Home
ಸುದ್ದಿಜಾಲ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 5G ಫೋನ್‌ಗೆ ಈ ಸೈಟ್‌ನಲ್ಲಿ ಮತ್ತೆ ಭಾರೀ ಡಿಸ್ಕೌಂಟ್‌!

ಸ್ಯಾಮ್‌ಸಂಗ್‌ನ ಯಾವುದೇ ಫೋನ್‌ಗಳು ಗ್ರಾಹಕರಿಗೆ ಅಚ್ಚು ಮೆಚ್ಚು. ಅದರಲ್ಲೂ ಕೆಲವು ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಬೇಡಿಕೆ ಹೊಂದಿದ್ದು, ಜೊತೆಗೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಮೂಲಕ ರಿಯಾಯಿತಿಯನ್ನೂ ಹೊಂದಿವೆ. ಈ ನಡುವೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ಸ್ಯಾಮ್‌ಸಂಗ್‌ನ ಪ್ರಮುಖ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಬೆಲೆ ಇಳಿಕೆಯಾಗಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 5G (Samsung Galaxy S22 5G) ಸ್ಮಾರ್ಟ್‌ಫೋನ್‌ ಈ ವರ್ಷವೇ ಎರಡಕ್ಕಿಂತ ಹೆಚ್ಚು ಬಾರಿ ಬೆಲೆ ಇಳಿಕೆ ಕಂಡಿದೆ. ಇದೀಗ ಮತ್ತೆ ಈ ಫೋನ್‌ಗೆ ಡಿಸ್ಕೌಂಟ್‌ ಘೋಷಣೆ ಮಾಡಲಾಗಿದ್ದು, ಈ ಮೂಲಕ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಗ್ಯಾಲಕ್ಸಿ S22 5G ಪ್ರಮುಖ ಫೀಚರ್ಸ್‌ ಏನು?, ಆಫರ್‌ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 5G ಫೋನ್‌ಗೆ ಈ ಸೈಟ್‌ನಲ್ಲಿ ಭಾರೀ ಡಿಸ್ಕೌಂಟ್‌!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 5G ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡಲು ನೀವು ಇಚ್ಚಿಸಿದರೆ ಇದರ ಪ್ರಮುಖ ಫೀಚರ್ಸ್‌ಗಳನ್ನು ಮೊದಲು ತಿಳಿದುಕೊಳ್ಳಿ. ಅದರಂತೆ ಈ ಫೋನ್ 6.1 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡೈನಾಮಿಕ್ ಅಮೋಲೆಡ್‌ 2X ಡಿಸ್‌ಪ್ಲೇ ಹೊಂದಿದ್ದು, ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಕ್ಷಿಸಲ್ಪಟ್ಟಿದೆ. ಇದು 1080 x2340 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಪಡೆದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 5G ಪ್ರೊಸೆಸರ್‌ ಮಾಹಿತಿ: ಹಾಗೆಯೇ ಇದರ ಪ್ರೊಸೆಸರ್‌ವಿಚಾರಕ್ಕೆ ಬರುವುದಾರೆ ಈ ಫೋನ್ ಸ್ನಾಪ್‌ಡ್ರಾಗನ್ 8 ಜನ್ 1 ಪ್ರೊಸೆಸರ್‌ ಬಲ ಪಡೆದುಕೊಂಡಿದ್ದು, ಆಂಡ್ರಾಯ್ಡ್‌ 12 ಓಎಸ್‌ ನಲ್ಲಿ ರನ್‌ ಆಗಲಿದೆ. ಇನ್ನುಳಿದಂತೆ 8 GB RAM ಹಾಗೂ 256 GB ವೇರಿಯಂಟ್‌ ಸೇರಿದಂತೆ ಎರಡು ಮಾದರಿಯಲ್ಲಿ ಲಭ್ಯ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 5G ಕ್ಯಾಮೆರಾ ರಚನೆ: ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್‌ ಪ್ರಾರ್ಥಮಿಕ ಕ್ಯಾಮೆರಾ, 10 ಮೆಗಾಪಿಕ್ಸೆಲ್‌ ಆಪ್ಟಿಕಲ್ ಜೂಮ್ ಸೆನ್ಸರ್‌ ಹಾಗೂ 12 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಸೆನ್ಸರ್‌ ಆಯ್ಕೆ ಹೊಂದಿದೆ. ಜೊತೆಗೆ ಎಲ್ಇಡಿ ಫ್ಲ್ಯಾಶ್, ಆಟೋ-ಎಚ್‌ಡಿಆರ್, ಪನೋರಮಾ ಫೀಚರ್ಸ್ ಸಹ ಲಭ್ಯ. ಇನ್ನು 10 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 5G ಫೋನ್‌ಗೆ ಈ ಸೈಟ್‌ನಲ್ಲಿ ಭಾರೀ ಡಿಸ್ಕೌಂಟ್‌!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 5G ಬ್ಯಾಟರಿ ಸಾಮರ್ಥ್ಯ: ಇದರ ಬ್ಯಾಟರಿ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಫೋನ್ 3700 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಎರಡು ರೀತಿಯಲ್ಲಿ ಚಾರ್ಜಿಂಗ್‌ಗೆ ಬೆಂಬಲ ಪಡೆದುಕೊಂಡಿದೆ. ಅಂದರೆ 25w ವೈರ್ಡ್ ಫಾಸ್ಟ್ ಚಾರ್ಜಿಂಗ್ ಹಾಗೂ 15w ವಾಯರ್‌ಲೆಸ್‌ ಚಾರ್ಜಿಂಗ್‌ ಬೆಂಬಲ ಇದಕ್ಕಿದೆ.

ಇನ್ನುಳಿದಂತೆ ಈ ಫೋನ್ ವೈ ಫೈ 802.11 a/b/g/n/ac/6, ವೈ ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.2, ಜಿಪಿಎಸ್, ಗ್ಲೋನಾಸ್, ಬಿಡಿಎಸ್, ಯುಎಸ್‌ಬಿ ಟೈಪ್-ಸಿ ಪೋರ್ಟ್‌ ಸೇರಿದಂತೆ ಇನ್ನಿತರೆ ಪ್ರಮುಖ ಕನೆಕ್ಟಿವಿಟಿ ಫೀಚರ್ಸ್‌ಗಳನ್ನು ಈ ಫೋನ್‌ ಪಡೆದುಕೊಂಡಿದೆ. ಮತ್ಯಾಕೆ ತಡ ಬನ್ನಿ ಇದರ ಬೆಲೆ ಬಗ್ಗೆ ತಿಳಿಯೋಣ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 5G ಆಫರ್‌ ಬೆಲೆ ವಿವರ: ಈ ಉನ್ನತ ಮಟ್ಟದ ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ 52,999 ರೂ. ಗಳ ಬೆಲೆಗೆ ಕಾಣಿಸಿಕೊಂಡಿದೆ. ಜೊತೆಗೆ ವಿನಿಮಯ ಕೊಡುಗೆ ಮತ್ತು ಕೆಲವು ಬ್ಯಾಂಕ್ ಕೊಡುಗೆಗಳೊಂದಿಗೆ ಲಭ್ಯವಿದೆ. ಇನ್ನು ಈ ಎಕ್ಸ್‌ಚೇಂಜ್ ಆಫರ್ ನಲ್ಲಿ ನೀವು 25,000 ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 5G ಫೋನ್‌ಗೆ ಈ ಸೈಟ್‌ನಲ್ಲಿ ಭಾರೀ ಡಿಸ್ಕೌಂಟ್‌!

ಹಾಗೆಯೇ ಕೆಲವು ಬ್ಯಾಂಕ್ ಕೊಡುಗೆ ಗಮನಿಸುವುದಾದರೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಫ್ಲಾಟ್ 500ರೂ. ಹೆಚ್‌ಡಿಎಫ್‌ಸಿ ಡೆಬಿಟ್ ಕಾರ್ಡ್‌ನಲ್ಲಿ 500ರೂ. ಹೆಚ್‌ಎಸ್‌ಬಿಎಸ್‌ ಕಾರ್ಡ್ ಕ್ರೆಡಿಟ್ ಕಾರ್ಡ್‌ನಲ್ಲಿ 250ರೂ. ವರೆಗೆ ತ್ವರಿತ ರಿಯಾಯಿತಿ ಸಹ ಲಭ್ಯ. ಇದರ ಸಾಮಾನ್ಯ ದರ 85,999ರೂ. ಗಳಾಗಿದೆ. ಈ ಫೋನ್‌ ನಿಮಗೆ ಫ್ಯಾಂಟಮ್ ಬ್ಲಾಕ್, ವೈಟ್, ಪಿಂಕ್ ಗೋಲ್ಡ್, ಗ್ರೀನ್, ಗ್ರ್ಯಾಫೈಟ್, ಸ್ಕೈ ಬ್ಲೂ, ವೈಲೆಟ್, ಕ್ರೀಮ್, ಬೋರಾ ಪರ್ಪಲ್ ಕಲರ್‌ನಲ್ಲಿ ಲಭ್ಯ .

Best Mobiles in India

English summary
Samsung Galaxy S22 5G smartphone which has already been available at an offer price several times, is now again being sold at a discount on Amazon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+