Home
ಸುದ್ದಿಜಾಲ

ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಸ್ಮಾರ್ಟ್‌ಫೋನ್ ಸರಣಿ ಖರೀದಿಗೆ ಲಭ್ಯ!

ಸ್ಯಾಮ್‌ಸಂಗ್ ಮೊಬೈಲ್‌ ಸಂಸ್ಥೆಯು ನೂತನವಾಗಿ ಬಿಡುಗಡೆ ಮಾಡಿರುವ ಗ್ಯಾಲಕ್ಸಿ S21 ಸ್ಮಾರ್ಟ್‌ಫೋನ್ ಸರಣಿ ಈಗ ಭಾರತದಲ್ಲಿ ಖರೀದಿಗೆ ಲಭ್ಯವಾಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಸರಣಿಯು ಗ್ಯಾಲಕ್ಸಿ S21, ಗ್ಯಾಲಕ್ಸಿ S21 ಪ್ಲಸ್‌ ಮತ್ತು ಗ್ಯಾಲಕ್ಸಿ S21 ಅಲ್ಟ್ರಾ ಮಾಡೆಲ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ ಕಂಪನಿಯು ತನ್ನ ಗ್ಯಾಲಕ್ಸಿ ಬಡ್ಸ್‌ ಪ್ರೊ ಡಿವೈಸ್‌ಗಳು ಖರೀದಿಗೆ ಲಭ್ಯ ಮಾಡಿದೆ.

ಸ್ಮಾರ್ಟ್‌ಫೋನ್

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಸ್ಮಾರ್ಟ್‌ಫೋನ್ ಸರಣಿಯು ಮೂರು ಮಾಡೆಲ್‌ಗಳ ಆಯ್ಕೆಯನ್ನು ಹೊಂದಿದೆ. ಆರಂಭಿಕ ಗ್ಯಾಲಕ್ಸಿ S21 ಫೋನಿನ 8GB + 128GB ವೇರಿಯಂಟ್‌ ಬೆಲೆಯು 69,999ರೂ. ಆಗಿದೆ. ಹಾಗೆಯೇ 256GB ವೇರಿಯಂಟ್‌ ಬೆಲೆಯು 73,999ರೂ. ಆಗಿದೆ. ಗ್ಯಾಲಕ್ಸಿ S21 ಪ್ಲಸ್‌ ಫೋನ್ 8GB + 128GB ವೇರಿಯಂಟ್‌ ದರವು 81,999ರೂ. ಆಗಿದ್ದು, 8GB + 256GB ವೇರಿಯಂಟ್‌ 85,999ರೂ. ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇನ್ನು ಗ್ಯಾಲಕ್ಸಿ S21 ಅಲ್ಟ್ರಾ ಫೋನ್ 12GB + 128GB ವೇರಿಯಂಟ್‌ ದರವು 1,05,999ರೂ. ಆಗಿದ್ದು, 16GB + 512GB ವೇರಿಯಂಟ್‌ ಬೆಲೆಯು 1,16,999ರೂ. ಆಗಿದೆ.

ಕೊಡುಗೆ ಏನು?..ಎಲ್ಲಿ ಲಭ್ಯ?

ಕೊಡುಗೆ ಏನು?..ಎಲ್ಲಿ ಲಭ್ಯ?

ಗ್ರಾಹಕರು ಗ್ಯಾಲಕ್ಸಿ S21 ಸ್ಮಾರ್ಟ್‌ಫೋನ್ ಸರಣಿಯ ಫೋನ್‌ಗಳು ಅಧಿಕೃತ ಸ್ಯಾಮ್‌ಸಂಗ್ ವೆಬ್‌ಸೈಟ್‌ ಹಾಗೂ ಅಮೆಜಾನ್ ತಾಣಗಳಲ್ಲಿ ಖರೀದಿಸಬಹುದಾಗಿದೆ. ಇದರೊಂದಿಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ ಇತರೆ ಕ್ಯಾಶ್‌ಬ್ಯಾಕ್‌ ಸೌಲಭ್ಯಗಳು ಆಯ್ಕೆ ಸಹ ಇದೆ.

ಗ್ಯಾಲಕ್ಸಿ S21 5G - ಫೀಚರ್ಸ್‌

ಗ್ಯಾಲಕ್ಸಿ S21 5G - ಫೀಚರ್ಸ್‌

ಗ್ಯಾಲಕ್ಸಿ S21 5G ಸ್ಮಾರ್ಟ್‌ಫೋನ್ 6.20 ಇಂಚಿನ ಡಿಸ್‌ಪ್ಲೇ ಹೊಂದಿದೆ. ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾಪಿಕ್ಸೆಲ್ ಪಡೆದಿದೆ. 8GB+128GB ಮತ್ತು 256GB ವೇರಿಯಂಟ್ ಆಯ್ಕೆಗಳು ಇವೆ. 4000mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯವನ್ನು ಪಡೆದಿದೆ.

ಗ್ಯಾಲಕ್ಸಿ S21 ಪ್ಲಸ್‌ 5G - ಫೀಚರ್ಸ್‌

ಗ್ಯಾಲಕ್ಸಿ S21 ಪ್ಲಸ್‌ 5G - ಫೀಚರ್ಸ್‌

ಗ್ಯಾಲಕ್ಸಿ S21 5G ಸ್ಮಾರ್ಟ್‌ಫೋನ್ 6.70 ಇಂಚಿನ ಡಿಸ್‌ಪ್ಲೇ ಹೊಂದಿದೆ. ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾಪಿಕ್ಸೆಲ್ ಪಡೆದಿದೆ. 8GB + 128GB ಮತ್ತು 8GB + 256GB ವೇರಿಯಂಟ್ ಆಯ್ಕೆಗಳು ಇವೆ. 4800mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯವನ್ನು ಪಡೆದಿದೆ.

ಗ್ಯಾಲಕ್ಸಿ S21 ಅಲ್ಟ್ರಾ 5G - ಫೀಚರ್ಸ್‌

ಗ್ಯಾಲಕ್ಸಿ S21 ಅಲ್ಟ್ರಾ 5G - ಫೀಚರ್ಸ್‌

ಗ್ಯಾಲಕ್ಸಿ S21 5G ಸ್ಮಾರ್ಟ್‌ಫೋನ್ 6.80 ಇಂಚಿನ ಡಿಸ್‌ಪ್ಲೇ ಹೊಂದಿದೆ. ಹಿಂಬದಿಯಲ್ಲಿ ಕ್ವಾಡ್‌ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 108ಎಂಪಿ ಸೆನ್ಸಾರ್‌ ಪಡೆದಿದೆ. 12GB + 128GB ಮತ್ತು 16GB + 512GB ವೇರಿಯಂಟ್ ಆಯ್ಕೆಗಳು ಇವೆ. 5,000mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯವನ್ನು ಪಡೆದಿದೆ.

Best Mobiles in India

English summary
Samsung Galaxy S21, Galaxy S21+, Galaxy S21 Ultra, Galaxy Buds Pro Go on Sale in India: Price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+