Home
ಸುದ್ದಿಜಾಲ

ಸ್ಯಾಮ್‌ಸಂಗ್‌ನ ಈ ಫೋನ್‌ಗೆ ಬರೋಬ್ಬರಿ 24 ಸಾವಿರ ರಿಯಾಯಿತಿ: ಭರ್ಜರಿ ಆಫರ್‌!

ಸ್ಯಾಮ್‌ಸಂಗ್‌ ಫೋನ್‌ಗಳಿಗೆ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಆಗಾಗ್ಗೆ ಭರ್ಜರಿ ಆಫರ್‌ ಘೋಷಣೆ ಮಾಡಲಾಗುತ್ತದೆ. ಅದರಂತೆ ಸ್ಯಾಮ್ ಸಂಗ್‌ನ ಈ ಪ್ರೀಮಿಯಂ ಫೋನ್ ಮೇಲೆ 24 ಸಾವಿರ ರಿಯಾಯಿತಿ ನೀಡಲಾಗಿದೆ ಎಂದರೆ ನೀವು ನಂಬಲೇಬೇಕು.

ಹೌದು, ಪ್ರಮುಖ ಇ ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ನಲ್ಲಿ ಈ ಆಫರ್ ಘೋಷಣೆ ಮಾಡಲಾಗಿದೆ. ಈ ಮೂಲಕ ಗ್ರಾಹಕರು ದೊಡ್ಡ ಮೊತ್ತದ ಸ್ಮಾರ್ಟ್‌ಫೋನ್‌ ಅನ್ನು ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದು. ಇನ್ನು ಈ ರೀತಿಯ ಪ್ರೀಮಿಯಂ ಫೋನ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಬೆನ್ನಲೇ ಈ ಆಫರ್‌ ಲಭ್ಯ ಆಗುತ್ತಿರುವುದು ಬಹಳಷ್ಟು ಜನರಿಗೆ ಸಂತಸದ ವಿಷಯವಾಗಿದೆ. ಹಾಗಿದ್ರೆ ಸ್ಯಾಮ್‌ಸಂಗ್‌ನ ಯಾವ ಫೋನ್‌ಗೆ ಈ ದೊಡ್ಡ ಆಫರ್‌, ಆ ಫೋನ್‌ನ ಫೀಚರ್ಸ್‌ ಏನು ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್‌ನ ಈ ಫೋನ್‌ಗೆ ಬರೋಬ್ಬರಿ 24 ಸಾವಿರ ರಿಯಾಯಿತಿ: ಭರ್ಜರಿ ಆಫರ್‌!

ಯಾವ ಫೋನ್‌ಗೆ ರಿಯಾಯಿತಿ? :ವಿಶ್ವದ ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿಗಳಲ್ಲಿ ಒಂದಾಗಿರುವ ಸ್ಯಾಮ್‌ಸಂಗ್ ತನ್ನ ಫೋನ್‌ಗಳ ಬೆಲೆಯನ್ನು ತೀವ್ರವಾಗಿ ಕಡಿತಗೊಳಿಸುವ ಮೂಲಕ ತನ್ನ ಗ್ರಾಹಕರ ಮೊಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಅದರಂತೆ ಗ್ಯಾಲಕ್ಸಿ S21 FE (Samsung Galaxy S21 FE 5G) ಫೋನ್‌ಗೆ ಈ ರಿಯಾಯಿತಿ ನೀಡಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE ಫೀಚರ್ಸ್‌: ಈ ಫೋನ್‌ 6.4 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡೈನಾಮಿಕ್ ಅಲ್ಮಾಡ್ 2X ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೆಶ್‌ ರೇಟ್‌ ಜೊತೆಗೆ 240 Hz ಟಚ್‌ ಸ್ಯಾಂಪಲ್‌ ರೇಟ್‌ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಬಳಕೆದಾರರಿಗೆ ಉತ್ತಮ ಪ್ರೀಮಿಯಂ ಅನುಭವ ನೀಡಲಿದೆ.

ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 888 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು , ಆಂಡ್ರಾಯ್ಡ್ 12 ಬೇಸ್ ಒನ್ UI 4 ನಲ್ಲಿ ಕೆಲಸ ಮಾಡುತ್ತದೆ. ಇದರೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಪ್ರೈಮರಿ ಲೆನ್ಸ್, 12 ಮೆಗಾಪಿಕ್ಸೆಲ್ ವೈಡ್ ಲೆನ್ಸ್ ಮತ್ತು 8 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಇದೆ. ಹಾಗೂ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದೆ.

ಸ್ಯಾಮ್‌ಸಂಗ್‌ನ ಈ ಫೋನ್‌ಗೆ ಬರೋಬ್ಬರಿ 24 ಸಾವಿರ ರಿಯಾಯಿತಿ: ಭರ್ಜರಿ ಆಫರ್‌!

ಈ ಎಲ್ಲಾ ವಿಶೇಷ ಫೀಚರ್ಸ್‌ನೊಂದಿಗೆ 4500 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 25W ಚಾರ್ಜಿಂಗ್ ಬೆಂಬಲ ಇದೆ. ಇಷ್ಟು ಮಾತ್ರವಲ್ಲದೆ ಸ್ಮಾರ್ಟ್‌ಫೋನ್‌ಗೆ IP68 ರೇಟಿಂಗ್‌ ನೀಡಲಾಗಿದ್ದು, ಈ ಮೂಲಕ ನೀರು ಮತ್ತು ಧೂಳು ನಿರೋಧಕವಾಗಿದೆ. ಪರಿಣಾಮ ಈ ಫೋನ್‌ ಅನ್ನು ಎಲ್ಲಿ ಬೇಕಾದರೂ ಬಳಕೆ ಮಾಡಬಹುದು. ಹಾಗಿದ್ರೆ, ಮತ್ಯಾಕೆ ತಡ ಇದರ ಆಫರ್‌ ವಿವರ ತಿಳಿಯೋಣ ಬನ್ನಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE ಬೆಲೆ ಹಾಗೂ ಲಭ್ಯತೆ: ಕಳೆದ ವರ್ಷ ಈ ಫೋನ್ ಅನ್ನು ಲಾಂಚ್‌ ಮಾಡಲಾಗಿದ್ದು, ಇದರ ಬೆಲೆ 54 ಸಾವಿರದ 999 ರೂ.ಗಳಾಗಿದೆ. ಆದರೆ ,ಈಗ ಈ ಫೋನ್ 32 ಸಾವಿರದ 989 ರೂಪಾಯಿಗೆ ಮಾರಾಟಕ್ಕೆ ಲಭ್ಯ ಇದೆ. ಅಂದರೆ 8 GB / 128 GB ವೇರಿಯಂಟ್‌ನ ಈ ಫೋನ್ 22 ಸಾವಿರದ 10 ರೂಪಾಯಿಗಳ ದೊಡ್ಡ ರಿಯಾಯಿತಿಯನ್ನು ಪಡೆದುಕೊಂಡಿದೆ.

ಅದಾಗ್ಯೂ ನೀವು ಈ 22 ಸಾವಿರ ರಿಯಾಯಿತಿಯೊಂದಿಗೆ ನೀವು ಇನ್ನೂ ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳಬೇಕು ಎಂದರೆ ಬ್ಯಾಂಕ್ ಕೊಡುಗೆಗಳ ಸಹಾಯ ಪಡೆದುಕೊಳ್ಳಬಹುದು. ಅಂದರೆ HSBC ಕ್ರೆಡಿಟ್ ಕಾರ್ಡ್‌ನಲ್ಲಿ EMI ಆಯ್ಕೆ ನೀಡಲಾಗಿದೆ. ಈ ಮೂಲಕ ನೀವು 7.5 % ಅಥವಾ ಸುಮಾರು 2 ಸಾವಿರ ಹೆಚ್ಚುವರಿ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಇದರಿಂದಾಗಿ 30 ಸಾವಿರದ 989 ರೂಪಾಯಿಗೆ ಈ ಫೋನ್ ಲಭ್ಯ ಇರಲಿದೆ.

ಇಷ್ಟು ರಿಯಾಯಿತಿ ಸಾಲದು ಇನ್ನೂ ಹೆಚ್ಚಿನ ರಿಯಾಯಿತಿ ಬೇಕು ಎಂದಾದರೆ HSBC ಜೊತೆಗೆ, ಇತರ 3 ಬ್ಯಾಂಕ್‌ಗಳ ಕಾರ್ಡ್‌ಗಳಲ್ಲಿ ಈ ಕೊಡುಗೆಯನ್ನು ನೀಡಲಾಗುತ್ತಿದೆ. ಎಚ್‌ಡಿಎಫ್‌ಸಿ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಇಂಡಿಸಿಂಡ್ ಬ್ಯಾಂಕ್‌ಗಳ ಕಾರ್ಡ್‌ಗಳಲ್ಲಿಯೂ ಈ ಕೊಡುಗೆಯನ್ನು ನೀಡಲಾಗುತ್ತಿದೆ. ಈ ಕಾರ್ಡ್‌ನಲ್ಲಿ ಲಭ್ಯವಿರುವ ಕೊಡುಗೆ ಬಳಕೆ ಮಾಡಿಕೊಂಡರೆ ಗ್ಯಾಲಕ್ಸಿ S21 FE ಫೋನ್‌ನಲ್ಲಿ ಒಟ್ಟು 24 ಸಾವಿರದವರೆಗೆ ಡಿಸ್ಕೌಂಟ್‌ ಪಡೆದುಕೊಳ್ಳಬಹುದು. ಇದನ್ನು ಅಮೆಜಾನ್‌ನಲ್ಲಿನ ವಿಶೇಷ ಸೇಲ್‌ನಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
Samsung Galaxy S21 FE phone is heavily discounted on Amazon. The phone sports a 6.4-inch Full HD Plus Dynamic 2X display with 120 Hz refresh rate and 240 Hz touch sample rate option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+