Samsung: ಸ್ಯಾಮ್‌ಸಂಗ್‌ನ ಈ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗೆ ಬೃಹತ್ ಡಿಸ್ಕೌಂಟ್! ಕರ್ವ್ಡ್ ಡಿಸ್‌ಪ್ಲೇ.. 8GB RAM
ಸ್ಯಾಮ್‌ಸಂಗ್(Samsung) ಫೋನ್‌ಗಳೆಂದರೆ ಭಾರತೀಯರಿಗೆ ವಿಶೇಷವಾದ ಪ್ರೀತಿ. ಅದರಲ್ಲೂ ಸ್ಯಾಮ್‌ಸಂಗ್ ಭಿನ್ನ ರೀತಿಯ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಈ ನಡುವೆ ಬಹು ಜನಪ್ರಿಯವಾಗಿರುವ ಸ್ಯಾಮ್‌ಸಂಗ್‌ನ ಈ ಫೋನ್‌ಗೆ ಅಮೆಜಾನ್‌ನಲ್ಲಿ ಅಫರ್ ನೀಡಲಾಗಿದೆ..
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ S10 ಪ್ಲಸ್ (Samsung Galaxy S10 Plus) ಸ್ಮಾರ್ಟ್‌ಫೋನ್‌ಗೆ ಭರ್ಜರಿ ರಿಯಾಯಿತಿ ನೀಡಲಾಗಿದೆ. ಅಂದರೆ 8GB RAM ಆಯ್ಕೆಯ ಈ ಫೋನ್‌ಗೆ 54% ಡಿಸ್ಕೌಂಟ್ ನೀಡಲಾಗಿದ್ದು, ಈ ಸ್ಮಾರ್ಟ್‌ಫೋನ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಹಾಗೂ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಸೇರಿದಂತೆ ವಿಶೇಷ ಪ್ರೀಮಿಯಂ ಫೀಚರ್ಸ್‌ಗಳನ್ನು ಈ ಫೋನ್ ಪಡೆದಿಕೊಂಡಿದೆ. ಹಾಗಿದ್ರೆ, ಈ ಫೋನ್ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂದು ನೋಡೋಣ ಬನ್ನಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S10 ಪ್ಲಸ್ ಆಫರ್ ವಿವರ: ಈ ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ (Amazon) 79,999ರೂ.ಗಳ ಸಾಮಾನ್ಯ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಆದರೆ ನೀವು ಇದನ್ನು ಬಹಳ ಕಡಿಮೆ ಬೆಲೆಗೆ ಅಂದರೆ 36,699 ರೂ.ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ಇದಕ್ಕೆ ಅಮೆಜಾನ್‌ನಲ್ಲಿ 54% ರಷ್ಟು ರಿಯಾಯಿತಿ ನೀಡಲಾಗಿದ್ದು, ಈ ಮೂಲಕ ನೀವು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.
ಇಷ್ಟೇ ಅಲ್ಲದೆ ಬ್ಯಾಂಕ್ ಆಫರ್ ಹಾಗೂ ವಿನಿಯಮ ಆಫರ್ ಸಹ ಲಭ್ಯ ಇದ್ದು, ಇದರಿಂದ ನೀವು 34,000 ರೂ.ವರೆಗೂ ಉಳಿತಾಯ ಮಾಡಬಹುದಾಗಿದೆ. ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 750 ವರೆಗೆ ರಿಯಾಯಿತಿ ಸಿಗಲಿದೆ. ಹೆಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು 9 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ಇಎಮ್‌ಐ ವ್ಯವಹಾರದ ಮೇಲೆ 500 ರೂ.ಗಳ ಹೆಚ್ಚುವರಿ ರಿಯಾಯಿತಿ ಲಭ್ಯ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S10 ಪ್ಲಸ್ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ ಬೆರಗುಗೊಳಿಸುವ 6.4 ಇಂಚಿನ ಕರ್ವ್ಡ್ ಕ್ವಾಡ್ ಹೆಚ್‌ಡಿ + ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು 526 PPI ನ ಪಿಕ್ಸೆಲ್ ಸಾಂದ್ರತೆ ಮತ್ತು 1,440 x 3,040 ಪಿಕ್ಸೆಲ್ ಸ್ಕ್ರೀನ್‌ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 19:9 ಆಕಾರ ಅನುಪಾತ ಮತ್ತು ಗೊರಿಲ್ಲಾ ಗ್ಲಾಸ್ v6 ರಕ್ಷಣೆಯೊಂದಿಗೆ ಕಾಣಿಸಿಕೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S10 ಪ್ಲಸ್ ಪ್ರೊಸೆಸರ್ ವಿವರ: ಈ ಸ್ಯಾಮ್‌ಸಂಗ್ ಫೋನ್ ಕ್ವಾಡ್-ಕೋರ್, ಎರಡು ಡ್ಯುಯಲ್-ಕೋರ್ ಮತ್ತು ಒಂದು ಸಿಪಿಯು ಕ್ರಮವಾಗಿ 2.73GHz, 2.31GHz ಮತ್ತು 1.95GHz ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು ಎಕ್ಸಿನೋಸ್ 9 ಅಕ್ಟಾ 9820 ಸಿಪಿಯು (Exynos 9 Acta 9820 CPU) ನಲ್ಲಿ ಅಳವಡಿಸಲಾಗಿದೆ. ಇದರೊಂದಿಗೆ 8GB RAM ಮತ್ತು ಮಾಲಿ G76 MP12 ಸಿಪಿಯು ಬಲ ಪಡೆದಿರುವುದರಿಂದ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಈ ಫೋನ್‌ನಲ್ಲಿ ನಿರೀಕ್ಷೆ ಮಾಡಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S10 ಪ್ಲಸ್ ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, 12 ಮೆಗಾಪಿಕ್ಸೆಲ್, 12 ಮೆಗಾಪಿಕ್ಸೆಲ್ ಮತ್ತು 16 ಮೆಗಾಪಿಕ್ಸೆಲ್ ಆಯ್ಕೆ ಪಡೆದುಕೊಂಡಿದ್ದು, ಎರಡು ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅಂದರೆ 10 ಮೆಗಾಪಿಕ್ಸೆಲ್ ಮತ್ತು 8 ಮೆಗಾಪಿಕ್ಸೆಲ್ ರೆಸಲ್ಯೂಶನ್‌ಗಳನ್ನು ಹೊಂದಿದ್ದು, ಡಿಎಸ್‌ಎಲ್‌ಆರ್ ಕ್ಯಾಲಿಬರ್ ಚಿತ್ರಗಳನ್ನು ಇದು ಸೆರೆಹಿಡಿಯುತ್ತವೆ.
ಉಳಿದಂತೆ ಈ ಸ್ಮಾರ್ಟ್‌ಫೋನ್ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,100mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಇದರ ಜೊತೆಗೆ ಸುಧಾರಿತ ಬ್ಲೂಟೂತ್ ಆವೃತ್ತಿ, ವೈ-ಫೈ ಫೀಚರ್ಸ್, ಆಡಿಯೋ ಜಾಕ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಈ ಫೋನ್ ಹೊಂದಿದೆ.


Click it and Unblock the Notifications








