Home
ಸುದ್ದಿಜಾಲ

ಮತ್ತೆ ಹೊಸ ಅವತಾರದಲ್ಲಿ ಲಾಂಚ್‌ ಆಯ್ತು ಸ್ಯಾಮ್‌ಸಂಗ್‌ನ ಈ ಫೋನ್‌!..ಬೆಲೆ ಎಷ್ಟು?

ದಕ್ಷಿಣ ಕೊರಿಯಾದ ಜನಪ್ರಿಯ ಸ್ಯಾಮ್‌ಸಂಗ್‌ ಸಂಸ್ಥೆಯ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21 FE ಸ್ಮಾರ್ಟ್‌ಫೋನ್‌ ಆಕರ್ಷಕ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಗಮನ ಸೆಳೆದಿದೆ. ಸ್ಯಾಮ್‌ಸಂಗ್‌ ಸಂಸ್ಥೆಯು ಈ ಫೋನ್‌ ಅನ್ನು ಇದೀಗ ಅಪ್‌ಡೇಟ್‌ ಮಾಡಿದ್ದು, ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದೆ. ಇನ್ನು ಹೊಸದಾಗಿ ಎಂಟ್ರಿ ಕೊಟ್ಟಿರುವ ಅಪ್‌ಡೇಟ್‌ ಆವೃತ್ತಿ ಫೋನಿನಲ್ಲಿ ಏನಿದೆ ಹೊಸತು? ಬೆಲೆ ಎಷ್ಟಿದೆ?

ಹೌದು, ಸ್ಯಾಮ್‌ಸಂಗ್‌ ಸಂಸ್ಥೆಯು ತನ್ನ ಗ್ಯಾಲಕ್ಸಿ S21 FE ಸ್ಮಾರ್ಟ್‌ಫೋನ್‌ ಅನ್ನು ಹೊಸ ಆವೃತ್ತಿಯಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್‌ ಅಮೊಲೆಡ್‌ ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್‌ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ತ್ರಿವಳಿ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮೂರು ಕ್ಯಾಮೆರಾಗಳು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದ ಪಡೆದಿವೆ.

ಮತ್ತೆ ಹೊಸ ಅವತಾರದಲ್ಲಿ ಲಾಂಚ್‌ ಆಯ್ತು ಸ್ಯಾಮ್‌ಸಂಗ್‌ನ ಈ ಫೋನ್‌!..ಬೆಲೆ ಎಷ್ಟು?

ಅಂದಹಾಗೆ ಗ್ಯಾಲಕ್ಸಿ S21 FE ಅಪ್‌ಡೇಟ್‌ ಆವೃತ್ತಿಯು ಸ್ನ್ಯಾಪ್‌ಡ್ರಾಗನ್‌ 888 SoC ಪ್ರೊಸೆಸರ್‌ ಪಡೆದಿರುವುದು ಪ್ಲಸ್‌ ಪಾಯಿಂಟ್‌ ಹಾಗೂ ಪ್ರಮುಖ ಬದಲಾವಣೆ ಆಗಿದೆ. ಉಳಿದಂತೆ ಬಹುತೇಕ ಆಯ್ಕೆಗಳು ಹಿಂದಿನ ಆವೃತ್ತಿಯಂತೆ ಇವೆ. ಹಾಗಾದರೆ ಈ ಫೋನಿನ ಫೀಚರ್ಸ್‌ಗಳ ಬಗ್ಗೆ ಹಾಗೂ ಬೆಲೆ ಎಷ್ಟು ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ : ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21 FE ಮೊಬೈಲ್‌ 2340 × 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.4 ಇಂಚಿನ AMOLED ಡಿಸ್‌ಪ್ಲೇ ಅನ್ನು ಪಡೆದಿದೆ. ಹಾಗೆಯೇ ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಬೆಂಬಲಿಸುತ್ತದೆ. ಇದಲ್ಲದೆ ಅಂಡರ್ ಡಿಸ್‌ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ.

ಯಾವ ಪ್ರೊಸೆಸರ್‌ ಪವರ್‌ ಇದೆ : ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21 FE ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 888 SoC ಪ್ರೊಸೆಸರ್‌ ಸಾಮರ್ಥ್ಯದ ಆವೃತ್ತಿಯೊಂದಿಗೆ ಲಗ್ಗೆ ಇಟ್ಟಿದೆ. ಪಡೆದುಕೊಂಡಿದೆ. ಇತ್ತೀಚಿನ ಆಂಡ್ರಾಯ್ಡ್‌ ಓಎಸ್‌ ಸಪೋರ್ಟ್‌ ಸಹ ಪಡೆದಿದೆ. ಹಾಗೆಯೇ ಈ ಆವೃತ್ತಿಯು 8GB ಮತ್ತು 256GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆ ಪಡೆದಿದೆ.

ಟ್ರಿಪಲ್‌ ಕ್ಯಾಮೆರಾ ಸೆನ್ಸಾರ್ ಆಯ್ಕೆ : ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21 FE ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಪ್ರಾಥಮಿಕ ಕ್ಯಾಮೆರಾ 12ಎಂಪಿ ಸೆನ್ಸಾರ್‌ ಸಾಮರ್ಥ್ಯ ಅನ್ನು ಹೊಂದಿದೆ. ಹಾಗೆಯೇ ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳು ಸಹ 12ಎಂಪಿ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ 32ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿ ಸೆಲ್ಫಿ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಇತರೆ ಆಯ್ಕೆಗಳ ಮಾಹಿತಿ : ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21 FE ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಹಾಗೂ 15W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್‌ ಆಯ್ಕೆ ಪಡೆದಿದೆ. ಇದರೊಂದಿಗೆ ಇದು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌ಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ : ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21 FE ಮೊಬೈಲ್‌ ಅಪ್‌ಡೇಟ್‌ ಆವೃತ್ತಿಯಲ್ಲಿ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಫೋನಿನ 8 GB + 128 GB ವೇರಿಯಂಟ್ ಬೆಲೆಯು 49,999ರೂ. ಆಗಿದೆ. ಇನ್ನು ಈ ಫೋನ್‌ ಆಲಿವ್, ಗ್ರ್ಯಾಫೈಟ್, ಲ್ಯಾವೆಂಡರ್ ಮತ್ತು ನ್ಯೂ ನೇವಿ ಬ್ಲೂ ಕಲರ್‌ ಆಯ್ಕೆಗಳನ್ನು ಪಡೆದಿದೆ.

Best Mobiles in India

English summary
Samsung Galaxy S21 FE Snapdragon 888 SoC Model Launched In India. price and specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+