Samsung: ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಸ್ಮಾರ್ಟ್‌ಫೋನ್ ಫೋಟೋ ಲೀಕ್! ಭರ್ಜರಿ ಫೀಚರ್ಸ್ ಆಯ್ಕೆ
ಸ್ಯಾಮ್‌ಸಂಗ್‌ನ (Samsung) ಯಾವುದೇ ಹೊಸ ಫೋನ್‌ಗಳೂ ಸಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತವೆ. ಯಾಕೆಂದರೆ ಸ್ಯಾಮ್‌ಸಂಗ್ ಹೊಸ ಫೋನ್‌ಗಳಲ್ಲಿ ಏನಾದರೂ ಒಂದು ಹೊಸ ಫೀಚರ್ಸ್ ಅನ್ನು ಕಡ್ಡಾಯವಾಗಿ ಪರಿಚಯಿಸಿಕೊಂಡು ಬರುವ ಮೂಲಕ ತನ್ನ ಗ್ರಾಹಕರನ್ನು ಹೆಚ್ಚು ಮಾಡಿಕೊಳ್ಳುವ ಕೆಲಸ ಮಾಡುತ್ತದೆ. ಈ ನಡುವೆ ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಫೋನ್ ಬಗ್ಗೆ ಈಗಾಗಲೇ ದೊಡ್ಡ ಸಂಚಲನವೇ ಉಂಟಾಗಿದೆ.
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಸ್ಮಾರ್ಟ್‌ಫೋನ್ (Samsung Galaxy S24 Ultra Smartphone) ಬಗ್ಗೆ ಗ್ರಾಹಕರಿಗೆ ಭಾರೀ ಕುತೂಹಲ ಹೆಚ್ಚಾಗಿದೆ. ಅದರಲ್ಲೂ ಆಗಾಗ್ಗೆ ಈ ಫೋನ್ ಸಂಬಂಧ ಕೆಲವು ಮಾಹಿತಿಗಳು ಲೀಕ್ ಆಗುತ್ತಿದ್ದು, ಪರಿಣಾಮ ಪ್ರತಿಸ್ಪರ್ಧಿಗಳ ಎದೆಯಲ್ಲಿ ನಡುಕ ಹುಟ್ಟುವಂತೆ ಆಗಿದೆ. ಅದರಂತೆ ಈಗ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಸ್ಮಾರ್ಟ್‌ಫೋನ್‌ನ ಫೋಟೋಗಳು ಲೀಕ್ ಆಗಿವೆ. ಹಾಗಿದ್ರೆ, ಈ ಫೋನ್ ಏನೆಲ್ಲಾ ವಿಶೇಷ ಫೀಚರ್ಸ್ ಪಡೆಯಲಿದೆ? ಎಂಬ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಸ್ಮಾರ್ಟ್‌ಫೋನ್: ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಫೋನ್‌ಬಗ್ಗೆ ಬಹಳಷ್ಟು ನಿರೀಕ್ಷೆ ಇದೆ. ಈ ಫೋನ್ ಖರೀದಿ ಮಾಡಲು ಗ್ರಾಹಕರು ಈಗಾಗಲೇ ತುದಿಗಾಲಲ್ಲಿ ನಿಂತಿದ್ದಾರೆ. ಅದರಂತೆ ಈಗ ತಾಜಾ ಮಾಹಿತಿಗಳು ಲೀಕ್ ಆಗಿದ್ದು, ಈ ಫೋನ್ ಈ ಸರಣಿಯಲ್ಲಿ 3 ಮಾದರಿಗಳನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ. ಅದಾಗ್ಯೂ ಅಲ್ಟ್ರಾದ ಬಗ್ಗೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.
ಟಿಪ್‌ಸ್ಟರ್ ಡೇವಿಡ್ ಮಾರ್ಟಿನ್ ಟ್ವಿಟ್ಟರ್‌ನಲ್ಲಿ ಗ್ಯಾಲಕ್ಸಿ S24 ಅಲ್ಟ್ರಾದ ಕೆಲವು ಚಿತ್ರಗಳನ್ನು ಶೇರ್ ಮಾಡಿಕೊಳ್ಳಲಾಗಿದೆ. ಇದರಿಂದ ತಿಳಿದುಬರುವ ಮಾಹಿತಿ ಏನೆಂದರೆ ಸ್ಯಾಮ್‌ಸಂಗ್ ವಿನ್ಯಾಸವನ್ನು ಬದಲಾಯಿಸಲು ಮುಂದಾಗಿಲ್ಲ ಬದಲಾಗಿ ಕಂಪನಿಯು ಹೆಚ್ಚು ಸಂಸ್ಕರಿಸಿದ ಅನುಭವವನ್ನು ನೀಡಲು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ ಎಂದು ತೋರುತ್ತದೆ.

ಅಂದರೆ ಕಂಪನಿಯು ವಿನ್ಯಾಸವನ್ನು ಬದಲು ಮಾಡದೆ ಹಾಗೆಯೇ ಉಳಿಸಿಕೊಂಡು ಬಂದಿದ್ದು, ಇದು ಸ್ಯಾಮ್‌ಸಂಗ್‌ಗೆ ದೊಡ್ಡ ಹೆಸರು ತಂದಕೊಟ್ಟಿದೆ. ಅಂದರೆ ಈಗ ಐಫೋನ್‌ಗಳನ್ನು ಸುಲಭವಾಗಿ ಹೇಗೆ ಕಂಡು ಹಿಡಿಯಬಹುದೋ ಅದೇ ರೀತಿಯ ಸ್ಯಾಮ್‌ಸಂಗ್ ಫೋನ್‌ಗಳನ್ನು ಸಹ ಸುಲಭವಾಗಿ ಪತ್ತೆ ಮಾಡಬಹುದು. ಇದಕ್ಕೆ ಕಾರಣ ಫೋನ್‌ಗಳ ಶೈಲಿ. ಇದು ಮಾರುಕಟ್ಟೆ ತಂತ್ರವಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನಲಾಗಿದೆ.
ಇನ್ನು ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಫ್ಲಾಟ್ ಬ್ಯಾಕ್ ಪ್ಯಾನೆಲ್‌ನೊಂದಿಗೆ ಕಾಣಿಸಿಕೊಳ್ಳಬಹುದು ಮತ್ತು ಈ ವರ್ಷದ ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್‌ಫೋನ್‌ನಂತೆ ಕರ್ವ್ಡ ಅಂಚುಗಳನ್ನು ನಾವು ನೋಡದೇ ಇರಬಹುದು ಎನ್ನಲಾಗಿದೆ. ಪರಿಣಾಮ ಸ್ಯಾಮ್‌ಸಂಗ್ ಹೊಸ ಆವೃತ್ತಿಯಲ್ಲಿ ಫ್ಲಾಟ್ ಡಿಸ್‌ಪ್ಲೇ ಆಯ್ಕೆ ನೀಡಲು ಯೋಜಿಸುತ್ತಿದೆ ಎಂದು ತಿಳಿದುಬಂದಿದೆ. ಹಾಗೆಯೇ ಕ್ವಾಡ್ ಕ್ಯಾಮೆರಾ ಆಯ್ಕೆಯನ್ನು ಈ ಫೋನ್ ಹೊಂದಿರಲಿದೆ ಎಂದು ಹೇಳಲಾಗಿದ್ದು, ಪ್ರತಿ ಲೆನ್ಸ್ ವಿಭಿನ್ನ ಲೋಹದ ಉಂಗುರಗಳಲ್ಲಿ ಸುತ್ತುವರಿಯಲ್ಪಟ್ಟಿದೆ ಎಂದು ನಂಬಲಾಗಿದೆ.

ಹ್ಯಾಂಡ್‌ಸೆಟ್‌ನ ಬಲಭಾಗದಲ್ಲಿ ಭೌತಿಕ ಬಟನ್‌ಗಳ ಆಯ್ಕೆ ನೀಡಲಾಗಿದ್ದು, ಇದರ ಡಿಸ್‌ಪ್ಲೇ ಪಂಚ್-ಹೋಲ್ ವಿನ್ಯಾಸವನ್ನು ಹೊಂದಿದೆ ಎಂದು ತಿಳಿದುಬಂದಿದ್ದು, ಈ ಎಲ್ಲಾ ಮಾಹಿತಿ ಗಮನಿಸಿದರೆ ಒಟ್ಟಾರೆ ವಿನ್ಯಾಸವು ಗ್ಯಾಲಕ್ಸಿ S23 ಅಲ್ಟ್ರಾವನ್ನು ಹೋಲುತ್ತದೆ ಎಂದು ತೋರುತ್ತದೆ. ಇದರೊಂದಿಗೆ ಈ ಸರಣಿ ಫೋನ್‌ಗಳು ಕ್ವಾಲ್ಕಮ್‌ನ ಹೊಸ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್ ಅನ್ನು ಹೊಂದಿರಬಹುದು ಎಂದು ದೃಢವಾಗಿ ನಂಬಲಾಗಿದೆ.
ಇದರೊಂದಿಗೆ ಕ್ವಾಡ್ ರಿಯರ್ ಕ್ಯಾಮೆರಾ ಘಟಕವು 200 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್, 50 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಕ್ಯಾಮೆರಾ, 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಕ್ಯಾಮೆರಾ ಮತ್ತು 10 ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸರ್ ಆಯ್ಕೆ ಪಡೆದಿರಬಹುದು ಎಂದು ಹೇಳಲಾಗಿದೆ. ಕ್ಯಾಮೆರಾ ಕಾರ್ಯಕ್ಷಮತೆಯಲ್ಲಿ ಪ್ರಮುಖ ಸುಧಾರಣೆಯೊಂದಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 24 ಸರಣಿಯನ್ನು ಪ್ರಾರಂಭಿಸುವ ನಿರೀಕ್ಷೆಯನ್ನು ಮಾಡಬಹುದಾಗಿದೆ.
ಹಾಗೆಯೇ ಇದರ ಬ್ಯಾಟರಿ ವಿಚಾರಕ್ಕೆ ಬರುವುದಾದರೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಇದು ಹೊಂದಿದ್ದು, ಇದು 45W ವೇಗದ ಚಾರ್ಜಿಂಗ್ ತಂತ್ರಜ್ಞಾನಕ್ಕೆ ಬೆಂಬಲ ಪಡೆದುಕೊಳ್ಳಲಿದೆ ಎನ್ನುವ ಮಾತುಗಳು ಸಹ ಕೇಳಿಬಂದಿವೆ. ಆದರೆ, ಸಹಜವಾಗಿ ಬಾಕ್ಸ್‌ನಲ್ಲಿ ಚಾರ್ಜರ್ ಇರುತ್ತದೆ ಅನ್ನೋದನ್ನು ನಿರೀಕ್ಷಿಸುವ ಹಾಗಿಲ್ಲ. ಏಕೆಂದರೆ ಕಂಪನಿಯು ಹೆಚ್ಚಿನ ಫೋನ್‌ಗಳೊಂದಿಗೆ ಶಿಪ್ಪಿಂಗ್ ಅನ್ನು ಸ್ಟಾಪ್ ಮಾಡಿದೆ. ಪರಿಣಾಮ ನೀವು ಇದಕ್ಕೆ ಪ್ರತ್ಯೇಕ ಹಣ ಪಾವತಿ ಮಾಡಿ ಖರೀದಿ ಮಾಡಬೇಕಿದೆ.


Click it and Unblock the Notifications








