ಗ್ಯಾಲಕ್ಸಿ S23 VS ಗ್ಯಾಲಕ್ಸಿ S22: ವ್ಯತ್ಯಾಸಗಳೇನು? ಗ್ಯಾಲಕ್ಸಿ S23 ಖರೀದಿಸಬಹುದೇ?
ದಕ್ಷಿಯ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 (Samsung Galaxy S23) ಸ್ಮಾರ್ಟ್‌ಫೋನ್ ಸರಣಿಯನ್ನು ಅನಾವರಣ ಮಾಡಿದೆ. ಈ ಸರಣಿಯು ಮೂರು ಸ್ಮಾರ್ಟ್‌ಫೋನ್ ಮಾಡೆಲ್‌ಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S23, ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಪ್ಲಸ್ ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ಆಗಿವೆ.

ಅಂದಹಾಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 (Samsung Galaxy S23) ಸ್ಮಾರ್ಟ್‌ಫೋನ್ ಸರಣಿಯು ಈ ಹಿಂದಿನ ಗ್ಯಾಲಕ್ಸಿ S22 ಸರಣಿಯ ಮುಂದುವರಿದ ಭಾಗವಾಗಿದೆ. ನೂತನ ಸರಣಿಯಲ್ಲಿರುವ ಮೂರು ಮಾಡೆಲ್‌ಗಳ ಪೈಕಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಕೆಲವೊಂದು ಫೀಚರ್ಸ್‌ಗಳಿಂದ ಹೆಚ್ಚಿನ ಗಮನ ಸೆಳೆದಿದೆ. ಹಾಗಾದರೆ ಈ ಹಿಂದಿನ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಫೋನ್‌ಗಿಂತ ಇದು ಹೇಗೆ ಭಿನ್ನ? ನೂತನ ಫೋನ್ ಯಾವೆಲ್ಲಾ ಅಪ್‌ಡೇಟ್ ಪಡೆದಿದೆ? ಈ ಬಗ್ಗೆ ಮುಂದಿನ ಸ್ಲೈಡ್‌ಗಳಲ್ಲಿ ತಿಳಿಯೋಣ ಬನ್ನಿರಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೀಚರ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸ್ಮಾರ್ಟ್‌ಫೋನ್ 6.1 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದ್ದು ಜೊತೆಗೆ 120Hz ರಿಫ್ರೆಶ್ ರೇಟ್ ಅನ್ನು ಪಡೆದಿದೆ. ಹಾಗೆಯೇ 240Hz ಗೇಮಿಂಗ್ ಟಚ್ ಸ್ಯಾಂಪಲ್ ಪಡೆದಿದೆ. ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ನಿಂದ ರಕ್ಷಿಸಲಾಗಿದೆ. ಇನ್ನು ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 Gen 2 ಪ್ರೊಸೆಸರ್ ಬೆಂಬಲ ಹೊಂದಿದ್ದು, 8GB RAM ಮತ್ತು 256 GB ವೇರಿಯಂಟ್ ಆಯ್ಕೆ ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಪಡೆದಿದೆ. ಇದರೊಂದಿಗೆ 3,900mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಫೀಚರ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸ್ಮಾರ್ಟ್‌ಫೋನ್ 6.1 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದ್ದು ಜೊತೆಗೆ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಕ್ಷಿಸಲಾಗಿದೆ. ಇನ್ನು ಈ ಫೋನ್ ಆಕ್ಟಾ ಕೋರ್ 4nm SoC ಪ್ರೊಸೆಸರ್ ಬೆಂಬಲ ಹೊಂದಿದ್ದು, 8 GB RAM ಮತ್ತು 256 GB ವೇರಿಯಂಟ್ ಆಯ್ಕೆ ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಪಡೆದಿದೆ. ಇದರೊಂದಿಗೆ 3,700mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ.

ಗ್ಯಾಲಕ್ಸಿ S23 vs ಗ್ಯಾಲಕ್ಸಿ S22 : ಯಾವ ಪ್ರೊಸೆಸರ್ ಬೆಸ್ಟ್?
ಪ್ರೊಸೆಸರ್ ವಿಭಾಗದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಫೋನ್‌ಗಿಂತ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೋನಿನಲ್ಲಿ ಅಪ್‌ಗ್ರೇಡ್ ಮಾಡಲಾಗಿದೆ. ಗ್ಯಾಲಕ್ಸಿ S22 ಫೋನ್ Exynos 2200 ಪ್ರೊಸೆಸರ್ ಬಲ ಪಡೆದಿದ್ದರೆ, ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೋನಿನಲ್ಲಿ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 Gen 2 ಪ್ರೊಸೆಸರ್ ನೀಡಲಾಗಿದೆ. ಇದರೊಂದಿಗೆ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಸಹ ಒದಗಿಸಲಾಗಿದೆ. ನೂತನ ಪ್ರೊಸೆಸರ್ ಹಿಂದಿನ ಪ್ರೊಸೆಸರ್‌ಗಿಂತ ಉತ್ತಮ ಎನ್ನಬಹುದಾಗಿದೆ.
ಗ್ಯಾಲಕ್ಸಿ S23 vs ಗ್ಯಾಲಕ್ಸಿ S22 : ಬ್ಯಾಟರಿ ಭಿನ್ನತೆ ಏನು?
ಬ್ಯಾಟರಿ ವಿಭಾಗದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಫೋನ್‌ಗಿಂತ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೋನಿನಲ್ಲಿ ಹೆಚ್ಚಿನ ಬದಲಾವಣೆ ಏನು ಮಾಡಿಲ್ಲ. ಗ್ಯಾಲಕ್ಸಿ S22 ಫೋನ್ 3,700mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದ್ದು, ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೋನ್ 3,900mAh ಬ್ಯಾಟರಿ ಪವರ್ ಪಡೆದಿದೆ. ನೂತನ ಫೋನಿನಲ್ಲಿ ಕೇವಲ 200mAh ಬ್ಯಾಟರಿ ಹೆಚ್ಚಳ ಮಾಡಿದ್ದಾರೆ.
ಗ್ಯಾಲಕ್ಸಿ S23 vs ಗ್ಯಾಲಕ್ಸಿ S22 : ಕ್ಯಾಮೆರಾ ಯಾವುದು ಉತ್ತಮ?
ಸ್ಯಾಮ್‌ಸಂಗ್ ಗ್ಯಾಲಕ್ಸಿ S ಸರಣಿಯ ಫೋನ್‌ಗಳಲ್ಲಿ ಕ್ಯಾಮೆರಾ ಪ್ರಮುಖ ಹೈಲೈಟ್ಸ್‌ಗಳಲ್ಲಿ ಒಂದಾಗಿದೆ. ಆದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೋನಿನಲ್ಲಿ, ಗ್ಯಾಲಕ್ಸಿ S22 ಫೋನ್‌ಗಿಂತ ಹೆಚ್ಚಿನ ಕ್ಯಾಮೆರಾ ಸೆನ್ಸಾರ್ ಆಯ್ಕೆ ನೀಡಿಲ್ಲ. ನೂತನ ಫೋನ್ ಸಹ ಹಿಂದಿನ ಫೋನ್‌ನಂತೆ ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಆದ್ರೆ ಸೆಲ್ಫಿ ಕ್ಯಾಮೆರಾ 12 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಗ್ಯಾಲಕ್ಸಿ S22 ಫೋನಿನಲ್ಲಿ ಸೆಲ್ಫಿ ಕ್ಯಾಮೆರಾವು 10 ಮೆಗಾ ಪಿಕ್ಸಲ್‌ನಲ್ಲಿದೆ.
ಕೊನೆಯ ಮಾತು
ಸ್ಯಾಮ್‌ಸಂಗ್ ಸಂಸ್ಥೆ ಗ್ಯಾಲಕ್ಸಿ S ಸರಣಿಯ ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಹೆಚ್ಚಿದೆ. ಈ ನಿಟ್ಟಿನಲ್ಲಿ ನೂತನ ಸರಣಿಯ ಫೋನ್‌ಗಳಲ್ಲಿ ನಿರೀಕ್ಷೆ ಹೆಚ್ಚಿರುತ್ತವೆ. ಆದರೆ ನೂತನವಾಗಿ ಬಿಡುಗಡೆ ಆಗಿರುವ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್ ನಿರೀಕ್ಷಿತ ಅಪ್‌ಡೇಟ್ ಪಡೆದುಕೊಂಡಿಲ್ಲ. ಪ್ರೊಸೆಸರ್, ಬ್ಯಾಟರಿ ಹಾಗೂ ಡಿಸ್‌ಪ್ಲೇ ವಿಭಾಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಅದಾಗ್ಯೂ, ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್ ಉತ್ತಮ ಪ್ರೀಮಿಯಂ ಸ್ಮಾರ್ಟ್‌ಫೋನ್ ಎನ್ನಬಹುದಾಗಿದೆ.


Click it and Unblock the Notifications








