Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್‌ನ ಈ ಜನಪ್ರಿಯ ಫೋನ್‌ಗೆ ಡಿಸ್ಕೌಂಟ್‌ ಎಷ್ಟಿದೆ? 50MP ಕ್ಯಾಮೆರಾ... ಬಲಿಷ್ಠ ಪ್ರೊಸೆಸರ್!

ಸ್ಯಾಮ್‌ಸಂಗ್‌ (Samsung) ಫೋನ್‌ಗಳಲ್ಲಿ ಹೆಚ್ಚು ಸೇಲ್ ಆಗುವ ಹಾಗೂ ಈ ಕ್ಷಣಕ್ಕೂ ಭರ್ಜರಿ ಬೇಡಿಕೆ ಇರುವ ಫೋನ್‌ಗೆ ದೊಡ್ಡ ಮಟ್ಟದಲ್ಲಿ ರಿಯಾಯಿತಿ ನೀಡಲಾಗಿದೆ. ಅದರಲ್ಲೂ ಕೆಲವು ದಿನಗಳ ಹಿಂದೆ ಆರಂಭವಾದ ಹಬ್ಬದ ಋತುವಿನ ವಿಶೇಷ ಸೇಲ್‌ನಲ್ಲಿ ಈ ಫೋನ್‌ನ ಸರಣಿಗಳೇ ದಾಖಲೆ ಬರೆದಿವೆ. ಈ ಮೂಲಕ ಸ್ಯಾಮ್‌ಸಂಗ್‌ ಭಾರತದಲ್ಲಿ ಅಗ್ರಸ್ಥಾನ ಪಡೆಯಲು ಸಾಧ್ಯವಾಗಿದೆ.

ಹೌದು, ಸ್ಯಾಮ್‌ಸಂಗ್‌ ಫೋನ್‌ಗಳಲ್ಲಿ ಬಹಳ ಬೇಡಿಕೆ ಪಡೆದುಕೊಂಡಿರುವ ಪ್ರೀಮಿಯಂ ಫೋನ್‌ಗಳಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 5G ಫೋನ್‌ (Samsung Galaxy S23 5G phone) ಪ್ರಮುಖವಾಗಿದೆ. ಈ ಫೋನ್‌ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 50MP f/1.8 ವೈಡ್-ಆಂಗಲ್ ಕ್ಯಾಮೆರಾ ಸೆನ್ಸರ್ ಪಡೆಯುವ ಮೂಲಕ ಉತ್ತಮ ಎನಿಸಿದೆ. ಇದರೊಂದಿಗೆ ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಆಫರ್ ಬೆಲೆ ಎಷ್ಟು ಎಂದು ತಿಳಿಯೋಣ ಬನ್ನಿ.

ಸ್ಯಾಮ್‌ಸಂಗ್‌ನ ಈ ಜನಪ್ರಿಯ ಫೋನ್‌ಗೆ ಡಿಸ್ಕೌಂಟ್‌ ಎಷ್ಟಿದೆ? 50MP ಕ್ಯಾಮೆರಾ..

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 5G ಆಫರ್ ವಿವರ: ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ದರ 95,999 ರೂ.ಗಳಾಗಿದ್ದು, ನೀವೀಗ ಆಫರ್‌ ಬೆಲೆಯಲ್ಲಿ ಈ ಫೋನ್‌ ಅನ್ನು 79,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ 16% ಡಿಸ್ಕೌಂಟ್‌ ಪಡೆದುಕೊಂಡಿದೆ. ಇಷ್ಟೇ ಅಲ್ಲದೆ ಇನ್ನೂ ಕೆಲವು ಬ್ಯಾಂಕ್‌ ಆಫರ್ ಹಾಗೂ ವಿನಿಮಯ ಅಫರ್ ಇದ್ದು, 44,150ರೂ.ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ.

ಬ್ಯಾಂಕ್‌ ಆಫರ್ ವಿವರ ತಿಳಿಯುವುದಾದರೆ ನೀವು ಆಕ್ಸಿಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 10% ಕ್ಯಾಶ್‌ಬ್ಯಾಕ್ ಪಡೆದುಕೊಳ್ಳಬಹುದು. ಇದರೊಂದಿಗೆ ಆಯ್ದ ಬ್ಯಾಂಕ್ ಕ್ರೆಡಿಟ್ ಮೇಲೆ ಇಎಮ್‌ಐ ಅಲ್ಲದ ಅಲ್ಲದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ನಲ್ಲಿ 8000ರೂ.ವರೆಗೂ ಹಣ ಉಳಿತಾಯ ಮಾಡಬಹುದು. ಜೊತೆಗೆ ಯಾವುದೇ ವೆಚ್ಚದ ಇಎಮ್‌ಐ ಆಯ್ಕೆ ಸಹ ಇದ್ದು, ನೀವು ತಿಂಗಳಿಗೆ 8,889ರೂ.ಗಳನ್ನು ಪಾವತಿ ಮಾಡುವ ಮೂಲಕ ಈ ಫೋನ್‌ ಖರೀದಿ ಮಾಡಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 5G ಡಿಸ್‌ಪ್ಲೇ ವಿವರ: ಈ ಫೋನ್ 6.1 ಚಿನ ಡೈನಾಮಿಕ್ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಕೊಂಡಿದ್ದು,1080 x 2340 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ 19:5:9 ಆಕಾರ ಅನುಪಾತವನ್ನು ಹೊಂದಿದೆ. ಇದರೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ ಫೋನ್‌ ಅನ್ನು ಇನ್ನಷ್ಟು ರಕ್ಷಣೆ ಮಾಡಲಿದೆ ಮತ್ತು 422ppi ಪಿಕ್ಸೆಲ್ ಸಾಂದ್ರತೆ ಮತ್ತು 120Hz ರಿಫ್ರೆಶ್ ರೇಟ್‌ ಈ ಫೋನ್‌ಗೆ ಪ್ರೀಮಿಯಂ ಅನುಭವ ನೀಡಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 5G ಪ್ರೊಸೆಸರ್‌ ಮಾಹಿತಿ: ಇನ್ನು ಈ ಸ್ಮಾರ್ಟ್‌ಫೋನ್ 8 GB RAM ಆಯ್ಕೆಯೊಂದಿಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್‌ 2 ಪ್ರೊಸೆಸರ್‌ ಬಲದಲ್ಲಿ ಕಾರ್ಯನಿರ್ವಹಿಸಲಿದೆ. ಇದು ಸ್ಯಾಮ್‌ಸಂಗ್ ಕಾರ್ಟೆಕ್ಸ್ X2, ಕಾರ್ಟೆಕ್ಸ್ A710 ಮತ್ತು ಕಾರ್ಟೆಕ್ಸ್ A510 ಲೇಔಟ್‌ನೊಂದಿಗೆ ಆಕ್ಟಾ-ಕೋರ್ ಸಿಪಿಯು ಅನ್ನು ಹೊಂದಿದೆ. ಹಾಗೆಯೇ ಅಡ್ರಿನೋ 740 ಜಿಪಿಯು ಜೊತೆಗೆ 3.2GHz ನಲ್ಲಿ ಕೆಲಸ ಮಾಡಲಿದೆ.

ಸ್ಯಾಮ್‌ಸಂಗ್‌ನ ಈ ಜನಪ್ರಿಯ ಫೋನ್‌ಗೆ ಡಿಸ್ಕೌಂಟ್‌ ಎಷ್ಟಿದೆ? 50MP ಕ್ಯಾಮೆರಾ..

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 5G ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್, 10 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ f/1.8 ವೈಡ್-ಆಂಗಲ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಎಲ್‌ಇಡಿ ಪ್ಲ್ಯಾಶ್‌ ಲೈಟ್‌ ಆಯ್ಕೆ, ಆಟೋಫೋಕಸ್, ಡಿಜಿಟಲ್ ಜೂಮ್ ಮತ್ತು ಐಎಸ್‌ಓ ಸೇರಿದಂತೆ ಇತರೆ ಪ್ರಮುಖ ಫೀಚರ್ಸ್‌ ಪಡೆದುಕೊಂಡಿದೆ ಇದರೊಂದಿಗೆ 12 ಮೆಗಾಪಿಕ್ಸೆಲ್ f/2.2 ವೈಡ್ ಆಂಗಲ್ ಸೆನ್ಸರ್‌ ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಸ್ಮಾರ್ಟ್‌ಫೋನ್‌ 3900mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

Best Mobiles in India

English summary
Samsung Galaxy S23 5G smartphone is now available at the offer price. This phone has got an AMOLED display option, and it looks good by getting a 50MP f/1.8 wide-angle camera sensor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+