ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ಏಕಾಏಕಿ ಭಾರೀ ಇಳಿಕೆ!..ಸಖತ್ ಆಫರ್!
ಸ್ಯಾಮ್‌ಸಂಗ್ ಸಂಸ್ಥೆಯ ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೋನ್ ಸರಣಿಯು ಬಿಡುಗಡೆಗೆ ಸಜ್ಜಾಗಿದೆ. ಈ ಸರಣಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ S23, ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಪ್ಲಸ್ ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ಮಾಡೆಲ್ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿರಲಿದೆ. ಈ ಫೋನ್ ಬಿಡುಗಡೆಗೆ ಮುನ್ನವೇ ಈ ಹಿಂದಿನ ಜನಪ್ರಿಯ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಫೋನ್ ಸಿಕ್ಕಾಪಟ್ಟೆ ಬೆಲೆ ಇಳಿಕೆ ಕಂಡಿದೆ.

ಹೌದು, ಜನಪ್ರಿಯ ಸ್ಯಾಮ್‌ಸಂಗ್ ಸಂಸ್ಥೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೋನ್ ಸರಣಿ ಇದೇ ಫೆಬ್ರುವರಿಯಲ್ಲಿ ಬಿಡುಗಡೆ ಆಗಲಿದೆ. ಆ ಪೈಕಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 (Samsung Galaxy S23) ಸರಣಿಯು ಮೂರು ವೇರಿಯಂಟ್ ಆಯ್ಕೆ ಪಡೆದಿರಲಿದೆ. ಸದ್ಯ ಗುಡ್‌ನ್ಯೂಸ್ ಏನೆಂದರೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಬರೋಬ್ಬರಿ 10,000ರೂ. ಗಳ ಇಳಿಕೆ ದರದಲ್ಲಿ ಕಾಣಿಸಿಕೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸ್ಮಾರ್ಟ್‌ಫೋನ್ (Samsung Galaxy S22) 128GB ಸ್ಟೋರೇಜ್ ವೇರಿಯಂಟ್ ಬೆಲೆಯು 62,999,ರೂ. ಗಳ ಒಳಗೆ ಲಭ್ಯವಾಗಲಿದೆ. ಇನ್ನು 256GB ಸ್ಟೋರೇಜ್ ಆಯ್ಕೆಯ ವೇರಿಯಂಟ್ ಸಹ ಲಭ್ಯ. 256GB ಸ್ಟೋರೇಜ್ ವೇರಿಯಂಟ್ ಫೋನ್ ಸಹ ಆಕರ್ಷಕ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಇದರೊಂದಿಗೆ ಬ್ಯಾಂಕ್ ಆಫರ್ ಹಾಗೂ ಇತರೆ ಸೌಲಭ್ಯಗಳು ಲಭ್ಯ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಫೀಚರ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಫೀಚರ್ಸ್ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸ್ಮಾರ್ಟ್‌ಫೋನ್ 6.1 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದ್ದು ಜೊತೆಗೆ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಕ್ಷಿಸಲಾಗಿದೆ. ಇನ್ನು ಈ ಫೋನ್ ಆಕ್ಟಾ ಕೋರ್ 4nm SoC ಪ್ರೊಸೆಸರ್ ಬೆಂಬಲ ಹೊಂದಿದ್ದು, 8 GB RAM ಮತ್ತು 256 GB ವೇರಿಯಂಟ್ ಆಯ್ಕೆ ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಪಡೆದಿದೆ.
ಹಾಗೆಯೇ ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಈ ಫೋನ್ 3,700mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗಾಗಿ ವೈರ್‌ಲೆಸ್ ಪವರ್‌ಶೇರ್ ಅನ್ನು ಸಹ ಬೆಂಬಲಿಸುತ್ತದೆ. ಹಾಗೆಯೇ 5G, 4G LTE, ವೈ ಫೈ 6, ಬ್ಲೂಟೂತ್ v5.2, ಜಿಪಿಎಸ್/ A ಜಿಪಿಎಸ್, NFC ಮತ್ತು USB ಟೈಪ್ ಸಿ ಪೋರ್ಟ್ ನಂತಹ ಕನೆಕ್ಟಿವಿಟಿ ಆಯ್ಕೆ ಗಳನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಪ್ಲಸ್ ಫೀಚರ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಪ್ಲಸ್ ಸ್ಮಾರ್ಟ್‌ಫೋನ್ 6.6 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದ್ದು ಜೊತೆಗೆ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಕ್ಷಿಸಲಾಗಿದ್ದು, ಇದರೊಂದಿಗೆ ಐ ಕಂಫರ್ಟ್ ಶೀಲ್ಡ್ ಸೌಲಭ್ಯ ಇದೆ. ಇನ್ನು ಈ ಫೋನ್ ಆಕ್ಟಾ ಕೋರ್ 4nm SoC ಪ್ರೊಸೆಸರ್ ಬೆಂಬಲ ಹೊಂದಿದ್ದು, 12 GB RAM ಮತ್ತು 256 GB ವೇರಿಯಂಟ್ ಆಯ್ಕೆ ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಪಡೆದಿದೆ.
ಹಾಗೆಯೇ ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಯನ್ನು ಒಳಗೊಂಡಿದ್ದು, ಅವು ಕ್ರಮವಾಗಿ 10 ಎಂಪಿ + 50 ಎಂಪಿ + 10 ಎಂಪಿ ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಈ ಫೋನ್ 4,500 mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗಾಗಿ ವೈರ್‌ಲೆಸ್ ಪವರ್‌ಶೇರ್ ಅನ್ನು ಸಹ ಬೆಂಬಲಿಸುತ್ತದೆ. ಹಾಗೆಯೇ 5G, 4G LTE, ವೈ ಫೈ 6E, ಬ್ಲೂಟೂತ್ v5.2, ಜಿಪಿಎಸ್/ A ಜಿಪಿಎಸ್, NFC ಮತ್ತು USB ಟೈಪ್ ಸಿ ಪೋರ್ಟ್ ನಂತಹ ಕನೆಕ್ಟಿವಿಟಿ ಆಯ್ಕೆ ಗಳನ್ನು ಒಳಗೊಂಡಿದೆ.


Click it and Unblock the Notifications








