Home
ಸುದ್ದಿಜಾಲ

ಸ್ಯಾಮ್‌ಸಂಗ್‌ನ ಈ ದೈತ್ಯ ಫೋನಿಗೆ 'ಅತ್ಯುತ್ತಮ ಡಿಸ್‌ಪ್ಲೇ' ಕಿರೀಟ್‌: ವರದಿ!

ಸ್ಯಾಮ್‌ಸಂಗ್‌ ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ (Galaxy S24 Ultra) ಆಕರ್ಷಕ ಫೀಚರ್ಸ್‌ಗಳಿಂದ ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಇದರ ಜೊತೆಗೆ ಈ ಫೋನ್‌ ಇದೀಗ ಅತ್ಯುತ್ತಮ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ ಎಂಬ ಕೀರ್ತಿಗೆ ಪಾತ್ರವಾಗಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ ಮೊಬೈಲ್‌ ಅತ್ಯುತ್ತಮ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ ಎಂದು ಫ್ರೆಂಚ್ ಸ್ವತಂತ್ರ ಬೆಂಚ್‌ಮಾರ್ಕಿಂಗ್ ಸೈಟ್ DXOMark ವರದಿ ಮಾಡಿದೆ. DXOMark ಶ್ರೇಯಾಂಕದಲ್ಲಿ 155 ಸ್ಕೋರ್‌ನೊಂದಿಗೆ ಅತ್ಯುತ್ತಮ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ಆಗಿದೆ. ಇದಕ್ಕೆ ಚಿನ್ನದ ಮುದ್ರೆಯ ಅನುಮೋದನೆ ನೀಡಲಾಗಿದೆ. ಗೋಲ್ಡ್ ಲೇಬಲ್ ಎಂದರೆ ಡಿಸ್‌ಪ್ಲೇ 'ಅತ್ಯುತ್ತಮ ದರ್ಜೆಯ ಅನುಭವ' ನೀಡುತ್ತದೆ.

ಸ್ಯಾಮ್‌ಸಂಗ್‌ನ ಈ ದೈತ್ಯ ಫೋನಿಗೆ 'ಅತ್ಯುತ್ತಮ ಡಿಸ್‌ಪ್ಲೇ' ಕಿರೀಟ್‌: ವರದಿ!

ಇನ್ನು ಗ್ಯಾಲಕ್ಸಿ S24 ಅಲ್ಟ್ರಾ ಫೋನ್‌ ಇದು ರೀಡೆಬಲ್‌ ಸ್ಕೋರ್‌ನಲ್ಲಿ 161, ಚಲನೆಯಲ್ಲಿ 156, ಬಣ್ಣದಲ್ಲಿ 148, ಸ್ಪರ್ಶದಲ್ಲಿ 162, ವೀಡಿಯೊದಲ್ಲಿ 152 ಮತ್ತು ಆರ್ಟಿಫೆಕ್ಟ್ಸ್‌ ನಲ್ಲಿ 148 ಪಾಯಿಂಟ್‌ ಅನ್ನು ಪಡೆದುಕೊಂಡಿದೆ ಎಂದು ವರದಿ ಆಗಿದೆ. ಹಾಗೆಯೇ, ಈ ಫೋನ್‌ ಡಿಸ್ಪ್ಲೇ ಹೊರಾಂಗಣದಲ್ಲಿಯೂ ಸಹ ಓದಲು ಉತ್ತಮವಾಗಿದೆ ಎನ್ನಲಾಗಿದೆ. ಹಾಗಾದರೇ ಈ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ ಫೀಚರ್ಸ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ ಸ್ಮಾರ್ಟ್‌ಫೋನ್‌ 6.8 ಇಂಚಿನ ಡೈನಾಮಿಕ್ AMOLED 2X ಡಿಸ್‌ಪ್ಲೇ ಅನ್ನು ಹೊಂದಿದೆ. ಇನ್ನು ಇದರ ಡಿಸ್‌ಪ್ಲೇ 3120 x 1440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಈ ಡಿಸ್‌ಪ್ಲೇ 505 PPI ಪಿಕ್ಸೆಲ್‌ ಸಾಂದ್ರತೆ ಯೊಂದಿಗೆ, 2600 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಸಪೋರ್ಟ್‌ ಮಾಡುತ್ತದೆ.

ಸ್ಯಾಮ್‌ಸಂಗ್‌ನ ಈ ದೈತ್ಯ ಫೋನಿಗೆ 'ಅತ್ಯುತ್ತಮ ಡಿಸ್‌ಪ್ಲೇ' ಕಿರೀಟ್‌: ವರದಿ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ ಮೊಬೈಲ್‌ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಇದರ ಜೊತೆಗೆ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಜೊತೆಗೆ ಇದು ರನ್‌ ಆಗುತ್ತದೆ. ಹಾಗೆಯೇ ಈ ಫೋನ್‌ 12 GB RAM ಮತ್ತು 256 GB, 512 GB, ಹಾಗೂ 1TB ವರೆಗೆ ಆಂತರೀಕ ಸ್ಟೋರೇಜ್‌ ಆಯ್ಕೆಯನ್ನು ನೀಡಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ ಮೊಬೈಲ್‌ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಮೊದಲ ಕ್ಯಾಮೆರಾ 200 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಸೆಕೆಂಡರಿ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದ್ದು, ತೃತೀಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಹೊಂದಿದೆ ಹಾಗೂ ನಾಲ್ಕನೇ ಕ್ಯಾಮೆರಾ 10 ಮೆಗಾಪಿಕ್ಸೆಲ್‌ ಸೆನ್ಸಾರ್‌ ಟೆಲಿಫೋಟೋ ಲೆನ್ಸ್ ಪಡೆದಿದೆ. ಇದಲ್ಲದೆ 12 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದು 45W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಅನ್ನು ಪಡೆದಿದೆ. ಇದಲ್ಲದೆ 2.0 ತಂತ್ರಜ್ಞಾನ ಮತ್ತು ವೈರ್‌ಲೆಸ್ ಪವರ್ ಶೇರಿಂಗ್‌ ಆಯ್ಕೆ ಸಹ ಒಳಗೊಂಡಿದೆ. ಇದರಿಂದ ಕೇವಲ 30 ನಿಮಿಷದಲ್ಲಿ 65% ಚಾರ್ಜಿಂಗ್‌ ಒದಗಿಸಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, 4G LTE, Wi-Fi 7, Wi-Fi ಡೈರೆಕ್ಟ್, ಬ್ಲೂಟೂತ್ 5.3 ಮತ್ತು USB ಟೈಪ್-C ಪೋರ್ಟ್ ಸೇರಿವೆ.

Best Mobiles in India

English summary
Samsung Galaxy S24 Ultra rated as the best display phone. DXOMark Report. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+