Home
ಸುದ್ದಿಜಾಲ

Samsung: ಮೂರೇ ದಿನಗಳಲ್ಲಿ ಭಾರತದಲ್ಲಿ ಹೊಸ ದಾಖಲೆ ಬರೆದ ಗ್ಯಾಲಕ್ಸಿ S24 ಸರಣಿ!

ಸ್ಯಾಮ್‌ಸಂಗ್‌ (Samsung) ಫೋನ್‌ಗಳಿಗೆ ಭಾರತ ದೊಡ್ಡ ಮಾರುಕಟ್ಟೆಯಾಗಿದೆ. ಸ್ಯಾಮ್‌ಸಂಗ್‌ ಈ ನಡುವೆ ಭಿನ್ನ ಫೋನ್‌ಗಳನ್ನು ಅನಾವರಣ ಮಾಡುವ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಇದೀಗ ಭಾರತದಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಅದೂ ಸಹ ಇತ್ತೀಚೆಗೆ ಲಾಂಚ್‌ ಆದ ಗ್ಯಾಲಕ್ಸಿ S24 ಸರಣಿ (Samsung Galaxy S24 series) ಫೋನ್‌ಗಳ ಮೂಲಕ.

ಹೌದು, ಸ್ಯಾಮ್‌ಸಂಗ್‌ ಫೋನ್‌ಗಳು ತಮ್ಮದೇ ಆದ ವಿಶೇಷ ಫೀಚರ್ಸ್‌ ಆಯ್ಕೆಯ ಮೂಲಕ ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತವೆ. ಅದರಂತೆ ಕೆಲವು ದಿನಗಳ ಹಿಂದೆ ಅನಾವರಣ ಆದ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿ ಫೋನ್‌ಗಳಿಗೆ ಈಗಾಗಲೇ ದೊಡ್ಡ ಮಟ್ಟದ ಬೇಡಿಕೆ ಬಂದಿದೆ. ಅಂದರೆ ಈ ಫೋನ್ ಲಭ್ಯತೆಗೂ ಮುನ್ನವೇ ಪ್ರೀ ಬುಕಿಂಗ್‌ಗೆ(Pre booking) ಜನರು ಮುಗಿಬಿದ್ದಿದ್ದಾರೆ. ಹಾಗಿದ್ರೆ, ಮೂರು ದಿನದಲ್ಲಿ ಪೂರ್ವ ಬುಕಿಂಗ್‌ ಮಾಡಿದವರ ಸಂಖ್ಯೆ ಎಷ್ಟು, ಈ ಫೋನ್‌ಗಳ ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಮೂರೇ ದಿನಗಳಲ್ಲಿ ಭಾರತದಲ್ಲಿ ಹೊಸ ದಾಖಲೆ ಬರೆದ ಗ್ಯಾಲಕ್ಸಿ S24 ಸರಣಿ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ: ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿಯನ್ನು ಜನವರಿ 17, 2024 ರಂದು ವಿಶ್ವದಾದ್ಯಂತ ಲಾಂಚ್‌ ಮಾಡಲಾಗಿದ್ದು, ಒಂದು ದಿನದ ನಂತರ ಜನವರಿ 18 ರಂದು ಸ್ಮಾರ್ಟ್‌ಫೋನ್‌ಗಾಗಿ ಪೂರ್ವ-ಬುಕಿಂಗ್ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಅದರಂತೆ ಈಗ ಸ್ಯಾಮ್‌ಸಂಗ್‌ ಇತ್ತೀಚೆಗೆ ಬಿಡುಗಡೆಯಾದ ಪ್ರಮುಖ ಗ್ಯಾಲಕ್ಸಿ S24 ಸರಣಿಯ ಪೂರ್ವ-ಬುಕಿಂಗ್‌ಗಳ ಕುರಿತು ಮಾಹಿತಿ ಹಂಚಿಕೊಂಡಿದೆ. ಅದರ ಪ್ರಕಾರ ಭಾರತದಲ್ಲಿ ದಾಖಲೆಯ 2,50,000 ಮುಂಗಡ ಆರ್ಡರ್‌ಗಳನ್ನು ಪಡೆದುಕೊಂಡಿದೆ. ಈ ಮೂಲಕ ಎಸ್‌ ಸರಣಿ ಶ್ರೇಷ್ಠ ಸ್ಥಾನ ಪಡೆದುಕೊಂಡಿದೆ.

ಮೂರು ದಿನಗಳ ಹಿಂದೆ ಜನವರಿ 18 ರಂದು ದೇಶದಲ್ಲಿ ಮುಂಗಡ ಬುಕಿಂಗ್‌ಗಳು ಆರಂಭ ಆಗಿದ್ದು, ಭಾರತದಲ್ಲಿ 2,50,000 ಕ್ಕೂ ಹೆಚ್ಚು ಗ್ರಾಹಕರು ಗ್ಯಾಲಕ್ಸಿ S24 ಸ್ಮಾರ್ಟ್‌ಫೋನ್ ಅನ್ನು ಆರ್ಡರ್ ಮಾಡಿದ್ದಾರೆ ಎಂದು ಈ ವೇಳೆ ಮಾಹಿತಿ ನೀಡಿದೆ. ಗಮನಿಸಬೇಕಾದ ವಿಚಾರ ಏನೆಂದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸರಣಿಗಾಗಿ (Samsung Galaxy S23 series) ಕಳೆದ ಬಾರಿ 2,50,000 ಮುಂಗಡ ಬುಕಿಂಗ್‌ಗಳನ್ನು ಪಡೆದುಕೊಂಡಿತ್ತು. ಆದರೆ ಇದು ಮೂರು ವಾರಗಳ ಅಂತರದಲ್ಲಿ ಮಾಡಲಾದ ಬುಕ್ಕಿಂಗ್‌ ಆಗಿತ್ತು. ಈ ಮೂಲಕ ಇತ್ತೀಚಿನ ಫ್ಲ್ಯಾಗ್‌ಶಿಪ್ ಅನ್ನು ಖರೀದಿಸಲು ಜನರು ಆಸಕ್ತಿ ಹೊಂದಿದ್ದಾರೆ ಎಂದು ಇದು ತೋರಿಸುತ್ತದೆ.

ಮೂರೇ ದಿನಗಳಲ್ಲಿ ಭಾರತದಲ್ಲಿ ಹೊಸ ದಾಖಲೆ ಬರೆದ ಗ್ಯಾಲಕ್ಸಿ S24 ಸರಣಿ!

ಈ ಸಂಬಂಧ ಸ್ಯಾಮ್‌ಸಂಗ್ ಇಂಡಿಯಾದ ಎಮ್‌ಎಕ್ಸ್‌ ಬಿಸಿನೆಸ್‌ನ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ಮಾಹಿತಿ ನೀಡಿದ್ದು, ಗ್ಯಾಲಕ್ಸಿ S24 ಸರಣಿಯ ದೊಡ್ಡ ಯಶಸ್ಸು ಭಾರತೀಯ ಗ್ರಾಹಕರು ಹೊಸ ತಂತ್ರಜ್ಞಾನದ ಆರಂಭಿಕ ಅಳವಡಿಕೆದಾರರು ಎಂಬುದನ್ನು ತೋರಿಸಿದೆ. ಗ್ಯಾಲಕ್ಸಿ S24 ಸರಣಿಗೆ ನಮ್ಮ ಗ್ರಾಹಕರು ನೀಡಿದ ಅಗಾಧ ಪ್ರತಿಕ್ರಿಯೆಗಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.

ಗ್ಯಾಲಕ್ಸಿ S24 ಸರಣಿಯು ಜನವರಿ 24 ರವರೆಗೂ ಸಗ ಮುಂಗಡ-ಕೋರಿಕೆಗೆ ಲಭ್ಯ ಇರುತ್ತದೆ. ಈ ವೇಳೆ ಗ್ಯಾಲಕ್ಸಿ S24 ಅಲ್ಟ್ರಾ ಹಾಗೂ ಗ್ಯಾಲಕ್ಸಿ S24+ (Galaxy S24 Ultra and Galaxy S24+) ಖರೀದಿದಾರರು 22,000 ರೂ ಮೌಲ್ಯದ ಪ್ರಯೋಜನಗಳನ್ನು ಪಡೆಯಲಿದ್ದು, ಗ್ಯಾಲಕ್ಸಿ S24 (Galaxy S24)ಅನ್ನು ಮುಂಗಡ ಬುಕಿಂಗ್ ಮಾಡಿದವರು 15,000 ರೂ.ಗಳ ಮೌಲ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಇಷ್ಟೇ ಅಲ್ಲದೆ ಗ್ಯಾಲಕ್ಸಿ S24+ ಮತ್ತು ಗ್ಯಾಲಕ್ಸಿ S24 ಅಲ್ಟ್ರಾ ಖರೀದಿದಾರರು 12,000 ರೂ.ಗಳ ಅಪ್‌ಗ್ರೇಡ್ ಬೋನಸ್ ಜೊತೆಗೆ 10,000 ಸ್ಟೋರೇಜ್ ಅಪ್‌ಗ್ರೇಡ್ ಅನ್ನು ಉಚಿತವಾಗಿ ಪಡೆಯುತ್ತಾರೆ. ಅಂದರೆ ನೀವು 256GB ಮಾಡೆಲ್ ಅನ್ನು ಮುಂಗಡವಾಗಿ ಬುಕ್ ಮಾಡಿದರೆ ನಿಮಗೆ 512GB ಸ್ಟೋರೇಜ್‌ ಆಯ್ಕೆಯ ಫೋನ್‌ ಅನ್ನು ನೀಡಲಾಗುತ್ತದೆ. ಇದರೊಂದಿಗೆ 5,000 ರೂ.ಗಳ ಮೌಲ್ಯದ ಅಪ್‌ಗ್ರೇಡ್ ಜೊತೆಗೆ 5,000 ಬ್ಯಾಂಕ್ ಕ್ಯಾಶ್‌ಬ್ಯಾಕ್ ಸಹ ಲಭ್ಯ ಇದೆ. ಇನ್ನು ಗ್ಯಾಲಕ್ಸಿ S24 ಗಾಗಿ 15,000 ರೂ.ಗಳ ಅಪ್‌ಗ್ರೇಡ್ ಬೋನಸ್ ಅನ್ನು ಪಡೆಯಬಹುದಾಗಿದ್ದು, 5,000 ರೂ.ಗಳ ಬ್ಯಾಂಕ್ ಕ್ಯಾಶ್‌ಬ್ಯಾಕ್ ಮತ್ತು 8,000 ರೂ.ಗಳ ಮೌಲ್ಯದ ಅಪ್‌ಗ್ರೇಡ್ ಪ್ರಯೋಜನ ಪಡೆಯಬಹುದು.

ಮೂರೇ ದಿನಗಳಲ್ಲಿ ಭಾರತದಲ್ಲಿ ಹೊಸ ದಾಖಲೆ ಬರೆದ ಗ್ಯಾಲಕ್ಸಿ S24 ಸರಣಿ!

ಇನ್ನು ಈ ಫೋನ್‌ಗಳ ಬೆಲೆ ಬಗ್ಗೆ ಹೇಳುವುದಾದರೆ ಗ್ಯಾಲಕ್ಸಿ S24 ಅಲ್ಟ್ರಾ ಫೋನ್‌ 12GB + 256GB, 12GB + 512GB ಮತ್ತು 12GB + 1TB ಸೇರಿದಂತೆ ಮೂರು ವೇರಿಯಂಟ್‌ ನಲ್ಲಿ ಲಭ್ಯ ಇದ್ದು, ಬೆಲೆ ಕ್ರಮವಾಗಿ 1,29,999ರೂ.ಗಳು, 1,39,999ರೂ.ಗಳು ಮತ್ತು 1,59,999 ರೂ.ಗಳಾಗಿದೆ.

ಹಾಗೆಯೇ ಗ್ಯಾಲಕ್ಸಿ S24+ ಸ್ಮಾರ್ಟ್‌ಫೋನ್‌ನ 12GB + 256GB ವೇರಿಯಂಟ್‌ 99,999 ರೂ.ಗಳಿಂದ ಆರಂಭ ಆಗಲಿದ್ದು, 12GB + 512GB ವೇರಿಯಂಟ್‌ ಬೆಲೆ 1,09,999 ರೂ.ಗಳಾಗಿರಲಿದೆ. ಜೊತೆಗೆ ಸಾಮಾನ್ಯ ಗ್ಯಾಲಕ್ಸಿ ಫೋನ್‌ನ 8GB + 256GB ವೇರಿಯಂಟ್‌ 79,999 ರೂ.ಗಳ ಬೆಲೆ ಹೊಂದಿದ್ದರೆ 8GB + 512GB ಸ್ಟೋರೇಜ್‌ ವೇರಿಯಂಟ್‌ 89,999 ರೂ.ಗಳ ಬೆಲೆ ಹೊಂದಿದೆ.

Best Mobiles in India

English summary
Samsung phones are hugely popular due to their selection of exclusive features. Meanwhile, the Galaxy S24 series phone set a record in pre-booking in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+