Home
ಸುದ್ದಿಜಾಲ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ ಪ್ರಿ-ಬುಕಿಂಗ್‌ಗೆ ಲಭ್ಯ!..ಭಾರತದಲ್ಲಿ ಬೆಲೆ ಎಷ್ಟು?

ಸ್ಯಾಮ್‌ಸಂಗ್‌ ಸಂಸ್ಥೆಯ ನೂತನವಾಗಿ ಬಿಡುಗಡೆ ಮಾಡಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸ್ಮಾರ್ಟ್‌ಫೋನ್‌ ಸರಣಿಯಯು ಗ್ಯಾಲಕ್ಸಿ S24, ಗ್ಯಾಲಕ್ಸಿ S24 ಪ್ಲಸ್‌ ಮತ್ತು ಗ್ಯಾಲಕ್ಸಿ S24 ಅಲ್ಟ್ರಾ ಮಾದರಿಗಳನ್ನು ಒಳಗೊಂಡಿದೆ. ಇದೀಗ ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ರಿ-ಬುಕಿಂಗ್ ಅನ್ನು ಪ್ರಾರಂಭಿಸಿದೆ.

ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸ್ಮಾರ್ಟ್‌ಫೋನ್ ಸರಣಿ ಪ್ರಿ-ಬುಕಿಂಗ್ ಶುರುವಾಗಿದ್ದು, ಇದೇ ಜನೆವರಿ 31 ರಂದು ಮಾರಾಟ ಪ್ರಾರಂಭವಾಗಲಿದೆ. ಗ್ರಾಹಕರು ಸ್ಯಾಮ್‌ಸಂಗ್‌ ನ ಅಧಿಕೃತ ವೆಬ್‌ಸೈಟ್‌ ಪ್ರಿ-ಬುಕಿಂಗ್ ಮಾಡಬಹುದಾಗಿದೆ. ಮುಂಗಡ ಬುಕಿಂಗ್ ಖರೀದಿದಾರರಿಗೆ ಕೆಲವು ಆಫರ್‌ ಕೂಡಾ ಲಭ್ಯವಾಗಲಿವೆ. ಇನ್ನುಳಿದಂತೆ ಈ ಫೋನ್‌ಗಳ ಫೀಚರ್ಸ್‌ ಹಾಗೂ ಬೆಲೆ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ ಪ್ರಿ-ಬುಕಿಂಗ್‌ಗೆ ಲಭ್ಯ!..ಬೆಲೆ ಎಷ್ಟು?

ಭಾರತ ಗ್ಯಾಲಕ್ಸಿ S22 ಸರಣಿಯ ಬೆಲೆ ಮಾಹಿತಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ S22

8 GB + 256 GB ಬೆಲೆ - 79,999ರೂ
8 GB + 512 GB ಬೆಲೆ - 89,999ರೂ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ ಪ್ರಿ-ಬುಕಿಂಗ್‌ಗೆ ಲಭ್ಯ!..ಬೆಲೆ ಎಷ್ಟು?

ಸ್ಯಾಮ್‌ಸಂಗ್ ಗ್ಯಾಲಕ್ಸಿ S24+

12 GB + 256 GB ಬೆಲೆ - 99,999ರೂ
12 GB + 512 GB ಬೆಲೆ - 109,999ರೂ

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ

12 GB + 256 GB ಬೆಲೆ - 129,999ರೂ
12 GB + 512 GB ಬೆಲೆ - 139,999ರೂ
12 GB + 1 TB ಬೆಲೆ - 159,999ರೂ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ ಪ್ರಿ-ಬುಕಿಂಗ್‌ಗೆ ಲಭ್ಯ!..ಬೆಲೆ ಎಷ್ಟು?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಫೀಚರ್ಸ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ 6.2 ಇಂಚಿನ ಡೈನಾಮಿಕ್ AMOLED FHD+ 2X ಮಾದರಿಯ ಡಿಸ್‌ಪ್ಲೇ ಅನ್ನು ಹೊಂದಿದೆ. ಇದು ಸಂಸ್ಥೆಯ Exynos 2400 SoC ಚಿಪ್ಸೆಟ್ ಪ್ರೊಸೆಸರ್‌ ಪವರ್‌ ಅನ್ನು ಹೊಂದಿದ್ದು, 8GB RAM + 128GB ಮತ್ತು 256GB ಸ್ಟೋರೇಜ್‌ ಹೊಂದಿದೆ.

ಹಾಗೆಯೇ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, 4000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೊನ್‌ ಅಂಬರ ಯಲ್ಲೋ, ಕೋಬಾಲ್ಟ್ ವೈಲೇಟ್, ಮಾರ್ಬಲ್ ಗ್ರೇ ಮತ್ತು ಓನಿಕ್ಸ್ ಬ್ಲ್ಯಾಕ್ ಕಲರ್ ಆಯ್ಕೆ ಪಡೆದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24+ ಫೀಚರ್ಸ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24+ ಮೊಬೈಲ್‌ 6.7 ಇಂಚಿನ ಡೈನಾಮಿಕ್ AMOLED FHD+ 2X ಮಾದರಿಯ ಡಿಸ್‌ಪ್ಲೇ ಅನ್ನು ಹೊಂದಿದ್ದು, ಹಾಗೆಯೇ Exynos 2400 SoC ಚಿಪ್ಸೆಟ್ ಪ್ರೊಸೆಸರ್‌ ಅನ್ನು ಪಡೆದಿದೆ. ಈ ಫೋನ್‌ 12GB of RAM + 256GB ಹಾಗೂ 512GB ಆಯ್ಕೆಗಳನ್ನು ಪಡೆದಿದ್ದು, ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಪಡೆದಿದೆ. ಹಾಗೆಯೇ ಈ ಫೋನ್‌ 4,900mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ ಫೀಚರ್ಸ್‌

ಈ ಫೋನ್ 6.8 ಇಂಚಿನ ಡೈನಾಮಿಕ್ AMOLED 2X ಡಿಸ್‌ಪ್ಲೇ ಅನ್ನು ಹೊಂದಿದ್ದು, ಇನ್ನು ಡಿಸ್‌ಪ್ಲೇ 3120 x 1440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಹಾಗೆಯೇ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದ್ದು, ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ರನ್‌ ಆಗಲಿದೆ.

ಹಾಗೆಯೇ 12 GB RAM ಮತ್ತು 256GB, 512GB, ಹಾಗೂ 1TB ವರೆಗೆ ಸ್ಟೋರೇಜ್ ಆಯ್ಕೆ ಇದೆ. ಇದರ ಜೊತೆಗೆ ಈ ಫೋನಿನ ಪ್ರಾಥಮಿಕ ಕ್ಯಾಮೆರಾಚು 200 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನು ಈ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

Best Mobiles in India

English summary
Samsung Galaxy S24 Series Pre Booking in India started. check out India pricing and more offers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+