆಲೆಯು 39,999ರೂ. ಆಗಿದ್ದು, ಆದ್ರೆ ಗ್ರಾಹಕರು ಇದೀಗ ಭರ್ಜರಿ ರಿಯಾಯಿತಿಯಲ್ಲಿ ಪಡೆಯಬಹುದಾಗಿದೆ.

ಹೌದು, ಸ್ಯಾಮ್‌ಸಂಗ್ ಸಂಸ್ಥೆ 'ಗ್ಯಾಲಕ್ಸಿ ನೋಟ್ 10 ಲೈಟ್' ಸ್ಮಾರ್ಟ್‌ಫೋನ್ ಅನ್ನು ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಜನಪ್ರಿಯ ಇ ಕಾಮರ್ಸ್ ತಾಣ ಅಮೆಜಾನ್‌ನಲ್ಲಿ 5000ರೂ. ಕ್ಯಾಶ್‌ಬ್ಯಾಕ್ ಸೌಲಭ್ಯದ ಆಯ್ಕೆ ನೀಡಿದೆ. ಹೀಗಾಗಿ 6GB RAM ಸಾಮರ್ಥ್ಯದ ಬೇಸ್ ವೇರಿಯಂಟ್ ಅನ್ನು 34,999ರೂ.ಗಳಿಗೆ ಖರೀದಿಸಬಹುದಾಗಿದೆ. ಹಾಗೆಯೇ ಹೈ ಎಂಡ್ ವೇರಿಯಂಟ್ ಫೋನ್ ಅನ್ನು 36,999ರೂ.ಗಳಿಗೆ ಖರೀದಿಸಬಹುದಾಗಿದೆ. ಅಂದಹಾಗೇ ಕ್ಯಾಶ್‌ಬ್ಯಾಕ್ ಕೊಡುಗೆ ಪ್ರಸ್ತುತ ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ದಾರರಿಗೆ ಮಾತ್ರ ಅನ್ವಯಿಸುತ್ತದೆ. ಸಿಟಿಬ್ಯಾಂಕ್‌ನಿಂದ ಈ ಕೊಡುಗೆ 2020 ರ ಜೂನ್ 13 ರಿಂದ ಆಗಸ್ಟ್ 6, 2020 ರವರೆಗೆ ಮಾನ್ಯವಾಗಿರುತ್ತದೆ ಮತ್ತು ಖರೀದಿದಾರರು 90 ದಿನಗಳಲ್ಲಿ ತಮ್ಮ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಈ ಫೋನಿನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ಮತ್ತು ಡಿಸೈನ್
ಗ್ಯಾಲಕ್ಸಿ ನೋಟ್ 10 ಲೈಟ್ ಸ್ಮಾರ್ಟ್‌ಫೋನ್ 1440 x 3040 ಪಿಕ್ಸಲ್ ಸಾಮರ್ಥ್ಯದೊಂದಿಗೆ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಹೊಂದಿದ್ದು, ಡಿಸ್‌ಪ್ಲೇಯು ಎಡ್ಜ್ ಡು ಎಡ್ಜ್ ಇನ್‌ಫಿನಿಟಿ O ಡಿಸ್‌ಪ್ಲೇ ಮಾದರಿಯನ್ನು ಒಳಗೊಂಡಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 394ppi ಆಗಿದ್ದು, ಡಿಸ್‌ಪ್ಲೇಯಿಂದ ಬಾಹ್ಯ ಬಾಡಿಯ ನಡುವಿನ ಅಂತರವು ಶೇ.88.3%ಆಗಿದೆ. ಇನ್ನು ಡಿಸ್‌ಪ್ಲೇಯ ಅನುಪಾತವು 19:9 ಆಗಿದ್ದು, ಸ್ಕ್ರೀನ್ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ 6 ಒಳಗೊಂಡಿದೆ.

ಪ್ರೊಸೆಸರ್ ಸಾಮರ್ಥ್ಯ
ಗ್ಯಾಲಕ್ಸಿ ನೋಟ್ 10 ಲೈಟ್ ಸ್ಮಾರ್ಟ್‌ಫೋನ್ ಕಂಪನಿಯ Exynos 9810 ಚಿಪ್‌ಸೆಟ್ ಸಾಮರ್ಥ್ಯದ ಪ್ರೊಸೆಸರ್ ಹೊಂದಿದ್ದು, ಅದಕ್ಕೆ ಪೂರಕವಾಗಿ ಒನ್ UI 2.0 ಬೆಂಬಲಿತ ಆಂಡ್ರಾಯ್ಡ್ 10 ಓಎಸ್ ಸಪೋರ್ಟ್ ಇದೆ. ಇನ್ನು ಈ ಫೋನ್ 6GB RAM ಮತ್ತು 8GB RAM ಆಯ್ಕೆಯನ್ನು ಹೊಂದಿದ್ದು, 128GB ಆಂತರಿಕ ಸ್ಟೋರೇಜ್ ಸಾಮರ್ಥ್ಯ ಪಡೆದಿದೆ. ಎಸ್‌ಡಿ ಕಾರ್ಡ್ ಬಳಸಿ ಬಾಹ್ಯ ಮೆಮೊರಿಯನ್ನು 1TB ವರೆಗೂ ವಿಸ್ತರಿಸುವ ಅವಕಾಶ ಸಹ ಇದೆ.

ಸ್ಪೆಷಲ್ ಕ್ಯಾಮೆರಾ
ಗ್ಯಾಲಕ್ಸಿ ನೋಟ್ 10 ಲೈಟ್ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಒಟ್ಟು ಮೂರು ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಮುಖ್ಯ ಅಲ್ಟ್ರಾ ವೈಲ್ಡ್ ಲೆನ್ಸ್ ಬೆಂಬಲದೊಂದಿಗೆ 12ಎಂಪಿ ಸೆನ್ಸಾರ್ ಹೊಂದಿದೆ. ಇನ್ನು ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳೆರಡು ಸಹ ಕ್ರಮವಾಗಿ 12ಎಂಪಿಯ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿವೆ. ಇದರೊಂದಿಗೆ ಸೆಲ್ಫಿಗಾಗಿ 32ಎಂಪಿಯ ಸೆನ್ಸಾರ್ ಕ್ಯಾಮೆರಾವನ್ನು ಒಳಗೊಂಡಿದೆ. OIS ಸೇರಿದಂತೆ ಅತ್ಯುತ್ತಮ ಕ್ಯಾಮೆರಾ ಫೀಚರ್ಸ್‌ಗಳನ್ನು ಪಡೆದಿದೆ.

ಬ್ಯಾಟರಿ ಲೈಫ್
ಗ್ಯಾಲಕ್ಸಿ ನೋಟ್ 10 ಲೈಟ್ ಸ್ಮಾರ್ಟ್‌ಫೋನ್ 4,500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ. ಹಾಗೆಯೇ ಗ್ಯಾಲಾಕ್ಸಿ ನೋಟ್ ಸರಣಿ ಫೋನ್‌ಗಳಂತೆ ಈ ಫೋನಿಗೂ S ಪೆನ್ ಸೌಲಭ್ಯವನ್ನು ನೀಡಲಾಗಿದ್ದು, ಈ ಎಸ್ ಪೆನ್ ಬ್ಲೂಟೂತ್ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದುಕೊಂಡಿದೆ. ಸುಲಭವಾಗಿ ಮ್ಯೂಸಿಕ್, ವಿಡಿಯೊ, ಕ್ಯಾಮೆರಾ ನಿಯಂತ್ರಿಸಬಹುದಾಗಿದೆ. ಈ ಪೆನ್ ಆಯ್ಕೆ ಬಳಸಿ ನ್ಯಾವಿಗೇಶನ್ ಸಹ ಮ್ಯಾನೇಜ್ ಮಾಡಬಹುದು.


Click it and Unblock the Notifications








