ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಪ್ರಿ-ಬುಕಿಂಗ್ ಪ್ರಾರಂಭ!..ಆಫರ್ ಇದೆಯಾ?
ಸ್ಯಾಮ್‌ಸಂಗ್ ಸಂಸ್ಥೆಯ ನೂತನವಾಗಿ ಬಿಡುಗಡೆ ಮಾಡಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸ್ಮಾರ್ಟ್‌ಫೋನ್ ಸರಣಿಯಯು ಗ್ಯಾಲಕ್ಸಿ S22, ಗ್ಯಾಲಕ್ಸಿ S22 ಪ್ಲಸ್ ಮತ್ತು ಗ್ಯಾಲಕ್ಸಿ S22 ಅಲ್ಟ್ರಾ ಮಾದರಿಗಳನ್ನು ಒಳಗೊಂಡಿದೆ. ಇದೀಗ ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಪ್ರಿ-ಬುಕಿಂಗ್ ಅನ್ನು ಪ್ರಾರಂಭಿಸಿದೆ. ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಂದ 1999 ರೂ.ಗಳ ನೀಡಿ ಪ್ರಿ-ಬುಕಿಂಗ್ ಮಾಡಬಹುದಾಗಿದೆ.

ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ 20 ಸ್ಮಾರ್ಟ್‌ಫೋನ್ ಸರಣಿ ಪ್ರಿ-ಬುಕಿಂಗ್ ಮಾಡಬಹುದಾಗಿದೆ. ಪ್ರಿ-ಬುಕಿಂಗ್ ರದ್ದುಗೊಳಿಸಿದಾಗ 100% ಮರುಪಾವತಿ ಇದೆ ಎನ್ನಲಾಗಿದೆ. ಇನ್ನು ಮುಂಗಡ ಬುಕಿಂಗ್ ಮಾಡುವ ಗ್ರಾಹಕರಿಗೆ ಗ್ಯಾಲಕ್ಸಿ ಸ್ಮಾರ್ಟ್ ಟ್ಯಾಗ್ (Galaxy SmartTag) ನಂತಹ ಬಳಕೆದಾರರಿಗೆ ಪ್ರವೇಶವನ್ನು ನೀಡುತ್ತದೆ. ಸದ್ಯ ಪ್ರಿ-ಬುಕಿಂಗ್ ಪ್ರಾರಂಭವಾಗಿದ್ದು, ಫೆಬ್ರವರಿ 21, 2022 ರಂದು 11:59 PM ರ ಅವಧಿವರೆಗೂ ಲಭ್ಯ ಇರಲಿದೆ. ಗ್ರಾಹಕರು ಸ್ಯಾಮ್‌ಸಂಗ್ ನ ಅಧಿಕೃತ ವೆಬ್‌ಸೈಟ್ ಪ್ರಿ-ಬುಕಿಂಗ್ ಮಾಡಬಹುದಾಗಿದೆ. ಹಾಗಾದರೇ ಗ್ಯಾಲಕ್ಸಿ S22, ಗ್ಯಾಲಕ್ಸಿ S22 ಪ್ಲಸ್ ಮತ್ತು ಗ್ಯಾಲಕ್ಸಿ S22 ಅಲ್ಟ್ರಾ ಫೋನ್‌ಗಳ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಫೀಚರ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸ್ಮಾರ್ಟ್‌ಫೋನ್ 6.1 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದ್ದು ಜೊತೆಗೆ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಕ್ಷಿಸಲಾಗಿದೆ. ಇನ್ನು ಈ ಫೋನ್ ಆಕ್ಟಾ ಕೋರ್ 4nm SoC ಪ್ರೊಸೆಸರ್ ಬೆಂಬಲ ಹೊಂದಿದ್ದು, 8 GB RAM ಮತ್ತು 256 GB ವೇರಿಯಂಟ್ ಆಯ್ಕೆ ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಪಡೆದಿದೆ. ಹಾಗೆಯೇ ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಈ ಫೋನ್ 3,700mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗಾಗಿ ವೈರ್‌ಲೆಸ್ ಪವರ್‌ಶೇರ್ ಅನ್ನು ಸಹ ಬೆಂಬಲಿಸುತ್ತದೆ. ಹಾಗೆಯೇ 5G, 4G LTE, ವೈ ಫೈ 6, ಬ್ಲೂಟೂತ್ v5.2, ಜಿಪಿಎಸ್/ A ಜಿಪಿಎಸ್, NFC ಮತ್ತು USB ಟೈಪ್ ಸಿ ಪೋರ್ಟ್ ನಂತಹ ಕನೆಕ್ಟಿವಿಟಿ ಆಯ್ಕೆ ಗಳನ್ನು ಒಳಗೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಪ್ಲಸ್ ಫೀಚರ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಪ್ಲಸ್ ಸ್ಮಾರ್ಟ್‌ಫೋನ್ 6.6 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದ್ದು ಜೊತೆಗೆ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಕ್ಷಿಸಲಾಗಿದ್ದು, ಇದರೊಂದಿಗೆ ಐ ಕಂಫರ್ಟ್ ಶೀಲ್ಡ್ ಸೌಲಭ್ಯ ಇದೆ. ಇನ್ನು ಈ ಫೋನ್ ಆಕ್ಟಾ ಕೋರ್ 4nm SoC ಪ್ರೊಸೆಸರ್ ಬೆಂಬಲ ಹೊಂದಿದ್ದು, 12 GB RAM ಮತ್ತು 256 GB ವೇರಿಯಂಟ್ ಆಯ್ಕೆ ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಪಡೆದಿದೆ. ಹಾಗೆಯೇ ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಯನ್ನು ಒಳಗೊಂಡಿದ್ದು, ಅವು ಕ್ರಮವಾಗಿ 10 ಎಂಪಿ + 50 ಎಂಪಿ + 10 ಎಂಪಿ ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಈ ಫೋನ್ 4,500 mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗಾಗಿ ವೈರ್‌ಲೆಸ್ ಪವರ್‌ಶೇರ್ ಅನ್ನು ಸಹ ಬೆಂಬಲಿಸುತ್ತದೆ. ಹಾಗೆಯೇ 5G, 4G LTE, ವೈ ಫೈ 6E, ಬ್ಲೂಟೂತ್ v5.2, ಜಿಪಿಎಸ್/ A ಜಿಪಿಎಸ್, NFC ಮತ್ತು USB ಟೈಪ್ ಸಿ ಪೋರ್ಟ್ ನಂತಹ ಕನೆಕ್ಟಿವಿಟಿ ಆಯ್ಕೆ ಗಳನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಅಲ್ಟ್ರಾ ಫೀಚರ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಅಲ್ಟ್ರಾ ಸ್ಮಾರ್ಟ್‌ಫೋನ್ 6.8 ಇಂಚಿನ ಎಡ್ಜ್ QHD ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದ್ದು ಜೊತೆಗೆ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಕ್ಷಿಸಲಾಗಿದ್ದು, ಇದರೊಂದಿಗೆ ಐ ಕಂಫರ್ಟ್ ಶೀಲ್ಡ್ ಸೌಲಭ್ಯ ಇದೆ. ಇನ್ನು ಈ ಫೋನ್ ಆಕ್ಟಾ ಕೋರ್ 4 nm SoC ಪ್ರೊಸೆಸರ್ ಬೆಂಬಲ ಹೊಂದಿದ್ದು, 12 GB RAM ಮತ್ತು ವೇರಿಯಂಟ್ ಆಯ್ಕೆ ಪಡೆದಿದೆ. ಇದಕ್ಕೆ ಪೂರಕ ವಾಗಿ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಪಡೆದಿದೆ. ಹಾಗೆಯೇ ಈ ಫೋನ್ ಕ್ವಾಡ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಈ ಫೋನ್ 5,000 mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, 45W ಫಾಸ್ಟ್ ಚಾರ್ಜಿಂಗ್ ಬೆಂಬಲ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗಾಗಿ ವೈರ್‌ಲೆಸ್ ಪವರ್‌ಶೇರ್ ಅನ್ನು ಸಹ ಬೆಂಬಲಿಸುತ್ತದೆ. ಹಾಗೆಯೇ 5G, 4G LTE, ವೈ ಫೈ 6E, ಬ್ಲೂಟೂತ್ v5.2, ಜಿಪಿಎಸ್/ A ಜಿಪಿಎಸ್, NFC ಮತ್ತು USB ಟೈಪ್ ಸಿ ಪೋರ್ಟ್ ನಂತಹ ಕನೆಕ್ಟಿವಿಟಿ ಆಯ್ಕೆ ಗಳನ್ನು ಒಳಗೊಂಡಿದೆ.
ಬೆಲೆ ಎಷ್ಟು?
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಬೆಲೆ $799 (ಅಂದಾಜು ಸುಮಾರು 59,900 ರೂ.) ಮತ್ತು ಗ್ಯಾಲಕ್ಸಿ S22 ಪ್ಲಸ್ ಬೆಲೆ $999 (ಅಂದಾಜು 74,800 ರೂ) ಆಗಿದೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಅಲ್ಟ್ರಾ ಬೆಲೆಯು $1,199 (ಅಂದಾಜು 89,700 ರೂ.) ರಿಂದ ಪ್ರಾರಂಭವಾಗುತ್ತದೆ. ಭಾರತದಲ್ಲಿ ಈ ಮೂರು ಫೋನ್‌ಗಳ ಬೆಲೆಯ ವಿವರಗಳನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ.


Click it and Unblock the Notifications








