ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಮತ್ತು ಗ್ಯಾಲಕ್ಸಿ S24+ ಲಾಂಚ್: ಫೀಚರ್ಸ್ ತಿಳಿದ್ರೆ, ನೀವು ಶಾಕ್!
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆಯ ಬಹು ನಿರೀಕ್ಷಿತ ಗ್ಯಾಲಕ್ಸಿ S24 ಸ್ಮಾರ್ಟ್‌ಫೋನ್ ಸರಣಿ ಬಿಡುಗಡೆ ಆಗಿದೆ. ಸಾಕಷ್ಟು ಕುತೂಹಲ ಮೂಡಿಸಿದ್ದ, ಈ ಸರಣಿಯ ಗ್ಯಾಲಕ್ಸಿ S24, ಗ್ಯಾಲಕ್ಸಿ S24 ಪ್ಲಸ್ ಹಾಗೂ ಗ್ಯಾಲಕ್ಸಿ S24 ಅಲ್ಟ್ರಾ ಮಾಡೆಲ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ ಇತರೆ ಕೆಲವು ಉತ್ಪನ್ನ ಅನಾವರಣ ಮಾಡಿದೆ.
ಹೌದು, ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿ ಆಯೋಜಿಸಿದ್ದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ 2024 (Samsung Galaxy Unpacked 2024) ಕಾರ್ಯಕ್ರಮದಲ್ಲಿ ಸಂಸ್ಥೆಯು ಗ್ಯಾಲಕ್ಸಿ S24 ಸರಣಿಯನ್ನು ಲಾಂಚ್ ಮಾಡಿದೆ. ಈ ಸರಣಿಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿ S24+ ಗಮನ ಸೆಳೆದಿವೆ.

ಈ ಎರಡು ಫೋನ್‌ಗಳು ಕೆಲವು ಭಿನ್ನತೆಗಳನ್ನು ಪಡೆದಿದ್ದರೂ, ಕೆಲವೊಂದು ಆಯ್ಕೆಗಳಲ್ಲಿ ಸಾಮ್ಯತೆ ಹೊಂದಿವೆ. ತ್ರಿವಳಿ ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿವೆ. ಹಾಗಾದರೇ ಈ ಎರಡು ಫೋನ್‌ಗಳ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಫೀಚರ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್ 6.2 ಇಂಚಿನ ಡೈನಾಮಿಕ್ AMOLED FHD+ 2X ಮಾದರಿಯ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಸಪೋರ್ಟ್ ಪಡೆದಿದೆ. ಹಾಗೆಯೇ 2,600 nits ಬ್ರೈಟ್ನೆಸ್ ಪಡೆದಿದ್ದು, ಇದರ ಸ್ಕ್ರೀನ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿದೆ. ಇದು ಅಲ್ಯೂಮಿನಿಯಮ್ ಅಮೋರಾ ಫ್ರೇಮ್ ರಚನೆ ಪಡೆದಿದೆ.

ಹಾಗೆಯೇ ಈ ಫೋನ್ ಸಂಸ್ಥೆಯ Exynos 2400 SoC ಚಿಪ್ಸೆಟ್ ಪ್ರೊಸೆಸರ್ ಪವರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 14 ಓಎಸ್ ಸಪೋರ್ಟ್‌ನೊಂದಿಗೆ ಕಾರ್ಯ ನಿರ್ವಹಿಸಲಿದೆ. ಅಲ್ಲದೇ ಈ ಫೋನ್ 8GB RAM + 128GB ಮತ್ತು 256GB ಸ್ಟೋರೇಜ್ ಹೊಂದಿದೆ.
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅನ್ನು ಹೊಂದಿದ್ದು, ತೃತೀಯ ಕ್ಯಾಮೆರಾವು 10 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿದೆ. ಇದಲ್ಲದೆ 12 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಅಲ್ಲದೇ ಈ ಸ್ಮಾರ್ಟ್‌ಫೋನ್ 4000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಇದು 25W ವೈರ್ಡ್ ಚಾರ್ಜಿಂಗ್ ಹಾಗೂ 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ವೈರ್‌ಲೆಸ್ ಪವರ್‌ಶೇರ್ ಸಪೋರ್ಟ ಮಾಡುತ್ತದೆ. ಇನ್ನು ಈ ಸ್ಮಾರ್ಟ್‌ಫೊನ್ ಅಂಬರ ಯಲ್ಲೋ, ಕೋಬಾಲ್ಟ್ ವೈಲೇಟ್, ಮಾರ್ಬಲ್ ಗ್ರೇ ಮತ್ತು ಓನಿಕ್ಸ್ ಬ್ಲ್ಯಾಕ್ ಕಲರ್ ಆಯ್ಕೆ ಪಡೆದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S24+ ಫೀಚರ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S24+ ಮೊಬೈಲ್ 6.7 ಇಂಚಿನ ಡೈನಾಮಿಕ್ AMOLED FHD+ 2X ಮಾದರಿಯ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಜೊತೆಗೆ 2,600 nits ಬ್ರೈಟ್ನೆಸ್ ಪಡೆದಿದೆ. ಹಾಗೆಯೇ Exynos 2400 SoC ಚಿಪ್ಸೆಟ್ ಪ್ರೊಸೆಸರ್ ಅನ್ನು ಪಡೆದಿದ್ದು, ಆಂಡ್ರಾಯ್ಡ್ 14 ಓಎಸ್ ಸಪೋರ್ಟ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೇ ಈ ಫೋನ್ 12GB of RAM + 256GB ಹಾಗೂ 512GB ಆಯ್ಕೆಗಳನ್ನು ಪಡೆದಿದೆ.
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಅವುಗಳು ಕ್ರಮವಾಗಿ 50 ಮೆಗಾಪಿಕ್ಸೆಲ್ + 12 ಮೆಗಾಪಿಕ್ಸೆಲ್ + 10 ಮೆಗಾಪಿಕ್ಸೆಲ್ ಸೆನ್ಸಾರ್ ನಲ್ಲಿ ಇವೆ. ಇದಲ್ಲದೆ 12 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಪಡೆದಿದೆ.
ಹಾಗೆಯೇ ಈ ಫೋನ್ 4,900mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, 45W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ ಹಾಗೂ 15W ಚಾರ್ಜಿಂಗ್ ವೇಗವನ್ನು ನೀಡುವ ವೇಗದ ವೈರ್‌ಲೆಸ್ ಚಾರ್ಜಿಂಗ್ 2.0 ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗಾಗಿ ವೈರ್‌ಲೆಸ್ ಪವರ್‌ಶೇರ್ ಬೆಂಬಲವನ್ನು ಹೊಂದಿದೆ.
ಬೆಲೆ ಎಷ್ಟು ?
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಫೋನಿನ 8GB + 128GB ವೇರಿಯಂಟ್ ಬೆಲೆಯು $799 (ಭಾರತದಲ್ಲಿ ಅಂದಾಜು 65,500ರೂ). ಅದೇ ರೀತಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S24+ ಫೋನಿನ 12GB + 256GB ಬೆಲೆಯು $999 (ಭಾರತದಲ್ಲಿ ಅಂದಾಜು 81,000ರೂ.) ಈ ಫೋನ್ ಸರಣಿಯ ಮಾರಾಟವು ಇದೇ ಜನೆವರಿ 31 ರಂದು ಪ್ರಾರಂಭ ಆಗಲಿದೆ.


Click it and Unblock the Notifications








