Home
ಸುದ್ದಿಜಾಲ

smartphones: 12 GB RAM ಆಯ್ಕೆಯ ಸ್ಮಾರ್ಟ್‌ಫೋನ್‌ಗಳಿವು! ಉತ್ತಮ ಫೋನ್‌ ಬೇಕು ಅನ್ನೋರಿಗೆ ಇವೇ ಬೆಸ್ಟ್‌

ಗ್ರಾಹಕರಿಗೆ ಅನುಕೂಲ ಆಗುವ ರೀತಿಯಲ್ಲಿ ಖರೀದಿ ಮಾಡಲು ಸಾಕಷ್ಟು ಸ್ಮಾರ್ಟ್‌ಫೋನ್‌ಗಳು (Smartphones) ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅಂದರೆ ಬಜೆಟ್‌ ಬೆಲೆಯಿಂದ ಹಿಡಿದು ದುಬಾರಿ ಬೆಲೆಯಲ್ಲಿ ಈ ಫೋನ್‌ಗಳು ಲಭ್ಯ ಇವೆ. ಈ ನಡುವೆ 12 GB RAM ವೇರಿಯಂಟ್‌ನ ಫೋನ್‌ಗಳಿಗೆ ವಿಶೇಷ ಬೇಡಿಕೆ ಇದೆ.

ಹೌದು, ಭಾರತದಲ್ಲಿ 12 GB ಮತ್ತು ಅದಕ್ಕಿಂತ ಹೆಚ್ಚಿನ RAM ಆಯ್ಕೆ ಇರುವ ಸರಾಸರಿ 435 ಸ್ಮಾರ್ಟ್‌ಫೋನ್‌ಗಳನ್ನು ನಾವು ನೋಡಬಹುದು.ಆದರೆ. ಬೆಲೆಯೂ ಕಡಿಮೆ ಇರಬೇಕು, ಉತ್ತಮ ಕಾರ್ಯಕ್ಷಮತೆಯೂ ಇರಬೇಕು ಎಂದರೆ ಕೆಲವು ಫೋನ್‌ಗಳು ಮಾತ್ರ ಲಭ್ಯ ಇವೆ. ಹಾಗಿದ್ರೆ, ಯಾವುವು ಆ ಫೋನ್‌ಗಳು?, ಫೋನ್‌ಗಳು ಫೀಚರ್ಸ್‌ ಏನು?, ಬೆಲೆ ಎಷ್ಟು? ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಉತ್ತಮ ಫೋನ್‌ ಬೇಕು ಅನ್ನೋರಿಗೆ ಇವೇ ಬೆಸ್ಟ್‌ ,12 GB RAM

ಮೊಟೊರೊಲಾ ಮೊಟೊ G54 5G : ಈ ಸ್ಮಾರ್ಟ್‌ ಫೋನ್‌ (Motorola Moto G54 5G) ಅನ್ನು 15,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ 12GB RAM +256GB ವೇರಿಯಂಟ್‌ನಲ್ಲಿ ಲಭ್ಯ ಇದ್ದು, 6.5 ಇಂಚಿನ ಪಂಚ್ ಹೋಲ್ ಡಿಸ್‌ಪ್ಲೇ ಹೊಂದಿದೆ. ಇದರ ಜೊತೆಗೆ 1080 x 2400 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ, ಡೈಮೆನ್ಸಿಟಿ 7020 ಪ್ರೊಸೆಸರ್‌, 50 MP + 8 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 16 MP ಸೆಲ್ಫಿ ಕ್ಯಾಮೆರಾ ಆಯ್ಕೆಯೊಂದಿಗೆ 6000 mAh ಸಾಮರ್ಥ್ಯದ ಬ್ಯಾಟರಿ ಮೂಲಕ ಪ್ಯಾಕ್‌ ಆಗಿದೆ .

ಮೊಟೊರೊಲಾ ಎಡ್ಜ್‌ 40 ನಿಯೋ : ಈ ಸ್ಮಾರ್ಟ್‌ಫೋನ್‌ (Motorola Edge 40 Neo) ಅನ್ನು ನೀವು 24,999ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದು. ಇದು 12GB RAM + 256GB ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದ್ದು, 6.55 ಇಂಚಿನ 144 Hz ರಿಫ್ರೆಶ್ ರೇಟ್‌ ಆಯ್ಕೆಯ ಡಿಸ್‌ಪ್ಲೇ, 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಡೈಮೆನ್ಸಿಟಿ 7030 ಪ್ರೊಸೆಸರ್‌ ಬಲ ಪಡೆದಿದ್ದು, 50 MP + 13 MP ರಿಯರ್ ಕ್ಯಾಮೆರಾ ಹಾಗೂ 32 MP ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದೆ. ಉಳಿದಂತೆ ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ.

ಉತ್ತಮ ಫೋನ್‌ ಬೇಕು ಅನ್ನೋರಿಗೆ ಇವೇ ಬೆಸ್ಟ್‌ ,12 GB RAM

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ 5G: ಈ ಫೋನ್‌ (Samsung Galaxy S23 Ultra 5G) 12 GB RAM, 256 GB ಇಂಟರ್‌ ಸ್ಟೋರೇಜ್‌ನಲ್ಲಿ ಕಾಣಿಸಿಕೊಂಡಿದ್ದು, ಇದರ ಬೆಲೆ 99,999ರೂ.ಗಳಾಗಿದೆ. ಈ ಫೋನ್ 6.8 ಇಂಚಿನ ಪಂಚ್ ಹೋಲ್ ಶೈಲಿಯ ಡಿಸ್‌ಪ್ಲೇ ಪಡೆದಿದ್ದು, 1440 x 3088 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿದೆ. ಜೊತೆಗೆ ಸ್ನಾಪ್‌ಡ್ರಾಗನ್ 8 ಜನ್‌ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 200  MP ಯೊಂದಿಗೆ ಕ್ವಾಡ್ ರಿಯರ್ ಹಾಗೂ 12 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಇದು 45W ಫಾಸ್ಟ್ ಚಾರ್ಜಿಂಗ್‌ ಬೆಂಬಲ ಪಡೆದಿದೆ.

ಒನ್‌ಪ್ಲಸ್ ನಾರ್ಡ್ CE 3: ಈ ಫೋನ್‌ (OnePlus Nord CE 3) ಸಹ 12GB RAM + 256GB ವೇರಿಯಂಟ್‌ನಲ್ಲಿ ಲಭ್ಯ ಇದ್ದು, 28,667ರೂ.ಗಳ ಬೆಲೆಯಲ್ಲಿ ಲಭ್ಯ ಇದೆ. ಇದಕ್ಕೆ ಆನ್‌ಲೈನ್‌ನಲ್ಲಿ ಅಷ್ಟೇನು ಆಫರ್ ನೀಡಲಾಗಿಲ್ಲ. ಜೊತೆಗೆ ಈ ಫೋನ್ 6.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ 1080 x 2412 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಸ್ನಾಪ್‌ಡ್ರಾಗನ್ 782G ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 50 MP + 8 MP + 2 MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 16 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಉಳಿದಂತೆ 5000 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಇದು ಕಾಣಿಸಿಕೊಂಡಿದೆ.

ಉತ್ತಮ ಫೋನ್‌ ಬೇಕು ಅನ್ನೋರಿಗೆ ಇವೇ ಬೆಸ್ಟ್‌ ,12 GB RAM

ರಿಯಲ್‌ಮಿ 11 ಪ್ರೊ ಪ್ಲಸ್: ಈ ಸ್ಮಾರ್ಟ್‌ಫೋನ್‌ (Realme 11 Pro Plus) ಸಹ 12GB RAM + 256GB ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ ಇದೆ. ಇದು 29,490ರೂ.ಗಳ ಬೆಲೆಯಲ್ಲಿ ಲಭ್ಯ. ಈ ಫೋನ್ 6.7 ಇಂಚಿನ 1080 x 2412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಇರುವ 120 Hz ರಿಫ್ರೆಶ್‌ ರೇಟ್‌ ಆಯ್ಕೆಯ ಡಿಸ್‌ಪ್ಲೇ ಹೊಂದಿದೆ. ಇದರ ಜೊತೆಗೆ ಡೈಮೆನ್ಸಿಟಿ 7050 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 200 MP + 8 MP + 2 MP ಯ ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ.

Best Mobiles in India

English summary
Motorola Moto G54 5G,Motorola Edge 40 Neo, Samsung Galaxy S23 Ultra 5G, Realme 11 Pro Plus, OnePlus Nord CE 3 and more smartphones have 12 GB RAM.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+