Home
ಸುದ್ದಿಜಾಲ

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಪ್ಲಸ್‌ ಫೋನ್‌ ಈಗ ಭಾರೀ ಡಿಸ್ಕೌಂಟ್‌ನಲ್ಲಿ ಲಭ್ಯ!

ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಕಂಪನಿಯು ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ ಶ್ರೇಣಿಗಳಿಂದ ಗುರುತಿಸಿಕೊಂಡಿದೆ. ಕಂಪನಿಯು ತನ್ನ ಫೋನ್‌ಗಳಿಗೆ ಆಫರ್, ಡಿಸ್ಕೌಂಟ್‌ಗಳನ್ನು ನೀಡುವ ಮೂಲಕ ಆಕರ್ಷಿಸಿದೆ. ಇದೀಗ ಅಂತಹದೊಂದು ಭರ್ಜರಿ ಕೊಡುಗೆಯನ್ನು ಜನಪ್ರಿಯ ಗ್ಯಾಲಕ್ಸಿ S21 ಪ್ಲಸ್‌ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ ಮೇಲೆ ಘೋಷಿಸಿದೆ.

ಸಂಸ್ಥೆಯು

ಹೌದು, ಸ್ಯಾಮ್‌ಸಂಗ್ ಸಂಸ್ಥೆಯು ಗ್ಯಾಲಕ್ಸಿ S21 ಪ್ಲಸ್‌ ಫೋನಿನಲ್ಲಿ ಭಾರತದಲ್ಲಿ ಈ ರಿಯಾಯಿತಿ ಕೊಡುಗೆಯನ್ನು ಪ್ರಕಟಿಸಿದೆ. ಗ್ರಾಹಕರು ಗ್ಯಾಲಕ್ಸಿ S21 ಪ್ಲಸ್‌ ಖರೀದಿಯ ಮೇಲೆ ಈಗ 10,000ರೂ.ಗಳ ವರೆಗೆ ಇನ್‌ಸ್ಟಂಟ್/ತ್ವರಿತ ಕ್ಯಾಶ್‌ಬ್ಯಾಕ್‌ ಕೊಡುಗೆ ಘೋಷಿಸಿದೆ. ಈ ಕೊಡುಗೆಯಿಂದಾಗಿ 128 ಜಿಬಿ ಸ್ಟೋರೇಜ್‌ ವೇರಿಯಂಟ್‌ 71,999ರೂ.ಗಳಿಗೆ ಮತ್ತು 256 ಜಿಬಿ ಸ್ಟೋರೇಜ್‌ ರೂಪಾಂತರಕ್ಕೆ 75,999ರೂ.ಗಳಿಗೆ ಇಳಿಕೆ ಆಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಸುಲಭ ಇಎಂಐ ಆಯ್ಕೆಗಳೊಂದಿಗೆ ಬರುತ್ತವೆ.

ಸೀಮಿತ ಅವಧಿಯ ಕೊಡುಗೆ

ಸೀಮಿತ ಅವಧಿಯ ಕೊಡುಗೆ

ಗ್ಯಾಲಕ್ಸಿ S21 ಪ್ಲಸ್‌ ಫೋನಿಗೆ ನೀಡಿರುವ ಕ್ಯಾಶ್‌ಬ್ಯಾಕ್‌ ಕೊಡುಗೆಯು ಸೀಮಿತ ಅವಧಿಯದ್ದಾಗಿದೆ. ಇದೇ 2021 ರ ಜೂನ್ 30 ರವರೆಗೆ ಮಾತ್ರ ಲಭ್ಯ ಇರಲಿದೆ. ಇನ್ನು ಸ್ಯಾಮ್‌ಸಂಗ್ ಆನ್‌ಲೈನ್ ಸ್ಟೋರ್, ಸ್ಯಾಮ್‌ಸಂಗ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳು, ಪ್ರಮುಖ ಚಿಲ್ಲರೆ ಅಂಗಡಿಗಳು ಮತ್ತು ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ ಮಾನ್ಯವಾಗಿರುತ್ತದೆ. ಹಾಗಾದರೇ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21 ಪ್ಲಸ್‌ ಫೋನಿನ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್

ಡಿಸ್‌ಪ್ಲೇ ಡಿಸೈನ್

ಗ್ಯಾಲಕ್ಸಿ S21 ಪ್ಲಸ್‌ ಅಲ್ಟ್ರಾ ಸ್ಮಾರ್ಟ್‌ಫೋನ್‌ 1,440x3,200 ಪಿಕ್ಸಲ್‌ ರೆಸಲ್ಯೂಶನ್‌ ಹೊಂದಿರುವ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಜೊತೆಗೆ ಡೈನಾಮಿಕ್ AMOLED 2X ಡಿಸ್‌ಪ್ಲೇ ಹೊಂದಿದೆ. ಈ ಫೋನಿನ ಡಿಸ್‌ಪ್ಲೇ ಅನುಪಾತವು 20:9 ರಷ್ಟು ಆಗಿದೆ.

ಪ್ರೊಸೆಸರ್‌ ದಕ್ಷತೆ

ಪ್ರೊಸೆಸರ್‌ ದಕ್ಷತೆ

ಗ್ಯಾಲಕ್ಸಿ S21 ಪ್ಲಸ್‌ ಸ್ಮಾರ್ಟ್‌ಫೋನ್‌ ಸಂಸ್ಥೆಯ ಆಕ್ಟಾ ಕೋರ್ 5mm Exynos 2100 SoC (ಸ್ನ್ಯಾಪ್‌ಡ್ರಾಗನ್ 888) ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 11 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ 8GB RAM ಮತ್ತು 128GB/256GB ಆಂತರಿಕ ಸಂಗ್ರಹದ ವೇರಿಯಂಟ್ ಆಯ್ಕೆಯನ್ನು ಹೊಂದಿದೆ.

ಕ್ಯಾಮೆರಾ ಸೆನ್ಸಾರ್

ಕ್ಯಾಮೆರಾ ಸೆನ್ಸಾರ್

ಗ್ಯಾಲಕ್ಸಿ S21 ಪ್ಲಸ್‌ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 64 ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳು 12 ಎಂಪಿ ಸೆನ್ಸಾರ್ ಸಾಮರ್ಥ್ಯ ಅನ್ನು ಪಡೆದಿವೆ. ಇದರೊಂದಿಗೆ ಸೆಲ್ಫಿಗಾಗಿ 10 ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಗ್ಯಾಲಕ್ಸಿ S21 ಪ್ಲಸ್‌ ಸ್ಮಾರ್ಟ್‌ಫೋನ್‌ 4,800mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ ಅಪ್ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ ಚಾರ್ಜಿಂಗ್‌ಗಾಗಿ USB ಸಪೋರ್ಟ್‌ ಜೊತೆಗೆ 2.0 ವಾಯರ್‌ಲೆಸ್‌ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರೊಂದಿಗೆ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬಾರೋಮೀಟರ್, ಜಿಯೋಮ್ಯಾಗ್ನೆಟಿಕ್, ಗೈರೋ ಸ್ಕೋಪ್, ಹಾಲ್ ಮತ್ತು ಸಾಮೀಪ್ಯ ಸಂವೇದಕ ಸೇರಿವೆ. ಅಲ್ಟ್ರಾಸಾನಿಕ್ ಫಿಂಗರ್ಪ್ರಿಂಟ್ ಸೆನ್ಸರ್ ಸಹ ಇದೆ.

Best Mobiles in India

English summary
Samsung has announced yet another discount offer on its flagship Galaxy S21+ in India. Here's how you can avail the offer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+