Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ ಕೇವಲ 10 ನಿಮಿಷಗಳಲ್ಲಿ ನಿಮ್ಮ ಮನೆಗೆ; ಕೊಡುಗೆ ಸಹ ಇದೆ

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳಿಗೆ (Samsung smartphone) ವಿಶೇಷ ಬೇಡಿಕೆ ಇದೆ. ಅದರಲ್ಲೂ ಈ ಫೋನ್‌ಗಳಿಗೆ ಭಾರತದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಇದ್ದು, ಗ್ರಾಹಕರಿಗೆ ಭಿನ್ನ ಅನುಭವ ನೀಡುತ್ತಿವೆ. ಅದರಂತೆ ಈಗ ಕೆಲವೇ ದಿನಗಳ ಹಿಂದೆ ಅನಾವರಣವಾದ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ (Samsung Galaxy S24 series) ಸ್ಮಾರ್ಟ್‌ಫೋನ್‌ ಖರೀದಿ ಮಾಡುವವರಿಗೆ ಗುಡ್‌ ನ್ಯೂಸ್‌ ನೀಡಲಾಗಿದೆ.

ಹೌದು, ಸ್ಯಾಮ್‌ಸಂಗ್‌ನ ಈ ಫೋನ್‌ ಖರೀದಿ ಮಾಡಲು ಇನ್ಮುಂದೆ ಕಷ್ಟಪಡುವ ಅವಶ್ಯಕತೆ ಇರುವುದಿಲ್ಲ. ನೀವು ಆರ್ಡರ್ ಮಾಡಿದ ಹತ್ತು ನಿಮಿಷದಲ್ಲೇ ನಿಮ್ಮ ಮನೆಗೆ ಈ ಹೊಸ ಸರಣಿ ಫೋನ್‌ ಬರಲಿದೆ. ಅಷ್ಟೇ ಅಲ್ಲದೆ ವಿಶೇಷ ಆಫರ್ ಅನ್ನೂ ಸಹ ನೀಡಲಾಗುತ್ತಿದ್ದು, ಹಣವನ್ನೂ ಸಹ ಉಳಿತಾಯ ಮಾಡಬಹುದಾಗಿದೆ. ಹಾಗಿದ್ರೆ, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ ಫೋನ್ ಅನ್ನು ಅಷ್ಟು ಬೇಗ ಎಲ್ಲಿ ಖರೀದಿ ಮಾಡುವುದು?, ಆಫರ್ ಏನಿದೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ ಕೇವಲ 10 ನಿಮಿಷಗಳಲ್ಲಿ ನಿಮ್ಮ ಮನೆಗೆ..

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ ಸ್ಮಾರ್ಟ್‌ಫೋನ್: ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿಯನ್ನು ಇತ್ತೀಚೆಗಷ್ಟೇ ಅನಾವರಣ ಮಾಡಲಾಗಿದೆ. ಅದರಂತೆ ಈಗ ಈ ಫೋನ್‌ ಗ್ರಾಹಕರಿಗೆ ಬೇಗ ಸಿಗಲಿ ಎನ್ನುವ ಉದ್ದೇಶದಿಂದ ತ್ವರಿತ ವಾಣಿಜ್ಯ ವೇದಿಕೆಯಾದ ಬ್ಲಿಂಕಿಟ್‌ನೊಂದಿಗೆ (Blinkit) ಸ್ಯಾಮ್‌ಸಂಗ್‌ ಕೈ ಜೋಡಿಸಿದ್ದು, ಕೇವಲ ಹತ್ತೇ ನಿಮಿಷದಲ್ಲಿ ಈ ಫೋನ್‌ ಅನ್ನು ಮನೆಗೆ ತರಿಸಿಕೊಳ್ಳಬಹುದು.

ಪ್ರಮುಖ ವಿಷಯ ಏನೆಂದರೆ ಈ ವಿಶೇಷ ಸೌಲಭ್ಯ ಎಲ್ಲಾ ಕಡೆ ಲಭ್ಯ ಇರುವುದಿಲ್ಲ. ಬದಲಾಗಿ ದೆಹಲಿ ಎನ್‌ಸಿಆರ್‌, ಬೆಂಗಳೂರು ಮತ್ತು ಮುಂಬೈನಲ್ಲಿರುವ ಗ್ರಾಹಕರಿಗೆ ಈ ಪ್ರಯೋಜನ ಲಭ್ಯ ಇದೆ. ಈ ವೇಳೆ ನೀವು ಗ್ಯಾಲಕ್ಸಿ S24 ಅಲ್ಟ್ರಾ, ಗ್ಯಾಲಕ್ಸಿ S24+ ಮತ್ತು ಗ್ಯಾಲಕ್ಸಿ S24 ಅನ್ನು ಆರ್ಡರ್ ಮಾಡಬಹುದಾಗಿದೆ. ಹಾಗಿದ್ರೆ ಈ ಫೋನ್‌ಗೆ ಇರುವ ಆಫರ್ ಏನು ಅನ್ನೋದನ್ನು ಗಮನಿಸೋಣ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ ಕೇವಲ 10 ನಿಮಿಷಗಳಲ್ಲಿ ನಿಮ್ಮ ಮನೆಗೆ..

ಬ್ಲಿಂಕಿಟ್‌ನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿಗೆ ಕೊಡುಗೆ: ಈ ವಿಶೇಷ ಪ್ಲಾಟ್‌ಫಾರ್ಮ್‌ನಿಂದ ಗ್ಯಾಲಕ್ಸಿ S24 ಸರಣಿಯನ್ನು ಖರೀದಿಸುತ್ತಿರುವವರು ಖರೀದಿ ಮಾಡುವಾಗ ಹೆಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಅನ್ನು ಬಳಕೆ ಮಾಡಿದ್ರೆ 5,000 ರೂಪಾಯಿಗಳ ತ್ವರಿತ ಕ್ಯಾಶ್‌ಬ್ಯಾಕ್ ಅನ್ನು ಪಡೆಯಬಹುದಾಗಿದೆ. ಇನ್ನು ಸ್ಯಾಮ್‌ಸಂಗ್ ಈಗಾಗಲೇ ಭಾರತದಲ್ಲಿನ ಗ್ರಾಹಕರಿಂದ ಭಾರೀ ಪ್ರತಿಕ್ರಿಯೆಯನ್ನು ಪಡೆದಿದ್ದು, ಜನವರಿ 18 ಪ್ರೀ ಬುಕಿಂಗ್‌ ಆರಂಭ ಆಗಿತ್ತು. ಈ ವೇಳೆ ಕೇವಲ ಮೂರು ದಿನಗಳಲ್ಲಿ 250,000 ಪ್ರೀ ಬುಕಿಂಗ್‌ಗಳನ್ನು ಪಡೆದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ ಫೀಚರ್ಸ್‌:
ಗ್ಯಾಲಕ್ಸಿ S24 ಅಲ್ಟ್ರಾ, ಗ್ಯಾಲಕ್ಸಿ S24+ ಮತ್ತು ಗ್ಯಾಲಕ್ಸಿ S24 ಡಿವೈಸ್‌ಗಳು ಲೈವ್ ಟ್ರಾನ್ಸಲೇಶನ್‌, ಇಂಟರ್ಪ್ರಿಟರ್, ಚಾಟ್ ಅಸಿಸ್ಟೆಂಟ್‌, ನೋಟ್‌ ಅಸಿಸ್ಟೆಂಟ್‌ ಮತ್ತು ಟ್ರಾನ್ಸ್ಕ್ರಿಪ್ಟ್ ಅಸಿಸ್ಟೆಂಟ್‌ ಸಾಮರ್ಥ್ಯಗಳನ್ನು ಪಡೆದಿವೆ. ಅಲ್ಲದೆ, ಸ್ಯಾಮ್‌ಸಂಗ್‌ ಕೀಬೋರ್ಡ್‌ನ ಎಐ ಫೀಚರ್ಸ್‌ ಹಿಂದಿ ಸೇರಿದಂತೆ 13 ಭಾಷೆಗಳಲ್ಲಿ ಮೆಸೆಜ್‌ಗಳನ್ನು ರಿಯಲ್‌ ಟೈಮ್‌ ಟ್ರಾನ್ಸಲೇಶನ್‌ ಮಾಡುವ ಸಾಮರ್ಥ್ಯ ಪಡೆದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ ಕೇವಲ 10 ನಿಮಿಷಗಳಲ್ಲಿ ನಿಮ್ಮ ಮನೆಗೆ..

ಇದಿಷ್ಟೇ ಅಲ್ಲದೆ ಕಾರಿನಲ್ಲಿರುವ ಆಂಡ್ರಾಯ್ಡ್‌ ಆಟೋ ಫೀಚರ್ಸ್‌ ಆಟೋಮ್ಯಾಟಿಕ್‌ ಒಳಬರುವ ಮೆಸೆಜ್‌ಗಳನ್ನು ಸಾರಾಂಶಗೊಳಿಸುತ್ತದೆ. ಜೊತೆಗೆ ಸಂಬಂಧಿತ ಕ್ರಮಗಳು ಮತ್ತು ಪ್ರತಿಕ್ರಿಯೆಗಳಿಗೆ ಶಿಫಾರಸುಗಳನ್ನು ಸಹ ಮಾಡುತ್ತದೆ. ಗೆಸ್ಚರ್-ಡ್ರೈವೆನ್‌ ಸರ್ಕಲ್ ಟು ಸರ್ಚ್ ಫೀಚರ್ ಅನ್ನು ಗ್ಯಾಲಕ್ಸಿ S24 ನೊಂದಿಗೆ ನೀಡಲಾಗಿದ್ದು, ಗ್ಯಾಲಕ್ಸಿ S24 ನ ಡಿಸ್‌ಪ್ಲೇಯು ಬಳಕೆದಾರರಿಗೆ ಯಾವುದೇ ಕಂಟೆಂಟ್‌ ಅನ್ನು ಹೈಲೈಟ್ ಮಾಡಲು, ಡೂಡಲ್ ಮಾಡಲು ಅಥವಾ ಸೂಕ್ತವಾದ, ಉತ್ತಮ-ಗುಣಮಟ್ಟದ ಮಾಹಿತಿ ಪಡೆಯಲು ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ ಕೇವಲ 10 ನಿಮಿಷಗಳಲ್ಲಿ ನಿಮ್ಮ ಮನೆಗೆ..

ಇನ್ನು 50 ಮೆಗಾಪಿಕ್ಸೆಲ್‌ ಸೆನ್ಸರ್‌ ಮತ್ತು ಕ್ವಾಡ್ ಟೆಲಿ ಸಿಸ್ಟಮ್‌ನೊಂದಿಗೆ ಹೊಸ 5x ಆಪ್ಟಿಕಲ್ ಜೂಮ್ ಲೆನ್ಸ್‌ನ ಸಹಾಯದಿಂದ ಗ್ಯಾಲಕ್ಸಿ S24 ಅಲ್ಟ್ರಾ ಉತ್ತಮವಾದ ಕ್ಯಾಮೆರಾ ಫೀಚರ್ಸ್‌ ಪಡೆದಿದೆ. ಈ ಮೂಲಕ ಬಳಕೆದಾರರು 2x ನಿಂದ 10x ವರೆಗಿನ ಜೂಮ್ ಸೆಟ್ಟಿಂಗ್‌ಗಳಲ್ಲಿ ಆಪ್ಟಿಕಲ್ ಗುಣಮಟ್ಟದ ಕಾರ್ಯಕ್ಷಮತೆಯನ್ನು ಪಡೆಯಬಹುದಾಗಿದೆ. ಇದರೊಂದಿಗೆ ಉತ್ತಮ ಕಾರ್ಯಕ್ಷಮತೆಗಾಗಿ ಭದ್ರತಾ ಪ್ಯಾಚ್‌ಗಳ ಜೊತೆಗೆ ಏಳು ವರ್ಷಗಳ ಉಚಿತ ಸಾಫ್ಟ್‌ವೇರ್ ಅಪ್‌ಗ್ರೇಡ್ ಅನ್ನು ಅನ್ನೂ ಸಹ ಈ ಫೋನ್‌ಗಳ ಮೇಲೆ ನೀಡಲಾಗುತ್ತಿದೆ.

Best Mobiles in India

English summary
Samsung Galaxy S24 series smartphone can be purchased through Blinkit. An instant cashback of Rs 5,000 will also be available on the purchase of this phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+