Home
ಸುದ್ದಿಜಾಲ

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಸ್ಮಾರ್ಟ್‌ಫೋನ್‌ ಸರಣಿಯ ಕ್ಯಾಮೆರಾ ಫೀಚರ್ಸ್‌ ಲೀಕ್!

ದಕ್ಷಿಣ ಕೊರಿಯಾ ಟೆಕ್‌ ದೈತ್ಯ ಎಂದೆನಿಸಿಕೊಂಡಿರುವ ಸ್ಯಾಮ್‌ಸಂಗ್‌ ಎಂಟ್ರಿ ಲೆವೆಲ್‌ ನಿಂದ ಹೈ ಎಂಡ್‌ ವರೆಗೂ ಹಲವು ಸ್ಮಾರ್ಟ್‌ಫೋನ್‌ ಆವೃತ್ತಿಗಳನ್ನು ಹೊಂದಿದೆ. ಅವುಗಳಲ್ಲಿ ಗ್ಯಾಲಕ್ಸಿ S ಸರಣಿಯ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದ್ದು, ಫ್ಲ್ಯಾಗ್‌ಶಿಪ್‌ ಮಾದರಿಯ ಫೀಚರ್ಸ್‌ಗಳನ್ನು ಒಳಗೊಂಡಿವೆ. ಇದೀಗ ಗ್ಯಾಲಕ್ಸಿ S ಸರಣಿಯಲ್ಲಿಯೇ ಕಂಪನಿಯು ಮತ್ತೆ ಮೂರು ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಸಜ್ಜಾಗಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಸಂಸ್ಥೆಯು ತನ್ನ ನಿರೀಕ್ಷಿತ ಗ್ಯಾಲಕ್ಸಿ S21 ಸ್ಮಾರ್ಟ್‌ಫೋನ್‌ ಸರಣಿಯನ್ನು ಅನಾವರಣ ಮಾಡಲು ರೆಡಿಯಾಗಿದ್ದು, ಶೀಘ್ರದಲ್ಲೇ ಲಾಂಚ್ ದಿನಾಂಕ ನಿಗದಿಪಡಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಸರಣಿಯು ಮೂರು ಮಾಡೆಲ್‌ಗಳನ್ನು ಹೊಂದಿರಲಿದ್ದು, ಅವುಗಳು ಕ್ರಮವಾಗಿ ಗ್ಯಾಲಕ್ಸಿ S21 5G , ಗ್ಯಾಲಕ್ಸಿ S21 + 5G ಮತ್ತು ಗ್ಯಾಲಕ್ಸಿ S21 ಅಲ್ಟ್ರಾ 5G ಸ್ಮಾರ್ಟ್‌ಫೋನ್‌ ಎಂದು ಹೇಳಲಾಗಿದೆ. ಆದ್ರೆ ಇದೀಗ ಈ ಮೂರು ಫೋನ್‌ಗಳ ಕ್ಯಾಮೆರಾ ಫೀಚರ್ಸ್‌ಗಳು ಬಹಿರಂಗವಾಗಿದ್ದು, ಗ್ರಾಹಕರಲ್ಲಿ ಕುತೂಹಲ ಹೆಚ್ಚಿಸಿವೆ. ಹಾಗಾದರೇ ಈ ಸರಣಿಯ ಲೀಕ್ ಆಗಿರುವ ಕ್ಯಾಮೆರಾ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಗ್ಯಾಲಕ್ಸಿ S21 5G - ಫೀಚರ್ಸ್‌

ಗ್ಯಾಲಕ್ಸಿ S21 5G - ಫೀಚರ್ಸ್‌

ಗ್ಯಾಲಕ್ಸಿ S21 5G ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ರಚನೆ ಪಡೆದಿರಲಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಹೊಂದಿರಲಿದೆ ಎನ್ನಲಾಗಿದೆ. ಉಳಿದಂತೆ ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 12ಎಂಪಿ ಸೆನ್ಸಾರ್ ನಲ್ಲಿರಲಿವೆ. ಮುಖ್ಯ ಕ್ಯಾಮೆರಾ ಟೆಲಿಫೋಟೋ ಲೆನ್ಸ್‌ IOS ಬೆಂಬಲದೊಂದಿಗೆ ಬರುವ ನಿರೀಕ್ಷೆಯಿದೆ. ಹಾಗೆಯೇ LED ಫ್ಲ್ಯಾಶ್‌ಲೈಟ್ ಸಪೋರ್ಟ್‌ ಇದೆ.

ಗ್ಯಾಲಕ್ಸಿ S21 + 5G - ಫೀಚರ್ಸ್‌

ಗ್ಯಾಲಕ್ಸಿ S21 + 5G - ಫೀಚರ್ಸ್‌

ಗ್ಯಾಲಕ್ಸಿ S21 + 5G ಸ್ಮಾರ್ಟ್‌ಫೋನ್ ಸಹ ಹಿಂಬದಿಯಲ್ಲಿ ತ್ರಿವಳಿ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಪಡೆದಿರಲಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಹೊಂದಿರಲಿದೆ ಎನ್ನಲಾಗಿದೆ. ಹಾಗೆಯೇ ಈ ಫೋನ್ ಗ್ಯಾಲಕ್ಸಿ S21 ಡಿಸ್‌ಪ್ಲೇಗಿಂತ ವಿಶಾಲವಾದ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಇನ್ನು ಈ ಫೋನಿನ ಬ್ಯಾಟರಿ ಬ್ಯಾಕ್‌ಅಪ್‌ ಸಹ ಅಧಿಕವಿರಲಿದೆ ಹೇಳಲಾಗುತ್ತಿದೆ.

ಗ್ಯಾಲಕ್ಸಿ S21 ಅಲ್ಟ್ರಾ 5G

ಗ್ಯಾಲಕ್ಸಿ S21 ಅಲ್ಟ್ರಾ 5G

ಗ್ಯಾಲಕ್ಸಿ S21 ಅಲ್ಟ್ರಾ 5G ಸ್ಮಾರ್ಟ್‌ಫೋನ್‌ ಸಂಪೂರ್ಣ ಹೈ ಎಂಡ್‌ ಫೀಚರ್ಸ್ಗಳನ್ನು ಹೊಂದಿರಲಿದ್ದು, ಮುಖ್ಯವಾಗಿ ಹಿಂಬದಿಯ ಪ್ರಾಥಮಿಕ ಕ್ಯಾಮೆರಾವು 108ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿರಲಿದೆ ಎನ್ನಲಾಗಿದೆ. ಹಾಗೆಯೇ ಸೆಲ್ಫಿಗಾಗಿ 40ಎಂಪಿ ಸೆನ್ಸಾರ್‌ನ ಕ್ಯಾಮೆರಾ ನಿರೀಕ್ಷೆಯಿದೆ. ಉಳಿದಂತೆ ಇನ್ನೆರಡು ಕ್ಯಾಮೆರಾಗಳು ಕ್ರಮವಾಗಿ 12ಎಂಪಿ ಮತ್ತು 10ಎಂಪಿ ಸೆನ್ಸಾರ್‌ ಬಲದಲ್ಲಿರಲಿವೆ ಎನ್ನಲಾಗಿದೆ.

Best Mobiles in India

English summary
Samsung Galaxy S21, S21+, S21 Ultra Camera Features Leaked.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+