Home
ಸುದ್ದಿಜಾಲ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ ಫೀಚರ್ಸ್‌ ಲೀಕ್‌!..ದಂಗಾದ ಮೊಬೈಲ್‌ ಮಾರುಕಟ್ಟೆ!

ದಕ್ಷಿಣ ಕೊರಿಯಾ ಟೆಕ್ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆಯು ಗ್ಯಾಲಕ್ಸಿ S ಸರಣಿಯಲ್ಲಿ ಹೈ ಎಂಡ್ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಾ ಸಾಗಿ ಬಂದಿದೆ. ಆ ಸರಣಿಯ ಮುಂದುವರಿದ ಭಾಗವಾಗಿ ಇದೀಗ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಫೊನ್‌ ಸರಣಿ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಹೌದು, ಸ್ಯಾಮ್‌ಸಂಗ್‌ ಸಂಸ್ಥೆಯು ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸ್ಮಾರ್ಟ್‌ಫೋನ್‌ ಸರಣಿ ಲಾಂಚ್ ಮಾಡಲು ಉತ್ಸುಕವಾಗಿದ್ದು, ಶೀಘ್ರದಲ್ಲೇ (ಮುಂದಿನ ವರ್ಷದ ಆರಂಭದಲ್ಲಿ) ಮಾರುಕಟ್ಟೆಗೆ ಪರಿಚಯಿಸಲಿದೆ. ಆದರೆ ಆನ್‌ಲೈನ್‌ ಪ್ಲಾಟ್‌ಫಾರ್ಮ್ ಗಳಲ್ಲಿ ಗ್ಯಾಲಕ್ಸಿ S24 ಸರಣಿಯ ಫೀಚರ್ಸ್‌ಗಳು ಸೋರಿಕೆ ಆಗಿದ್ದು, ಫೋನ್‌ ಪ್ರಿಯರಲ್ಲಿ ಕುತೂಹಲ ಹೆಚ್ಚು ಮಾಡಿವೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ ಫೀಚರ್ಸ್‌ ಲೀಕ್‌!..ದಂಗಾದ ಮಾರುಕಟ್ಟೆ!

ಲೀಕ್ ಮಾಹಿತಿಯ ಪ್ರಕಾರ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸ್ಮಾರ್ಟ್‌ಫೋನ್‌ ಸರಣಿಯು ಗ್ಯಾಲಕ್ಸಿ S24, ಗ್ಯಾಲಕ್ಸಿ S24+ ಮತ್ತು ಗ್ಯಾಲಕ್ಸಿ S24 ಅಲ್ಟ್ರಾ ಮಾಡೆಲ್‌ಗಳನ್ನು ಇದು ಒಳಗೊಂಡಿದೆ. ಈ ಫೋನ್‌ಗಳ ಕೆಲವು ಎಕ್ಸ್‌ಕ್ಯೂಸಿವ್‌ ಫೀಚರ್ಸ್‌ ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಹಾಗಾದರೇ ಲೀಕ್ ಫೀಚರ್ಸ್‌ ಹೇಗಿವೆ ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ ಫೀಚರ್ಸ್‌ ಲೀಕ್‌!..ದಂಗಾದ ಮಾರುಕಟ್ಟೆ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ ನಿರೀಕ್ಷಿತ ಫೀಚರ್ಸ್

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ ಫೋನ್‌ 120Hz ರಿಫ್ರೆಶ್ ದರದೊಂದಿಗೆ 6.8 ಇಂಚಿನ QHD+ ಡಿಸ್ಪ್ಲೇ ಅನ್ನು ಹೊಂದಿರಲಿದ್ದು, ಟೈಟಾನಿಯಂ ಫ್ರೇಮ್ ರಚನೆ ಪಡೆದಿರಲಿದೆ. ಈ ಫೋನ್‌ 12GB RAM ಮತ್ತು 256GB, 512GB ಅಥವಾ 1TB ಸ್ಟೋರೇಜ್ ಆಯ್ಕೆಗಳನ್ನು ಪಡೆದಿರಲಿದ್ದು, ಸ್ನಾಪ್‌ಡ್ರಾಗನ್ 8 ಜೆನ್‌ 3 SoC ನಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ.

ಹಾಗೆಯೇ ಈ ಫೋನ್‌ 200 ಮೆಗಾ ಪಿಕ್ಸೆಲ್ ವೈಡ್ ಆಂಗಲ್ ಕ್ಯಾಮೆರಾ, 12 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಸೆನ್ಸಾರ್, 5x ಆಪ್ಟಿಕಲ್ ಜೂಮ್‌ನೊಂದಿಗೆ 50 ಮೆಗಾ ಪಿಕ್ಸೆಲ್ ಟೆಲಿಫೋಟೋ ಕ್ಯಾಮರಾ ಮತ್ತು 10 ಒಳಗೊಂಡಿರುವ ಕ್ವಾಡ್ ರಿಯರ್ ಕ್ಯಾಮೆರಾ ರಚನೆ ಪಡೆದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ ಇದು 12 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೌಲಭ್ಯ ಕೂಡಾ ಒಳಗೊಂಡಿರುವ ಸಾಧ್ಯತೆಗಳು ಇವೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ ಫೀಚರ್ಸ್‌ ಲೀಕ್‌!..ದಂಗಾದ ಮಾರುಕಟ್ಟೆ!

ಇದಲ್ಲದೇ ಈ ಫೋನ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರಲಿದ್ದು, ಸೂಪರ್ ಫಾಸ್ಟ್ ಚಾರ್ಜಿಂಗ್ 2.0 ಮತ್ತು ವೇಗದ ವೈರ್‌ಲೆಸ್ ಚಾರ್ಜಿಂಗ್ 2.0 ಗೆ ಸಪೋರ್ಟ್‌ ಬೆಂಬಲಿಸುವ ನಿರೀಕ್ಷೆಗಳಜು ಇವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್‌ ಬ್ಲೂಟೂತ್ 5.3, ವೈ-ಫೈ 7 ಮತ್ತು ಅಲ್ಟ್ರಾ ವೈಡ್ ಬ್ಯಾಂಡ್ ಸಂಪರ್ಕವನ್ನು ಒಳಗೊಂಡಿರುವ ನಿರೀಕ್ಷೆಗಳು ಇವೆ.


ಗ್ಯಾಲಕ್ಸಿ S24 ಮತ್ತು ಗ್ಯಾಲಕ್ಸಿ S24+ ನಿರೀಕ್ಷಿತ ಫೀಚರ್ಸ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಫೋನ್‌ 120Hz ರಿಫ್ರೆಶ್ ರೇಟ್‌ ಜೊತೆಗೆ 6.2 ಇಂಚಿನ ಪೂರ್ಣ HD+ ಸ್ಕ್ರೀನ್‌ ಪಡೆದಿರಲಿದೆ ಎಂದು ಹೇಳಲಾಗುತ್ತದೆ. ಆದರೆ ಗ್ಯಾಲಕ್ಸಿ S24+ ಫೋನ್‌ 120Hz ರಿಫ್ರೆಶ್‌ ರೇಟ್‌ ಜೊತೆಗೆ 6.7 ಇಂಚಿನ QHD+ ಡಿಸ್ಪ್ಲೇ ಅನ್ನು ಪಡೆದಿರುವ ಸಾಧ್ಯತೆಗಳು ಇವೆ. ಬೇಸ್‌ ವೇರಿಯಂಟ್‌ 8GB RAM ಆಗಿರಲಿದ್ದು, ಇದಕ್ಕೆ ಅನುಗುಣವಾಗಿ Exynos 2400 SoC ಪ್ರೊಸೆಸರ್‌ ರನ್ ಆಗುವ ನಿರೀಕ್ಷೆಯಿದೆ.

ಇನ್ನು ಗ್ಯಾಲಕ್ಸಿ S24+ ಫೋನ್‌ 12GB RAM ಜೊತೆಗೆ ಸ್ನಾಪ್‌ಡ್ರಾಗನ್ 8 ಜೆನ್‌ 3 SoC ಪ್ರೊಸೆಸರ್‌ ಸಪೋರ್ಟ್‌ ಪಡೆದಿರುವ ನಿರೀಕ್ಷೆಗಳು ಇವೆ. ಇದರ ಬೇಸ್‌ ಮಾದರಿಯು 128GB, 256GB, ಮತ್ತು 512GB ಸ್ಟೋರೇಜ್‌ ಆಯ್ಕೆಗಳಲ್ಲಿ ಪ್ರಾರಂಭ ಆಗುವ ಸಾಧ್ಯತೆಗಳು ಇವೆ.

Best Mobiles in India

English summary
Samsung Galaxy S24 Series Full Specifications Leaked. What's Special and all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+