ಸ್ಯಾಮ್‌ಸಂಗ್ ಫೋನ್ ಖರೀದಿಸುವ ಗ್ರಾಹಕರಿಗೆ ಭಾರೀ ಸಿಹಿಸುದ್ದಿ!
ಸ್ಯಾಮ್‌ಸಂಗ್ ಗ್ಯಾಲಕ್ಸಿ S ಸರಣಿಯ ಸ್ಮಾರ್ಟ್‌ಫೋನ್‌ಗಳು ಹೈ ಎಂಡ್ ಫೀಚರ್ಸ್ ಹಾಗೂ ಆಕರ್ಷಕ ಡಿಸೈನ್ ಮೂಲಕ ಗ್ರಾಹಕರನ್ನು ಸೆಳೆದಿವೆ. ಆ ಪೈಕಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಫೋನ್ ಕೂಡಾ ಬೊಂಬಾಟ್ ಎನಿಸಿದ್ದು, ಈ ಮೊಬೈಲ್ ಇದೀಗ ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್‌ನಲ್ಲಿ ಬಿಗ್ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ.
ಹೌದು, ಇ ಕಾಮರ್ಸ್ ದೈತ್ಯ ತಾಣ ಫ್ಲಿಪ್‌ಕಾರ್ಟ್ ಆಯೋಜಿಸಿರುವ 'ಇಯರ್ ಎಂಡ್ ಸೇಲ್' ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಫೋನ್ ಶೇ. 53% ರಷ್ಟು ನೇರ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಆಫರ್‌ನಲ್ಲಿ ಈ ಫೋನಿನ 8 GB RAM + 128 GB ಸ್ಟೋರೇಜ್ ವೇರಿಯಂಟ್ 39,999ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಅಂದಹಾಗೆ (ಇಂದಿನಿಂದ) ಡಿಸೆಂಬರ್ 9 ರಿಂದ ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್ ಶುರುವಾಗಿದೆ.

ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಅನ್ನು ಪಡೆದುಕೊಂಡಿದೆ. ಹಾಗೆಯೇ ಈ ಫೋನ್ 3,700 mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಒಳಗೊಂಡಿದೆ. ಹಾಗಾದರೇ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಫೀಚರ್ಸ್ ಹೀಗಿವೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಮೊಬೈಲ್ 6.1 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡೈನಾಮಿಕ್ AMOLED 2X ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದರೊಂದಿಗೆ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಕ್ಷಿಸಲಾಗಿದೆ. ಇನ್ನು ಈ ಫೋನ್ ಆಕ್ಟಾ ಕೋರ್ 4nm SoC ಪ್ರೊಸೆಸರ್ ಸಪೋರ್ಟ್ ಪಡೆದಿದ್ದು, 8 GB RAM ಮತ್ತು 256 GB ವೇರಿಯಂಟ್ ಆಯ್ಕೆ ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಇದೆ.

ಇನ್ನು ಈ ಫೋನ್ ಮೂರು ಕ್ಯಾಮೆರಾ ರಚನೆ ಹೊಂದಿದ್ದು, ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಹಾಗೆಯೇ ಈ ಫೋನ್ 3,700mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗಾಗಿ ವೈರ್‌ಲೆಸ್ ಪವರ್‌ಶೇರ್ ಸಪೋರ್ಟ್ ಸೌಲಭ್ಯ ಇದೆ. ಇದಲ್ಲದೇ ಇದು 5G, 4G LTE, ವೈ ಫೈ 6, ಬ್ಲೂಟೂತ್ v5.2, ಜಿಪಿಎಸ್/ A ಜಿಪಿಎಸ್, NFC ಮತ್ತು USB ಟೈಪ್ ಸಿ ಪೋರ್ಟ್ ನಂತಹ ಕನೆಕ್ಟಿವಿಟಿ ಆಯ್ಕೆ ಪಡೆದುಕೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಪ್ಲಸ್ ಫೀಚರ್ಸ್ ಹೀಗಿವೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಪ್ಲಸ್ ಮೊಬೈಲ್ 6.6 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡೈನಾಮಿಕ್ AMOLED 2X ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದರ ಜೊತೆಗೆ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಕ್ಷಿಸಲಾಗಿದೆ. ಹಾಗೆಯೇ ಇದು ಐ ಕಂಫರ್ಟ್ ಶೀಲ್ಡ್ ಸೌಲಭ್ಯ ಕೂಡಾ ಪಡೆದಿದೆ.
ಇನ್ನು ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ 4nm SoC ಪ್ರೊಸೆಸರ್ ಬೆಂಬಲ ಪಡೆದಿದ್ದು, 12 GB RAM ಮತ್ತು 256 GB ವೇರಿಯಂಟ್ ಆಯ್ಕೆ ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಪಡೆದಿದೆ. ಹಾಗೆಯೇ ಈ ಮೊಬೈಲ್ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ.


Click it and Unblock the Notifications








