ಬಂದೇ ಬಿಡ್ತು Samsung Galaxy Ring.. ಅಚ್ಚರಿಯ ಬೆಲೆ, ಆಕರ್ಷಕ ಫೀಚರ್ಸ್!
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ತನ್ನ ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್ ರಿಂಗ್ (Samsung Galaxy Ring) ಅನ್ನು ಭಾರತದಲ್ಲಿ ಘೋಷಿಸಿದೆ. ಈ ಸ್ಮಾರ್ಟ್ ರಿಂಗ್ ಅನ್ನು ಜಾಗತಿಕವಾಗಿ ಗ್ಯಾಲಕ್ಸಿ Z ಫೋಲ್ಡ್ 6 ಮತ್ತು ಗ್ಯಾಲಕ್ಸಿ Z ಫ್ಲಿಪ್ 6 ಫೋನ್‌ಗಳ ಜೊತೆಗೆ ಬಿಡುಗಡೆ ಮಾಡಿತ್ತು. ಆದರೆ ಇದೀಗ ದೇಶಿಯ ಮಾರುಕಟ್ಟೆಗೆ ಘೋಷಣೆ ಮಾಡಿದ್ದು, ಭಾರತದಲ್ಲಿ ಖರೀದಿಗೆ ಲಭ್ಯ ಇದೆ. ಆದರೆ ಈ ರಿಂಗ್ ಬೆಲೆಯು ಗ್ರಾಹಕರಿಗೆ ಅಚ್ಚರಿ ಮೂಡಿಸಲಿದೆ.
ಹೌದು, ಸ್ಯಾಮ್‌ಸಂಗ್ ಸಂಸ್ಥೆಯ ಗ್ಯಾಲಕ್ಸಿ ಸ್ಮಾರ್ಟ್ ರಿಂಗ್ (Samsung Galaxy Ring) ಈಗ ಭಾರತದಲ್ಲಿ ಲಭ್ಯ ಇದೆ. ಇದು ಗ್ಯಾಲಕ್ಸಿ AI ಸಪೋರ್ಟ್ ಪಡೆದಿದ್ದು, ಹಾಗೆಯೇ ಇದರ ವ್ಯಾಪಕವಾದ ಆರೋಗ್ಯ ಮತ್ತು ಫಿಟ್‌ನೆಸ್ ಮಾನಿಟರಿಂಗ್ ಫೀಚರ್ಸ್‌ಗಳು ಪ್ರಮುಖ ಹೈಲೈಟ್ ಆಗಿದೆ. ಇದಲ್ಲದೇ, ಗ್ಯಾಲಕ್ಸಿ ರಿಂಗ್ ಅನ್ನು ಕಂಪನಿಯು 24/7 ಆರೋಗ್ಯ ಮತ್ತು ಫಿಟ್‌ನೆಸ್ ಡಿವೈಸ್ ಎಂದು ಹೆಸರಿಸಿದೆ. ಈ ಡಿವೈಸ್ ಕುರಿತಾಗಿ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ಬೆಲೆ
ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ (Samsung Galaxy Ring) ಬೆಲೆಯು 38,999ರೂ. ಗಳು ಆಗಿದೆ. ಈ ಡಿವೈಸ್ ಒಂಬತ್ತು ಗಾತ್ರದ ಅಳತೆಗಳಲ್ಲಿ ಲಭ್ಯವಿದ್ದು, ಅವು ಕ್ರಮವಾಗಿ ಗಾತ್ರ 5 ರಿಂದ ಗಾತ್ರ 13 ರವರೆಗೆ ಲಭ್ಯವಿದೆ. ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ಮೂರು ಕಲರ್ ಆಯ್ಕೆಗಳಲ್ಲಿ ಲಭ್ಯ ಇದ್ದು, ಅವುಗಳು ಕ್ರಮವಾಗಿ ಟೈಟಾನಿಯಂ ಬ್ಲ್ಯಾಕ್, ಟೈಟಾನಿಯಂ ಸಿಲ್ವರ್ ಮತ್ತು ಟೈಟಾನಿಯಂ ಗೋಲ್ಡ್ ಆಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ಲಭ್ಯತೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ಡಿವೈಸ್ ಅನ್ನು ಖರೀದಿದಾರರು ಆನ್‌ಲೈನ್ ಸ್ಟೋರ್, ಅಮೆಜಾನ್ ಇಂಡಿಯಾ, ಫ್ಲಿಪ್‌ಕಾರ್ಟ್ ಮತ್ತು ಸ್ಯಾಮ್‌ಸಂಗ್ ಕಂಪನಿಯ ಅಧಿಕೃತ ರೀಟೇಲ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಿರುತ್ತದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ಫೀಚರ್ಸ್ ಹೀಗಿವೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ಟೈಟಾನಿಯಂ ಫಿನಿಶ್ ರಚನೆ ಪಡೆದಿದ್ದು, ವರ್ಧಿತ ಬಾಳಿಕೆ ನೀಡಲಿದೆ. ಅಲ್ಲದೇ ಇದು IP68 ನೀರು ಮತ್ತು ಧೂಳು ನಿರೋಧಕವಾಗಿದೆ ಹಾಗೆಯೇ ಅದರ 10ATM ರೇಟಿಂಗ್‌ನೊಂದಿಗೆ 100 ಮೀಟರ್‌ಗಳಷ್ಟು ಆಳವನ್ನು ತಡೆದುಕೊಳ್ಳಬಲ್ಲದು. ಇನ್ನು ಈ AI ಚಾಲಿತ ಫೀಚರ್ಸ್‌ಗಳೊಂದಿಗೆ ಸಜ್ಜುಗೊಂಡಿದೆ. ಇದು ಸ್ಯಾಮ್‌ಸಂಗ್‌ನ ಹೆಲ್ತ್ AI ಆಯ್ಕೆಯ ಜೊತೆಗೆ ಲಭ್ಯ. ಇದು ಬಳಕೆದಾರರಿಗೆ ವೈಯಕ್ತಿಕಗೊಳಿಸಿದ ಶಿಫಾರಸುಗಳು ಮತ್ತು ಕ್ಷೇಮ ಸಲಹೆಗಳೊಂದಿಗೆ ನೈಜ-ಸಮಯದ ಒಳನೋಟಗಳನ್ನು ನೀಡುತ್ತದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ಮೂಲಭೂತವಾಗಿ ಮೂರು ಸೆನ್ಸಾರ್ ಅನ್ನು ಬಳಕೆ ಮಾಡುತ್ತದೆ. ಮುಖ್ಯವಾಗಿ ಬಳಕೆದಾರರ ಹೃದಯ ಬಡಿತವನ್ನು ಮೇಲ್ವಿಚಾರಣೆ ಮಾಡಲು ಆಪ್ಟಿಕಲ್ ಬಯೋ ಸಿಗ್ನಲ್ ಸೆನ್ಸಾರ್, ಅಕ್ಸೆಲೆರೊಮೀಟರ್ ಹಾಗೂ ಚರ್ಮದ ತಾಪಮಾನ ಸೆನ್ಸಾರ್ ಬಳಕೆ ಮಾಡುತ್ತದೆ. ಇನ್ನು ಗ್ಯಾಲಕ್ಸಿ ರಿಂಗ್ (Galaxy Ring) ಆರಂಭಿಕ ಗಾತ್ರ 5 ಕ್ಕೆ 2.3 ಗ್ರಾಂ ತೂಕ ಹೊಂದಿದೆ. ಅಲ್ಲದೇ ಗರಿಷ್ಠ ಗಾತ್ರ 13 ಗೆ 3 ಗ್ರಾಂ ತೂಕ ಪಡೆದಿದೆ.
ಹಾಗರಯೇ ಈ ಸ್ಮಾರ್ಟ್ ರಿಂಗ್ ಚಾರ್ಜಿಂಗ್ ಸ್ಟೇಟಸ್ ಸೂಚಿಸಲು LED ಲೈಟಿಂಗ್ ಸೌಲಭ್ಯದ ಜೊತೆಗೆ ಕ್ಲಾಮ್‌ಶೆಲ್ ಚಾರ್ಜಿಂಗ್ ಕೇಸ್ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಅಂದಹಾಗೆ ಈ ಗ್ಯಾಲಕ್ಸಿ ರಿಂಗ್ ಒಂದೇ ಪೂರ್ಣ ಚಾರ್ಜ್‌ನಲ್ಲಿ 7 ದಿನಗಳ ವರೆಗೆ ಬ್ಯಾಟರಿ ಬ್ಯಾಕ್‌ಅಪ್ ಅವಧಿ ಒದಗಿಸಲಿದೆ.


Click it and Unblock the Notifications








