Home
ಸುದ್ದಿಜಾಲ

Samsung: ಹೊಸ ಫೋನ್ ಲಾಂಚ್‌ ಹಿನ್ನೆಲೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸರಣಿ ಫೋನ್‌ ಮೇಲೆ 10 ಸಾವಿರ ರಿಯಾಯಿತಿ!

ಸ್ಯಾಮ್‌ಸಂಗ್‌ ಫೋನ್‌ಗಳು (Samsung phone) ತಮ್ಮದೇ ಆದ ವಿಶೇಷ ಫೀಚರ್ಸ್‌ ಆಯ್ಕೆ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತವೆ. ಅದರಲ್ಲೂ ಎಐ ಅನ್ನು ಕೇಂದ್ರೀಕರಿಸಿಕೊಂಡು ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿಯ (Samsung Galaxy S24 series) ಫೋನ್‌ಗಳನ್ನು ಅನಾವರಣ ಮಾಡಲಾಗಿದ್ದು, ಈ ಮೂಲಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸುನಾಮಿಯನ್ನೇ ಉಂಟು ಮಾಡಿದೆ.

ಹೌದು, ಸ್ಯಾಮ್‌ಸಂಗ್ ತನ್ನ ಬಹು ನಿರೀಕ್ಷಿತ ಗ್ಯಾಲಕ್ಸಿ S24 ಸರಣಿಯನ್ನು ತನ್ನ ಅನ್‌ಪ್ಯಾಕ್ಡ್ ಈವೆಂಟ್‌ನಲ್ಲಿ ಅನಾವರಣ ಮಾಡಲಾಗಿದ್ದು, ಈ ಸರಣಿಯಲ್ಲಿ ಗ್ಯಾಲಕ್ಸಿ S24 ಅಲ್ಟ್ರಾ, ಗ್ಯಾಲಕ್ಸಿ S24 ಪ್ಲಸ್‌ ಮತ್ತು ಗ್ಯಾಲಕ್ಸಿ S24 ಫೋನ್‌ಗಳನ್ನು ಕಾಣಬಹುದಾಗಿದೆ. ಈ ಹೊಸ ಫೋನ್‌ಗಳನ್ನು ಲಾಂಚ್‌ ಮಾಡಿ ಗ್ರಾಹಕರಿಗೆ ಖುಷಿ ನೀಡಿರುವ ವಿಚಾರ ಒಂದು ಕಡೆಯಾದರೆ ಇದರ ಹಿಂದಿನ ಮಾದರಿಗಳ ಬೆಲೆಯಲ್ಲಿ ಗಣನೀಯವಾಗಿ ಕಡಿಮೆ ಮಾಡಿ ಇನ್ನಷ್ಟು ಖುಷಿ ನೀಡಿದೆ. ಹಾಗಿದ್ರೆ, ಹಿಂದಿನ ಸರಣಿಯ ಫೋನ್‌ ಬೆಲೆ ಎಷ್ಟು?, ಅದರ ಫೀಚರ್ಸ್‌ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸರಣಿ ಫೋನ್‌ ಮೇಲೆ 10 ಸಾವಿರ ರಿಯಾಯಿತಿ!

ಗ್ಯಾಲಕ್ಸಿ S23 ಈಗ 10,000 ರೂ.ಗಳ ರಿಯಾಯಿತಿಯೊಂದಿಗೆ ಲಭ್ಯ: ಹೊಸ ಪೀಳಿಗೆಯ ಪ್ರಮುಖ ಗ್ಯಾಲಕ್ಸಿ S ಸರಣಿಯ ಆಗಮನದೊಂದಿಗೆ, ಕಳೆದ ವರ್ಷದ ಪ್ರಮುಖ ಗ್ಯಾಲಕ್ಸಿ 23 ಸರಣಿಯ (Galaxy S23) ಸ್ಮಾರ್ಟ್‌ಫೋನ್‌ಗಳು ಗಮನಾರ್ಹ ಬೆಲೆ ಕುಸಿತವನ್ನು ಕಂಡಿವೆ. ಅದರಂತೆ ಅಮೆಜಾನ್‌ನಲ್ಲಿ 10 ಸಾವಿರ ರೂ.ಗಳ ರಿಯಾಯಿತಿಯಲ್ಲಿ ಈ ಫೋನ್‌ ಖರೀದಿಗೆ ಲಭ್ಯ ಇದೆ.

128GB ಸ್ಟೋರೇಜ್ ಹೊಂದಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಪ್ರಸ್ತುತ ಅಮೆಜಾನ್‌ನಲ್ಲಿ 64,999 ರೂ.ಗಳ ರಿಯಾಯಿತಿ ಬೆಲೆಗೆ ಲಭ್ಯವಿದೆ. ಹಾಗೆಯೇ 256GB ವೇರಿಯಂಟ್‌ನ ಬೆಲೆ 69,999 ರೂ.ಗಳಲ್ಲಿ ಲಭ್ಯ ಇದ್ದು, ಖರೀದಿದಾರರು ಎಸ್‌ಬಿಐ ಕ್ರೆಡಿಟ್ ಕಾರ್ಡ್ ವ್ಯವಹಾರದ ಮೇಲೆ 9250 ರೂ.ಗಳ ತ್ವರಿತ ರಿಯಾಯಿತಿಯನ್ನೂ ಸಹ ಈ ವೇಳೆ ಪಡೆಯಬಹುದಾಗಿದೆ. ಇದಲ್ಲದೆ, ಸ್ಯಾಮ್‌ಸಂಗ್‌ ಆಕ್ಸಿಸ್‌ ಇನ್ಫಿನೈಟ್‌ ಕ್ರೆಡಿಟ್‌ ಕಾರ್ಡ್‌ ವ್ಯವಹಾರದ ಮೇಲೆ 10 ಪ್ರತಿಶತ ಕ್ಯಾಶ್‌ಬ್ಯಾಕ್ ಅನ್ನು ಪಡೆಯಬಹುದಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸರಣಿ ಫೋನ್‌ ಮೇಲೆ 10 ಸಾವಿರ ರಿಯಾಯಿತಿ!

ಹೊಸ ಮತ್ತು ಹಳೆಯ ಗ್ಯಾಲಕ್ಸಿ ಎಸ್ ಎರಡರ ವಿಶೇಷತೆ ಏನಿದೆ?: ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಫೋನ್‌ ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್, ಶಕ್ತಿಯುತ ಕಾರ್ಯಕ್ಷಮತೆ ಮತ್ತು ಬಹುಮುಖ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಇದರ ಡೈನಾಮಿಕ್ ಅಮೋಲೆಡ್‌ 2X ಡಿಸ್ಪ್ಲೇ ಮೃದುವಾದ 120Hz ರಿಫ್ರೆಶ್ ರೇಟ್‌ನೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಈ ಡಿಸ್‌ಪ್ಲೇ ಪಡೆದಿದೆ.

ಇದರೊಂದಿಗೆ ಸ್ನಾಪ್‌ಡ್ರಾಗನ್ 8 ಜನ್ 2 ಚಿಪ್‌ಸೆಟ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 8GB RAM ಮತ್ತು 512GB ಈ ಫೋನ್‌ಗೆ ಇನ್ನಷ್ಟು ಶಕ್ತಿ ನೀಡಲಾಗಿದೆ. ಆದರೆ ನಿಮಗೆ ಇನ್ನೂ ಹೆಚ್ಚಿನ ಸ್ಟೋರೇಜ್‌ ಆಯ್ಕೆ ಬೇಕು ಎಂದು ಮೈಕ್ರೊ ಎಸ್‌ಡಿ ಕಾರ್ಡ್‌ ಬಳಕೆ ಮಾಡಿಕೊಂಡು ವಿಸ್ತರಣೆ ಮಾಡಿಕೊಳ್ಳಬಹುದಾದ ಆಯ್ಕೆ ಇರುವುದಿಲ್ಲ. ಜೊತೆಗೆ ಈ ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ಹೊಂದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸರಣಿ ಫೋನ್‌ ಮೇಲೆ 10 ಸಾವಿರ ರಿಯಾಯಿತಿ!

50 ಮೆಗಾಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್, 3x ಆಪ್ಟಿಕಲ್ ಜೂಮ್‌ನೊಂದಿಗೆ 10 ಮೆಗಾಪಿಕ್ಸೆಲ್ ಟೆಲಿಫೋಟೋ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸರ್‌ ಅನ್ನು ಈ ಫೋನ್‌ ಹೊಂದಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ 12 ಮೆಗಾಪಿಕ್ಸೆಲ್ ಡ್ಯುಯಲ್-ಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದಿದ್ದು, 4K ವಿಡಿಯೋಗಳನ್ನು ಈ ಮೂಲಕ ಸೆರೆಹಿಡಿಯಬಹುದಾಗಿದೆ.

ಇದರೊಂದಿಗೆ ಈ ವಿಶೇಷ ಫೋನ್ 3900mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 25W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಹಾಗೆಯೇ 4.5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ ಸೌಲಭ್ಯ ಸಹ ಈ ಫೋನ್‌ನಲ್ಲಿ ಲಭ್ಯ ಇದೆ. ಉಳಿದಂತೆ ಈ ಫೋನ್ ಆಂಡ್ರಾಯ್ಡ್ 13 ಅನ್ನು ಒನ್‌ ಯುಐ 6 ನೊಂದಿಗೆ ರನ್ ಮಾಡಲಿದ್ದು, IP68 ಧೂಳು ಮತ್ತು ನೀರಿನ ಪ್ರತಿರೋಧದ ರೇಟಿಂಗ್ ಅನ್ನು ಹೊಂದಿದೆ.

Best Mobiles in India

English summary
Samsung unveiled its much-awaited Galaxy S24 series at its Unpacked event, along with now the Samsung Galaxy S23 phones have received a price cut.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+