Samsung: ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE ಶೀಘ್ರದಲ್ಲೇ ಲಾಂಚ್! ಫೀಚರ್ಸ್ ಏನು?
ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಿಗೆ (Samsung Galaxy Smartphone) ಮಾರುಕ್ಟಟೆಯಲ್ಲಿ ವಿಶೇಷವಾದ ಬೇಡಿಕೆ ಇದೆ. ಅದರಲ್ಲೂ ಭಾರತ ಸ್ಯಾಮ್‌ಸಂಗ್ ಗೆ ದೊಡ್ಡ ಮಾರುಕಟ್ಟೆಯಾಗಿದೆ. ಈ ನಡುವೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE ಸ್ಮಾರ್ಟ್‌ಫೋನ್ (Samsung Galaxy S24 FE Smartphone) ಅನ್ನು ಲಾಂಚ್ ಮಾಡಲು ಎಲ್ಲಾ ಸಿದ್ಧತೆ ಮಾಡಲಾಗುತ್ತಿದೆ.
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE ಸ್ಮಾರ್ಟ್‌ಫೋನ್ ಇನ್ನೇನು ಕೆಲವೇ ತಿಂಗಳಲ್ಲಿ ಅನಾವರಣ ಆಗಲಿದೆ ಎಂದು ತಿಳಿದುಬಂದಿದೆ. ಇನ್ನು ಈ ಫೋನ್‌ನ ಹಿಂದಿನ ಆವೃತ್ತಿಯಾದ ಗ್ಯಾಲಕ್ಸಿ S23 FE ಅನ್ನು ಅಕ್ಟೋಬರ್ 2023 ರಲ್ಲಿ ಅನಾವರಣ ಮಾಡಲಾಗಿತ್ತು. ಹಾಗಿದ್ರೆ, ಈ ಮುಂಬರುವ ಈ ಫೋನ್‌ನ ಲೀಕ್ ಫೀಚರ್ಸ್ ಏನು?, ಯಾವಾಗ ಲಾಂಚ್ ಆಗಬಹುದು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE ಸ್ಮಾರ್ಟ್‌ಫೋನ್: ಇತ್ತೀಚಿನ ಕೆಲವು ವರದಿಗಳ ಪ್ರಕಾರ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE ಬಿಡುಗಡೆಯು ಅಕ್ಟೋಬರ್‌ಗಿಂತ ಮುಂಚಿತವಾಗಿ ಆಗಲಿದೆ ಎನ್ನಲಾಗಿದೆ. ಈ ನಡುವೆ ಸ್ಯಾಮ್‌ಸಂಗ್ ಪೂರೈಕೆದಾರರು ಗ್ಯಾಲಕ್ಸಿ S24 FE ಗಾಗಿ ಡಿಸ್ಪ್ಲೇ ಡ್ರೈವರ್ ಚಿಪ್‌ಗಳನ್ನು ಸಾಮೂಹಿಕವಾಗಿ ಉತ್ಪಾದಿಸಲು ಆರಂಭ ಮಾಡಿದ್ದಾರೆ. ಇದರ ಜೊತೆಗೆ ಈ ಫೋನ್ ಅನ್ನು ಮಿಲಿಯನ್‌ಗಟ್ಟಲೆ ತಯಾರಿ ಮಾಡುವ ಗುರಿಯನ್ನು ಸ್ಯಾಮ್‌ಸಂಗ್ ಹೊಂದಿದೆ ಎನ್ನಲಾಗಿದೆ. ಅಂದರೆ ಮೂರು ಮಿಲಿಯನ್ ಫೋನ್‌ಗಳನ್ನು ತಯಾರು ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಈ ಫೋನ್‌ನ ಕೆಲವು ಲೀಕ್ ಫೀಚರ್ಸ್ ಕಡೆ ಕಣ್ಣಾಯಿಸಿದರೆ ಈ ಫೋನ್ ಎಕ್ಸಿನೋಸ್ 2400 ಅಥವಾ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್ ಅನ್ನು ಹೊಂದಿರಬಹುದು ಎಂದು ತಿಳಿದುಬಂದಿದ್ದು, ಈ ಪ್ರೊಸೆಸರ್ ಕ್ರಮವಾಗಿ ವೆನಿಲ್ಲಾ ಗ್ಯಾಲಕ್ಸಿ S24 ಮತ್ತು ಗ್ಯಾಲಕ್ಸಿ S24 ಅಲ್ಟ್ರಾದಲ್ಲಿ (Vanilla Galaxy S24 and Galaxy S24 Ultra) ಕಂಡುಬಂದಿವೆ. ಇದೇ ಚಿಪ್ ಅನ್ನು ಮುಂಬರುವ ಫೋನ್ ಹೊಂದಲಿದೆ ಎಂದು ಈ ಮೂಲಕ ಊಹೆ ಮಾಡಲಾಗಿದೆ.

ಅದಾಗ್ಯೂ ಜಾಗತಿಕವಾಗಿ ಎಕ್ಸಿನೋಸ್ ವೇರಿಯಂಟ್ ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದ್ದು, ಆಯ್ದ ಮಾರುಕಟ್ಟೆಗಳಿಗೆ ಸ್ನಾಪ್‌ಡ್ರಾಗನ್ ವೇರಿಯಂಟ್ ಅನ್ನು ಪರಿಚಯಿಸಲಿದೆ ಎಂದು ತಿಳಿದುಬಂದಿದೆ. ಅಲ್ಲದೆ ಈ ಫೋನ್ 12GB LPDDR5X RAM ಜೊತೆಗೆ 128GB UFS 3.1 ಇಂಟರ್ ಸ್ಟೋರೇಜ್ ಅಥವಾ 256GB UFS 4.0 ಸ್ಟೋರೇಜ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂದು ಲೀಕ್ ಮಾಹಿತಿ ಮೂಲಕ ತಿಳಿದುಬಂದಿದೆ.
ಈ ಫೋನ್ ಬ್ಯಾಟರಿ ವಿಚಾರಕ್ಕೆ ಬಂದರೆ ಇದು 4,500mAh ಸಾಮರ್ಥ್ಯದ ಬ್ಯಾಟರಿ ಹೊಂದಿರಬಹುದು ಎಂದು ಹೇಳಲಾಗಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 6.1-ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿರಬಹುದು ಎಂದು ತಿಳಿದುಬಂದಿದೆ. ಇನ್ನು ಈ ಫೀಚರ್ಸ್ ಅಥವಾ ಲಾಂಚ್ ಬಗ್ಗೆ ಸ್ಯಾಮ್‌ಸಂಗ್ ನಿಖರ ಮಾಹಿತಿಯನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಆದರೂ ಸಹ ಈ ಸ್ಮಾರ್ಟ್‌ಫೋನ್‌ನಿಂದ ನವೀಕರಿಸಿದ ಕ್ಯಾಮೆರಾ ಮತ್ತು ಫಾಸ್ಟ್ ಚಾರ್ಜಿಂಗ್ ಫೀಚರ್ಸ್ ಅನ್ನು ನಾವು ನಿರೀಕ್ಷಿಸಬಹುದಾಗಿದೆ.

ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE 5G (Samsung Galaxy S23 FE 5G) ಸ್ಮಾರ್ಟ್‌ಫೋನ್ ಎಕ್ಸಿನೋಸ್ 2200 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 8 GB RAM ಆಯ್ಕೆ ಪಡೆದುಕೊಂಡಿದೆ. ಅಲ್ಲದೆ 6.4 ಇಂಚಿನ ಡಿಸ್‌ಪ್ಲೇ ಮತ್ತು 50 MP + 12 MP + 8 MP ನ ಟ್ರಿಪಲ್ ಕ್ಯಾಮೆರಾ ರಚನೆ ಹಾಗೂ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 10 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಅಲ್ಲದೆ ಇದರಲ್ಲಿ 4,500 mAh ಸಾಮರ್ಥ್ಯದ ಬ್ಯಾಟರಿಯನ್ನು ನೋಡಬಹುದಾಗಿದೆ.


Click it and Unblock the Notifications








