Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿಯ ಈ ವಿಷಯ ಕೊನೆಗೂ ಲೀಕ್‌! ಮತ್ತಷ್ಟು ಹೆಚ್ಚಾಯ್ತು ಕಾತುರ

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿ ಫೋನ್‌ (Samsung Galaxy S24 series) ಲಾಂಚ್‌ ಆಗುವ ಮುನ್ನವೇ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡುತ್ತಿದೆ. ಅದರಲ್ಲೂ ಈ ಫೋನ್‌ಗಳ ಕೆಲವು ಮಾಹಿತಿಗಳು ಈಗಾಗಲೇ ಲೀಕ್‌ ಆಗಿದ್ದು, ಈ ಮೂಲಕ ಗ್ರಾಹಕರ ಕಾತುರತೆಯನ್ನು ಇನ್ನಷ್ಟು ಹೆಚ್ಚಿಗೆ ಮಾಡಲಾಗುತ್ತದೆ. ಅದರಂತೆ ಈ ಈ ಫೋನ್‌ನ ಬೆಲೆ ಬಗ್ಗೆ ಮಾಹಿತಿ ಲೀಕ್‌ ಆಗಿದೆ.

ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿಯ ಫೋನ್‌ಗಳ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿ ಲೀಕ್‌ ಆಗಿದ್ದು, ಈ ಮೂಲಕ ಸ್ಯಾಮ್‌ಸಂಗ್‌ ಪ್ರಿಯರು ಫೋನ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ. ಆದರೆ, ಈವರೆಗೂ ಈ ಫೋನ್‌ಗಳ ಬೆಲೆ ಬಗ್ಗೆ ಯಾವುದೇ ಮಾಹಿತಿ ಲೀಕ್‌ ಆಗಿರಲಿಲ್ಲ. ಆದರೆ, ಕೊನೆಗೂ ಈ ಬಗ್ಗೆ ಮಾಹಿತಿ ಲೀಕ್‌ ಆಗಿದ್ದು, ಇದರೊಂದಿಗೆ ಕೆಲವು ಫೀಚರ್ಸ್‌ ಸಹ ಸದ್ದು ಮಡುತ್ತಿವೆ. ಹಾಗಿದ್ರೆ ಈ ಫೋನ್‌ಗಳ ಬೆಲೆ ಎಷ್ಟಿರಬಹುದು, ಈ ಫೋನ್‌ಗಳ ನಿರೀಕ್ಷಿತ ಫೀಚರ್ಸ್ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿಯ ಈ ವಿಷಯ ಕೊನೆಗೂ ಲೀಕ್‌...

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿ: ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿ ಜನವರಿ 17 ರಂದು ಲಾಂಚ್‌ ಆಗಲಿದೆ. ಅದಾಗ್ಯೂ ಈ ಮೊದಲೇ ಈ ಫೋನ್‌ಗಳ ಬಗ್ಗೆ ಸಾಕಷ್ಟು ಮಾಹಿತಿ ಲೀಕ್‌ ಆಗಿವೆ. ಅಂದರೆ ಈ ಫೋನ್‌ನ ಫೀಚರ್ಸ್‌ ಮತ್ತು ಸ್ಟೋರೇಜ್‌ ಆಯ್ಕೆ ಸೇರಿದಂತೆ ಅನೇಕ ಮಾಹಿತಿ ಲೀಕ್‌ ಆಗಿವೆ. ಇದರೊಂದಿಗೆ ಕ್ಯಾಮೆರಾಗಳು, ಡಿಸ್‌ಪ್ಲೇಗಳು ಮತ್ತು ಗಣನೀಯ ಬ್ಯಾಟರಿ ಬ್ಯಾಕಪ್‌ ಬಗ್ಗೆ ಮಾಹಿತಿ ಲೀಕ್‌ ಆಗಿದೆ.

ಇನ್ನು ಗ್ಯಾಲಕ್ಸಿ ಕ್ಲಬ್‌ ಪ್ರಕಾರ, ಮೂಲ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 (Samsung Galaxy S24 ) ಸುಮಾರು EUR 899 (ಸುಮಾರು 82,000ರೂ.ಗಳ) ನಲ್ಲಿ ಪ್ರಾರಂಭವಾಗಬಹುದು ಎಂದು ಉಲ್ಲೇಖ ಮಾಡಲಾಗಿದೆ. ಈ ಫೋನ್ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಕಾಣಿಸಿಕೊಳ್ಳಬಹುದು ಎಂದೂ ಸಹ ತಿಳಿಸಲಾಗಿದೆ. ಜೊತೆಗೆ ನೀವು ಹೆಚ್ಚಿನ ಸ್ಟೋರೇಜ್‌ ಬಯಸಿದರೆ 256GB ಆಯ್ಕೆಯ ಫೋನ್‌ ಖರೀದಿ ಮಾಡಬಹುದು. ಈ ಫೋನ್ EUR 959 ಆಗಿರಬಹುದು ( 88,000 ರೂ.ಗಳು). ಎಂದು ಊಹಿಸಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿಯ ಈ ವಿಷಯ ಕೊನೆಗೂ ಲೀಕ್‌...

ಇದರೊಂದಿಗೆ ಗ್ಯಾಲಕ್ಸಿ S24+ (Samsung Galaxy S24 +) ಎರಡು ವೇರಿಯಂಟ್‌ ನಲ್ಲಿ ಕಾಣಿಸಿಕೊಳ್ಳಬಹುದು ಎಂದು ತಿಳಿದುಬಂದಿದ್ದು, ಅದರಲ್ಲಿ 12GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಫೋನ್‌ ಸುಮಾರು EUR 1,149 ( 1,05,000 ರೂ.ಗಳು) ವೆಚ್ಚವಾಗಬಹುದು. 12GB RAM ಮತ್ತು 512GB ಸ್ಟೋರೇಜ್ ಆಯ್ಕೆಯ ಫೋನ್ EUR 1,269 ಆಗಿರಬಹುದು (1,16,000ರೂ.ಗಳಾಗಿರಬಹುದು) ಎಂದು ಉಲ್ಲೇಖ ಮಾಡಲಾಗಿದೆ.

ಅದರಮತೆ ಗ್ಯಾಲಕ್ಸಿ S24 ಅಲ್ಟ್ರಾ (Samsung Galaxy S24 Ultra) ಅತ್ಯಂತ ದುಬಾರಿ ಫೋನ್‌ ಆಗಿರಲಿದೆ ಎಂದು ತಿಳಿದುಬಂದಿದೆ. ಅಂದರೆ 256GB ಸ್ಟೋರೇಜ್‌ ಆಯ್ಕೆಯ ಫೋನ್ EUR 1,449 (1,33,500 ರೂ.ಗಳು) ಮತ್ತು 512GB ಸ್ಟೋರೇಜ್‌ ಆಯ್ಕೆಯ ಫೋನ್ ಸುಮಾರು EUR 1,569 ಆಗಿರಬಹುದು (1,44,500ರೂ.ಗಳು) ಎಂದು ತಿಳಿದುಬಂದಿದೆ. ಜೊತೆಗೆ 1TB ಸ್ಟೋರೇಜ್‌ ಆಯ್ಕೆಯ ಫೋನ್‌ ಸಹ ಇದ್ದು, EUR 1,809 (1,66,500ರೂ.ಗಳ ) ಬೆಲೆ ಹೊಂದಿರಲಿದೆ ಎಂಬ ಮಾಹಿತಿ ಲೀಕ್‌ ಆಗಿವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿಯ ಈ ವಿಷಯ ಕೊನೆಗೂ ಲೀಕ್‌...

ಇನ್ನು ಈ ಮುಂಬರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿಯು ಪ್ರಭಾವಶಾಲಿ ಫೀಚರ್ಸ್‌ ಆಯ್ಕೆ ಪಡೆದಿರಲಿದೆ ಎಂದು ಈಗಾಗಲೇ ನಮ್ಮದೇ ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನೂ ಒಮ್ಮೆ ಹೇಳುವುದಾದರೆ ಗ್ಯಾಲಕ್ಸಿ S24 ಫೋನ್ 6.2 ಇಂಚಿನ ಡಿಸ್‌ಪ್ಲೇ, S24+ ಸ್ವಲ್ಪ ದೊಡ್ಡದಾದ 6.7 ಇಂಚಿನ ಡಿಸ್‌ಪ್ಲೇ ಮತ್ತು S24 ಅಲ್ಟ್ರಾ 6.8 ಇಂಚಿನ ಡಿಸ್‌ಪ್ಲೇ ಹೊಂದಿರಲಿ ಎನ್ನಲಾಗಿದ್ದು, ಈ ಡಿಸ್‌ಪ್ಲೇಗಳು ರೋಮಾಂಚಕ ಬಣ್ಣಗಳು ಮತ್ತು ಅಸಾಧಾರಣ ಸ್ಪಷ್ಟತೆಯನ್ನು ನೀಡುತ್ತವೆ ಎಂದು ಹೇಳಲಾಗಿದೆ. ಇದರೊಂದಿಗೆ ರಿಫ್ರೆಶ್ ರೇಟ್‌ 120Hz ಇರಲಿದೆಯಂತೆ.

ಪ್ರಮುಖವಾಗಿ ಈ ಫೋನ್‌ಗಳು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಜನ್ 3 ಅಥವಾ ಎಕ್ಸಿನೋಸ್ 2400 ಚಿಪ್‌ಸೆಟ್‌ನೊಂದಿಗೆ ಕಾಣಿಸಿಕೊಳ್ಳಬಹುದು ಎಂದು ತಿಳಿದುಬಂದಿದ್ದು, ಆದರೂ ಇದು ಪ್ರದೇಶವನ್ನು ಅವಲಂಬಿಸಿ ಬದಲಾಗಬಹುದು ಎಂದು ಹೇಳಲಾಗಿದೆ. ಅಂದರೆ ಭಾರತೀಯ ರೂಪಾಂತರಗಳು ಎಕ್ಸಿನೋಸ್ ಚಿಪ್‌ಸೆಟ್ ಅನ್ನು ಒಳಗೊಂಡಿರುತ್ತವೆ ಎಂದು ಹೇಳಲಾಗಿದೆ. ಈ ಪ್ರೊಸೆಸರ್‌ಗಳು ವೇಗದ ಕಾರ್ಯಕ್ಷಮತೆಯನ್ನು ನೀಡುತ್ತವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿಯ ಈ ವಿಷಯ ಕೊನೆಗೂ ಲೀಕ್‌...

ಹಾಗೆಯೇ ಕ್ಯಾಮೆರಾ ವಿಚಾರದಲ್ಲಿ ಈ ಫೋನ್‌ಗಳು ಪ್ರೀಮಿಯಂ ಆಗಿರಲಿವೆ ಎಂದು ತೋರುತ್ತದೆ. ಗ್ಯಾಲಕ್ಸಿ S24 ಮತ್ತು ಗ್ಯಾಲಕ್ಸಿ S24+ ಮಾದರಿಗಳು 50 ಮೆಗಾಪಿಕ್ಸೆಲ್ ಕ್ಯಾಮೆರಾಗಳೊಂದಿಗೆ ಬರಲಿದೆ ಎಂಬ ವದಂತಿಗಳಿವೆ. ಈ ಸೆನ್ಸರ್‌ಗಳು 8K ಸಾಮರ್ಥ್ಯದ ವಿಡಿಯೋಗಳನ್ನು ಸೆರೆಹಿಡಿಯುವ ಶಕ್ತಿ ಪಡೆದಿವೆ ಎನ್ನಲಾಗಿದ್ದು, S24 ಅಲ್ಟ್ರಾವು ದೃಢವಾದ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಪ್ರಭಾವಶಾಲಿ ಝೂಮಿಂಗ್ ಸಾಮರ್ಥ್ಯ ಹೊಂದಿರಲಿದೆ ಎಂದು ಊಹಿಸಲಾಗಿದೆ.

Best Mobiles in India

English summary
Samsung Galaxy S24 series of phones information leaked and now the information about the price of these phones has been leaked.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+