ಸ್ಯಾಮ್‌ಸಂಗ್ ಗ್ಯಾಲಕ್ಸಿ S20 ಪ್ಲಸ್ BTS ಮಾಡೆಲ್ ಬೆಲೆಯಲ್ಲಿ ಭಾರಿ ಇಳಿಕೆ!
ಸ್ಯಾಮ್‌ಸಂಗ್ ಸಂಸ್ಥೆಯು ಬಿಡುಗಡೆ ಮಾಡಿರುವ ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಗ್ಯಾಲಕ್ಸಿ S20 ಪ್ಲಸ್ ಸಹ ಒಂದಾಗಿದೆ. ಹೈ ಎಂಡ್ ಫೀಚರ್ಸ್‌ಗಳಿಂದ ಈಗಾಗಲೇ ಗ್ರಾಹಕರ ಗಮನ ಸೆಳೆದಿರುವ ಈ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಈಗ ಭರ್ಜರಿ ಇಳಿಕೆ ಆಗಿದೆ. ಈ ಮೂಲಕ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸಿದೆ.

ಹೌದು, ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ S20 ಪ್ಲಸ್ BTS ಸ್ಮಾರ್ಟ್‌ಫೋನ್ ಮಾಡೆಲ್ ಬೆಲೆಯಲ್ಲಿ 10,000ರೂ. ಕಡಿತ ಮಾಡಲಾಗಿದೆ. ಗ್ಯಾಲಕ್ಸಿ S20 ಪ್ಲಸ್ BTS ಫೋನ್ 128GB ಸ್ಟೋರೇಜ್ ವೇರಿಯಂಟ್ ಬೆಲೆಯು 87,999ರೂ. ಆಗಿತ್ತು. ಆದ್ರೆ ಇದೀಗ ಬೆಲೆ ಇಳಿಕೆಯಿಂದಾಗಿ 77,999ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯ. ಹಾಗೆಯೇ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಕ್ರೆಡಿಟ್ / ಡೆಬಿಟ್ ಕಾರ್ಡ್ ಖರೀದಿಯಲ್ಲಿ ಕ್ಯಾಶ್‌ಬ್ಯಾಕ್ ಸಹ ದೊರೆಯಲಿದೆ. ಇನ್ನುಳಿದಂತೆ ಈ ಫೋನಿನ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ
ಗ್ಯಾಲಕ್ಸಿ S20 ಪ್ಲಸ್ BTS ಸ್ಮಾರ್ಟ್‌ಫೋನ್ 6.7-ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಇನ್ಫಿನಿಟಿ-ಒ ಡೈನಾಮಿಕ್ ಅಮೋಲೆಡ್ 2x ಡಿಸ್‌ಪ್ಲೇ ಆಗಿದ್ದು, ಉತ್ತಮ ವಿನ್ಯಾಸವನ್ನ ಒಳಗೊಂಡಿದೆ. ಇದಲ್ಲದೆ ಬಳಕೆದಾರರಿಗೆ ವೀಡಿಯೋ ಕರೆಗಳು ಹಾಗೂ ವೀಡಿಯೋ ವೀಕ್ಷಣೆಯಲ್ಲಿ ಉತ್ತಮ ಅನುಭವ ನಿಡುವ ಯೋಗ್ಯವಾದ ಡಿಸ್‌ಪ್ಲೇ ಮಾದರಿಯನ್ನ ಹೊಂದಿದೆ.

ಪ್ರೊಸೆಸರ್ ಕಾರ್ಯ
ಗ್ಯಾಲಕ್ಸಿ S20 ಪ್ಲಸ್ BTS ಫೋನ್ ಎಕ್ಸಿನೋಸ್ 990 ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ ಈ ಸ್ಮಾರ್ಟ್‌ಫೋನ್ 8GB RAM ಮತ್ತು 12GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನ ಹೊಂದಿದೆ. ಇದಲ್ಲದೆ ಸಂಗ್ರಹ ಸಮರ್ಥ್ಯವನ್ನ ಮೆಮೊರಿ ಕಾರ್ಡ್ ಮೂಲಕ ವಿಸ್ತರಿಸಿಕೊಲ್ಳುವ ಅವಕಾಶವನ್ನ ಸಹ ನೀಡಲಾಗಿದೆ.

ಕ್ಯಾಮೆರಾ ಸೆನ್ಸಾರ್
ಗ್ಯಾಲಕ್ಸಿ S20 ಪ್ಲಸ್ BTS ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್,ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 10 ಮೆಗಾಪಿಕ್ಸೆಲ್ ಸೆನ್ಸಾರ್ ಸಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ
ಗ್ಯಾಲಕ್ಸಿ S20 ಪ್ಲಸ್ BTS ಫೋನ್ 4,500 mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದ್ದು, ವೇಗದ ಚಾರ್ಜಿಂಗ್ ಬೆಂಬಲದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈಫೈ, ಹಾಟ್‌ಸ್ಪಾಟ್, ಅನ್ನು ಬೆಂಬಲಿಸಲಿದೆ.


Click it and Unblock the Notifications








