Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಫೋನ್‌ನಲ್ಲಿ ರಿಯಲ್‌ ಟೈಮ್ ಕರೆ ಅನುವಾದ! ಇಷ್ಟೇ ಅಲ್ಲ....

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫೋನ್‌ಗಳು (Samsung Galaxy Phone) ಭಿನ್ನ ಹಾಗೂ ವಿಶೇಷ ಫೀಚರ್ಸ್‌ನೊಂದಿಗೆ ಐಫೋನ್‌ಗಳ (iPhones) ಜೊತೆಗೆ ನೇರವಾಗಿ ಸೆಣಸುತ್ತವೆ. ಈ ಕಾರಣಕ್ಕೆ ಐಫೋನ್‌ಗಳಿಗೆ ಇರುವ ಬೇಡಿಕೆಯಷ್ಟೇ ಈ ಫೋನ್‌ಗಳಿಗೂ ಬೇಡಿಕೆ ಇದೆ. ಈ ನಡುವೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ (Samsung Galaxy S24 series) ಫೋನ್‌ ಸಂಬಂಧ ಸಾಕಷ್ಟು ಫೀಚರ್ಸ್‌ ಲೀಕ್‌ ಆಗಿದ್ದು, ಇವುಗಳನ್ನು ಗಮನಿಸಿದ್ರೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ದೊಡ್ಡ ಅಲೆ ಏಳುವುದು ಪಕ್ಕಾ ಎನ್ನಲಾಗಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿಯು ಸ್ಯಾಮ್‌ಸಂಗ್‌ನ ಮೊದಲ ಜನರೇಟಿವ್ ಎಐ ಫೋನ್‌ಗಳೆಂದು (Generative AI phone) ಕರೆಸಿಕೊಳ್ಳುತ್ತವೆ ಎನ್ನುವ ಮಾಹಿತಿ ಇದೆ. ಅದರಂತೆ ಈಗ ನೈಜ-ಸಮಯದ ಕರೆ ಅನುವಾದಗಳು(Real-time call translations) ಸೇರಿದಂತೆ ಅನೇಕ ಅಗತ್ಯ ಎಐ ಫೀಚರ್ಸ್‌ ಅನ್ನು ಈ ಫೋನ್‌ಗಳು ಹೊಂದಿರಲಿವೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹಾಗಿದ್ರೆ, ಏನಿದು ಕರೆ ಅನುವಾದ?, ಈ ಫೋನ್‌ ಏನೆಲ್ಲಾ ಇತರೆ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಫೋನ್‌ನಲ್ಲಿ ರಿಯಲ್‌ ಟೈಮ್ ಕರೆ ಅನುವಾದ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24: ಈ ಫೋನ್‌ಗಳಲ್ಲಿ ನೈಜ-ಸಮಯದ ಕರೆ ಅನುವಾದಗಳು ಮತ್ತು ಸರ್ಕಲ್‌ ಸರ್ಚ್‌ನಂತಹ (Circle Search) ಎಐ ಫೀಚರ್ಸ್‌ ಅನ್ನು ಹೊಂದಿರಲಿದೆ ಎಂಬ ವದಂತಿಗಳಿವೆ. ಮೊದಲೇ ತಿಳಿಸಿದಂತೆ ಈ ಸರಣಿಯ ಫೋನ್‌ಗಳು ಸ್ಯಾಮ್‌ಸಂಗ್‌ನ ಮೊದಲ ಜನರೇಟಿವ್ ಎಐ ಫೋನ್‌ಗಳಾಗಿ ಹೆಸರು ಪಡೆಯಲಿವೆ ಎನ್ನುವ ಮಾಹಿತಿ ಸಹ ತಿಳಿದುಬಂದಿದೆ. ಅಷ್ಟೇ ಅಲ್ಲದೆ 17 ಜನವರಿ 2024 ರಂದು ಈ ಫೋನ್‌ಗಳು ಲಾಂಚ್‌ ಆಗಲಿವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿಯು ಪ್ರಮುಖವಾಗಿ ಕೃತಕ ಬುದ್ಧಿಮತ್ತೆಗೆ ಹೆಚ್ಚು ಕೇಂದ್ರೀಕರಿಸಿದ್ದು, ಇದರಲ್ಲಿ ಗ್ಯಾಲಕ್ಸಿ S24, ಗ್ಯಾಲಕ್ಸಿ S24 ಪ್ಲಸ್‌ ಮತ್ತು ಗ್ಯಾಲಕ್ಸಿ S24 ಅಲ್ಟ್ರಾ ಫೋನ್‌ಗಳು ಲಾಂಚ್‌ಚ ಆಗಲಿವೆ. ಈ ಎಲ್ಲಾ ಫೋನ್‌ಗಳು ಸಹ ಈ ವಿಶೇಷ ಎಐ ಫೀಚರ್ಸ್‌ ಅನ್ನು ಹೊಂದಿರಲಿವೆ ಎನ್ನುವ ಮಾತು ಕೇಳಿಬಂದಿದೆ. ಈ ಮೂಲಕ ಗೂಗಲ್‌ ಪಿಕ್ಸೆಲ್ 8 ನೊಂದಿಗೆ ನೇರ ಸ್ಪರ್ಧೆಗೆ ಇಳಿಯಲಿದೆ ಎಂದು ಟೆಕ್‌ ವಲಯದಲ್ಲಿ ಚರ್ಚೆ ಆಗುತ್ತಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಫೋನ್‌ನಲ್ಲಿ ರಿಯಲ್‌ ಟೈಮ್ ಕರೆ ಅನುವಾದ!

ಎಕ್ಸ್‌ ನಲ್ಲಿ @AhmedQwaider888 ಹ್ಯಾಂಡಲ್ ಮೂಲಕ ಈ ಫೋನ್‌ನ ಕೆಲವು ಮಾಹಿತಿಯನ್ನು ಉಲ್ಲೇಖ ಮಾಡಲಾಗಿದೆ. ಅದರಂತೆ, ಗ್ಯಾಲಕ್ಸಿ S24 ಅಲ್ಟ್ರಾ ಎಐ ಚಾಲಿತ ಸರ್ಕಲ್ ಸರ್ಚ್‌ ಫೀಚರ್ಸ್‌ ಅನ್ನು ಈ ಫೋನ್‌ ಹೊಂದಿರಲಿದೆಯಂತೆ. ಅದರಲ್ಲೂ ಗ್ಯಾಲಕ್ಸಿ S24 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳು ವೃತ್ತಾಕಾರದ ಪದಗಳನ್ನು ಆಟೋಮ್ಯಾಟಿಕ್‌ ಆಗಿ ಹುಡುಕಲು ಅನುಮತಿಸುತ್ತದೆ ಎನ್ನಲಾಗಿದೆ.

ಇದರೊಂದಿಗೆ ಹೊಸ ವಾಯ್ಸ್‌ ರೆಕಾರ್ಡರ್ ಫೀಚರ್ಸ್‌ ಬಗ್ಗೆಯೂ ಉಲ್ಲೇಖ ಮಾಡಲಾಗಿದ್ದು, ಇದು ಹತ್ತು ವಾಯ್ಸ್‌ಗಳನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ. ಜೊತೆಗೆ ಸಂಭಾಷಣೆಗಳನ್ನು ಭಾಷಾಂತರಿಸಲು ಮತ್ತು ಮೀಟಿಂಗ್‌ನ ಸಾರಾಂಶಗಳನ್ನು ರಚಿಸಲು ಈ ರೆಕಾರ್ಡರ್ ಅನುಕೂಲ ಮಾಡಿಕೊಡುತ್ತದೆ ಎಂದು ಹೇಳಲಾಗಿದೆ. ಇನ್ನು ಆಡಿಯೊ ಕರೆಗಳ ಸಮಯದಲ್ಲಿ 14 ಭಾಷೆಗಳಲ್ಲಿ ನೈಜ ಸಮಯದ ಭಾಷಾಂತರಗಳಿಗಾಗಿ ಡಿವೈಸ್‌ನಲ್ಲಿ ಎಐ ಫೀಚರ್ಸ್‌ ಅನ್ನು ನೀಡಲಾಗಿದೆ ಎಂಬ ವದಂತಿಗಳಿವೆ. ಅದಾಗ್ಯೂ ಯಾವುದೇ ಥರ್ಡ್-ಪಾರ್ಟಿ ಆಪ್‌ಗಳ ಅಗತ್ಯವಿಲ್ಲದೇ 35 ಭಾಷೆಗಳಲ್ಲಿ ಅನುವಾದ ಸಾಮರ್ಥ್ಯಗಳನ್ನು ಲೈನ್‌ಅಪ್ ಹೆಚ್ಚಿಸಬಹುದು ಎಂದು ಟಿಪ್‌ಸ್ಟರ್ ಸೂಚಿಸಿದ್ದಾರೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಫೋನ್‌ನಲ್ಲಿ ರಿಯಲ್‌ ಟೈಮ್ ಕರೆ ಅನುವಾದ!

ಇನ್ನು ಈ ಫೋನ್‌ಗಳ ಸಂಬಂಧ ಸ್ಯಾಮ್‌ಸಂಗ್ ಎಐ ಫೋನ್ ಮತ್ತು ಎಐ ಸ್ಮಾರ್ಟ್‌ಫೋನ್‌ಗಾಗಿ ಪೇಟೆಂಟ್ ಅನ್ನು ಸಲ್ಲಿಸಿದೆ ಎಂದು ವರದಿಯಾಗಿದೆ. ಈ ಕಾರಣಕ್ಕೆ ಗ್ಯಾಲಕ್ಸಿ S24 ಸರಣಿ ಬಹಳ ಸದ್ದು ಮಾಡುತ್ತಿದೆ. ಉಳಿದಂತೆ ಉತ್ತಮ ಬ್ಯಾಟರಿ ಬ್ಯಾಕಪ್‌ ನೀಡಲು ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಇವಿ ತಂತ್ರಜ್ಞಾನವನ್ನು (EV technology) ಬಳಕೆ ಮಾಡಲಾಗುತ್ತದೆ ಎನ್ನುವ ಮಾತುಗಳು ಕೇಳಿಬಂದಿವೆ. ಇದು ಬ್ಯಾಟರಿ ಸಾಮರ್ಥ್ಯದಲ್ಲಿ ಶೇಕಡಾ 10 ರಷ್ಟು ವರ್ಧನೆಯನ್ನು ನೀಡುತ್ತದೆ.

Best Mobiles in India

English summary
There is information that the Samsung Galaxy S24 series is called Samsung's first Generative AI phone. Accordingly, it is now known that these phones will have many essential AI features including real-time call translations.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+