Home
ಸುದ್ದಿಜಾಲ

ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

ದಕ್ಷಿಣ ಕೊರಿಯಾ ಟೆಕ್ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆಯು ಇತ್ತೀಚಿಗಷ್ಟೆ ಗ್ಯಾಲಕ್ಸಿ S ಸರಣಿಯಲ್ಲಿ ಹೊಸದಾಗಿ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ ಸರಣಿಯನ್ನು ಬಿಡುಗಡೆ ಮಾಡಿದೆ. ಗ್ಯಾಲಕ್ಸಿ S23 ಫೋನ್‌ ಸಂಸ್ಥೆಯ ಈ ಹಿಂದಿನ ಗ್ಯಾಲಕ್ಸಿ S22 ಸರಣಿಯ ಅಪ್‌ಗ್ರೇಡ್‌ ಆವೃತ್ತಿ ಆಗಿದ್ದು, ಸಾಕಷ್ಟು ನೂತನ ಫೀಚರ್ಸ್‌ಗಳನ್ನು ಪಡೆದಿದೆ. ನೂತನ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಫೋನ್‌ ಅನ್ನು ಡಿಸ್ಕೌಂಟ್‌ನಲ್ಲಿ ಖರೀದಿಸುವ ಪ್ಲ್ಯಾನ್‌ ಹೊಂದಿದ್ರೆ, ಇದಕ್ಕೆ ಇಲ್ಲಿದೆ ಅವಕಾಶ.

ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

ಹೌದು, ಸ್ಯಾಮ್‌ಸಂಗ್‌ ಸಂಸ್ಥೆಯು ತನ್ನ ಹೊಚ್ಚ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ 256GB ವೇರಿಯಂಟ್‌ ಬೆಲೆಯಲ್ಲಿ ಈಗ 5,000ರೂ. ಡಿಸ್ಕೌಂಟ್‌ ತಿಳಿಸಿದೆ. ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಈ ಕೊಡುಗೆ ಲಭ್ಯವಾಗಲಿದೆ. ಅಂದಹಾಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ ಫ್ಯಾಂಟಮ್‌ ಬ್ಲ್ಯಾಕ್‌, ಕ್ರೀಮಿ ಗ್ರೀನ್ ಹಾಗೂ ಲ್ಯಾವೆಂಡ್ರಾ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೋನ್‌ 256GB ವೇರಿಯಂಟ್‌ ಬೆಲೆ ಅಮೆಜಾನ್‌ ತಾಣದಲ್ಲಿ 79,999ರೂ. ಆಗಿದೆ. ಖರೀದಿದಾರರಿಗೆ 5,000ರೂ. ರಿಯಾಯಿತಿ ಲಭ್ಯವಾಗಲಿದೆ. ಇದರೊಂದಿಗೆ ಐಸಿಐಸಿಐ ಬ್ಯಾಂಕ್‌ ಕಾರ್ಡ್‌ ಮೂಲಕ ಖರೀದಿಸಿದರೆ 8,000ರೂ. ವರೆಗೂ ಹೆಚ್ಚುವರಿ ಡಿಸ್ಕೌಂಟ್‌ ಪಡೆಯಬಹುದು. ಹಾಗಾದರೇ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೋನಿನ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 : ಡಿಸ್‌ಪ್ಲೇ ಮತ್ತು ಪ್ರೊಸೆಸರ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೋನ್‌ ಡೈಮಂಡ್‌ ಅಮೋಲೆಡ್‌ ಜೊತೆಗೆ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 2340x 1080 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 2 ಪ್ರೊಸೆಸರ್‌ ಅನ್ನು ಪಡೆದಿದ್ದು, ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಜೊತೆಗೆ ಒನ್‌ UI 5.1 ಸ್ಕ್ರೀನ್‌ ಓಎಸ್‌ ಪಡೆದಿದೆ. ಹಾಗೆಯೇ ಈ ಫೋನ್‌ 8GB RAM + 128GB, 8GB RAM + 256GB ಮತ್ತು 8GB RAM + 512GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 : ಕ್ಯಾಮೆರಾ ಮತ್ತು ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಮತ್ತು 10 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿವೆ. ಇನ್ನು ಈ ಫೋನಿನ ಬ್ಯಾಟರಿ 3,900mAh ಸಾಮರ್ಥ್ಯದಲ್ಲಿದ್ದು, ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಸಹ ಪಡೆದಿದೆ.

ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಪ್ಲಸ್‌ ಫೀಚರ್ಸ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಪ್ಲಸ್‌ ಫೋನ್‌ ಡೈಮಂಡ್‌ ಅಮೋಲೆಡ್‌ ಜೊತೆಗೆ 6.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 2 ಪ್ರೊಸೆಸರ್‌ ಅನ್ನು ಪಡೆದಿದೆ. ಈ ಫೋನ್ ಸಹ ಟ್ರಿಪಲ್‌ ಕ್ಯಾಮೆರಾ ರಚನೆ ಇದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಇನ್ನು ಈ ಫೋನಿನ ಬ್ಯಾಟರಿ 4,700mAh ಸಾಮರ್ಥ್ಯದಲ್ಲಿದೆ.

ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ಫೀಚರ್ಸ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ಫೋನ್‌ QHD+ ಡೈಮಂಡ್‌ ಅಮೋಲೆಡ್‌ ಜೊತೆಗೆ 6.8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 2 ಪ್ರೊಸೆಸರ್‌ ಅನ್ನು ಪಡೆದಿದೆ. ಈ ಫೋನ್ ಕ್ವಾಡ್‌ ಕ್ಯಾಮೆರಾ ರಚನೆ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾ 200 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಇನ್ನು ಈ ಫೋನಿನ ಬ್ಯಾಟರಿ 5,000mAh ಸಾಮರ್ಥ್ಯದಲ್ಲಿದೆ.

Best Mobiles in India

English summary
Samsung Galaxy S23 was launched at a starting price of Rs 74,999 for the 128GB. know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+