Samsung: ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾದ S ಪೆನ್‌ನಿಂದ ಕೆಟ್ಟ ವಾಸನೆ! ಚಿಂತಿಸಬೇಡಿ ಎಂದ ಸ್ಯಾಮ್‌ಸಂಗ್
ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು (Samsung smartphone) ಜಾಗತಿಕವಾಗಿ ಭಾರೀ ಬೇಡಿಕೆ ಪಡೆದುಕೊಂಡಿದೆ. ಅದರಲ್ಲೂ ಇತ್ತೀಚೆಗೆ ಲಾಂಚ್ ಮಾಡಲಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿಯ (Samsung Galaxy S24 series) ಪ್ರೀಮಿಯಂ ಫೋನ್‌ಗಳಿಗೆ ಸಾಕಷ್ಟು ಬೇಡಿಕೆ ಇದ್ದು, ಈ ನಡುವೆ ಈ ಫೋನ್‌ಬಗ್ಗೆ 'ಕೆಟ್ಟ ವಾಸನೆ' (bad smell) ವಿಚಾರ ಮುನ್ನೆಲೆಗೆ ಬಂದಿದೆ.
ಹೌದು, ಈ ವಿಷಯ ಕೇಳಿ ನೀವು ಗೊಂದಲಕ್ಕೆ ಒಳಗಾಗಿರಬಹುದು. ಸ್ಮಾರ್ಟ್‌ಫೋನ್ ವಿಚಾರದಲ್ಲಿ ಏನಿದು ಕೆಟ್ಟ ವಾಸನೆ ಎಂದು. ಆದರೆ ಇದು ಸತ್ಯ. ಈ ಸಂಬಂಧ ಬಳಕೆದಾರರು ಆರೋಪ ಮಾಡಿದ್ದು, ಈ ಸಂಬಂಧ ರೆಡ್ಡಿಟ್‌ನಲ್ಲಿ ತೀವ್ರ ಚರ್ಚೆ ಆಗುತ್ತಿದೆ. ಹಾಗಿದ್ರೆ, ಏನಿದು ಹೊಸ ವಿಷಯ?, ಈ ಸಂಬಂಧ ಸ್ಯಾಮ್‌ಸಂಗ್ ಹೇಳಿದ್ದೇನು ಅನ್ನೋ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್ S ಪೆನ್‌ನಿಂದ ಕೆಟ್ಟ ವಾಸನೆ: ಮೊದಲೇ ತಿಳಿಸಿದಂತೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ 2024 ಸ್ಮಾರ್ಟ್‌ಫೋನ್ ಪ್ರೀಮಿಯಂ ವಿಭಾಗದಲ್ಲಿ ಕಾಣಿಸಿಕೊಂಡಿದ್ದು, ಅಗತ್ಯ ಇರುವ ಎಲ್ಲಾ ರೀತಿಯ ಫೀಚರ್ಸ್ ಅನ್ನು ಪಡೆದಿದೆ. ಆದರೆ ಈ ವಿಷಯ ಮಾತ್ರ ಬಳಕೆದಾರರಿಗೆ ಈ ಫೋನ್ ಅನ್ನು ಬಳಕೆ ಮಾಡಬಾರದು ಎನಿಸುವಷ್ಟು ಬೇಸರ ತರಿಸಿದೆಯಂತೆ. ಅದುವೇ S ಪೆನ್ ಸ್ಟೈಲಸ್ (S Pen Stylus) ನಿಂದ ಸುಟ್ಟ ಪ್ಲಾಸ್ಟಿಕ್ ವಾಸನೆ.
ಈ ಬಗ್ಗೆ ಬಳಕೆದಾರರೋರ್ವರು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದು, ದೊಡ್ಡ ಮಟ್ಟದ ಚರ್ಚೆ ಪ್ರಾರಂಭವಾಗಿದೆ. ಬಳಕೆದಾರರು ತಮ್ಮ ಸ್ಯಾಮ್‌ಸಂಗ್ ಗ್ಯಾಲಕ್ಸಿ S 24 ಅಲ್ಟ್ರಾದಲ್ಲಿನ (Samsung Galaxy S 24 Ultra) S ಪೆನ್ ಸಂಪೂರ್ಣವಾಗಿ ರೀಕ್ಸ್ ಎಂದು ಉಲ್ಲೇಖಿಸಿದ್ದಾರೆ. ಈ ಸಂಬಂಧ ಸಾಕಷ್ಟು ಕಮೆಂಟ್‌ಗಳು ಬಂದಿದ್ದು, ಇತರರು ಸಹ ಈ ಸಮಸ್ಯೆಗಳ ಬಗ್ಗೆ ಧ್ವನಿಗೂಡಿಸಿದ್ದಾರೆ.

ಇನ್ನು ಈ ಪೋಸ್ಟ್‌ಗೆ ಮಾಡಲಾದ ಕೆಲವು ಕಾಮೆಂಟ್‌ಗಳು ಹಾಸ್ಯಾಸ್ಪದವಾಗಿದ್ದು, ಇದು ಸ್ಟಿಂಕಿ ಬೋಯಿ ಎಂದು ಖಚಿತಪಡಿಸಿಕೊಳ್ಳಬಹುದು ಎಂದು ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ ಇತರರು ಈ ವಾಸನೆಯನ್ನು ಸುಟ್ಟ ಪ್ಲಾಸ್ಟಿಕ್‌ಗೆ ಹೋಲಿಕೆ ಮಾಡಿದ್ರೆ ಇನ್ನೂ ಕೆಲವರು ಸೈಬರ್ಟ್ರಕ್‌ನ ವಾಸನೆಗೆ ಹೋಲಿಸಿದ್ದಾರೆ. ಇದರಿಂದ ಈ ಫೋನ್ ಬಳಕೆದಾರರಿಗೆ ಇದೇನು ಅನ್ನೋದು ಅರ್ಥವಾಗದಂತೆ ಆಗಿದೆ. ಈ ಕಾರಣಕ್ಕೆ ಕೆಲವು ಬಳಕೆದಾರರು S ಪೆನ್‌ನಲ್ಲಿನ ವಾಸನೆಯು ಸಂಭಾವ್ಯ ರಾಸಾಯನಿಕ ಲೇಪನಗಳಿಂದ ಉಂಟಾಗುತ್ತಿರಬಹುದು ಎಂದು ಹೇಳಿದ್ದಾರೆ.
ಸ್ಯಾಮ್‌ಸಂಗ್ ಪ್ರತಿಕ್ರಿಯೆ: ಇದರ ಬಗ್ಗೆ ಚಿಂತಿಸಬೇಕಾಗಿಲ್ಲ. S ಪೆನ್ ಅದರ ಹೋಲ್ಸ್ಟರ್‌ನಲ್ಲಿರುವಾಗ ಫೋನ್‌ನ ಆಂತರಿಕ ಘಟಕಗಳಿಗೆ ಹತ್ತಿರದಲ್ಲಿರುತ್ತದೆ. ಇದು ಬಳಕೆಯಲ್ಲಿರುವಾಗ ಶಾಖವನ್ನು ಉತ್ಪಾದಿಸುತ್ತದೆ ಮತ್ತು ಪ್ಲಾಸ್ಟಿಕ್ ಬಿಸಿಯಾಗಲು ಕಾರಣವಾಗುತ್ತದೆ ಎಂದು ತಿಳಿಸಲಾಗಿದೆ. ಇದೇ ಈ ರೀತಿಯ ವಾಸನೆಯನ್ನು ಉಂಟುಮಾಡುತ್ತದೆ. ಕೆಲವು ಗಂಟೆಗಳ ಕಾಲ ನಿಮ್ಮ ಕಾರನ್ನು ಬಿಸಿಲಿನಲ್ಲಿ ಬಿಟ್ಟ ನಂತರ ಅದರಿಂದ ಬರುವ ವಾಸನೆಯಂತೆಯೇ ಇದು ಇದೆ. ವಾಹನದಲ್ಲಿನ ಸೀಟುಗಳು ಮತ್ತು ಪ್ಲಾಸ್ಟಿಕ್ ಫಿಟ್ಟಿಂಗ್‌ಗಳು ಬಿಸಿಯಾದ ನಂತರ ಈ ವಾಸನೆ ಬರುತ್ತದೆ. ಆದರೆ ಅದು ತಣ್ಣಗಾದ ನಂತರ ಇದು ಕಡಿಮೆಯಾಗುತ್ತದೆ ಎಂದು ತಿಳಿಸಲಾಗಿದೆ.

ಗಮನಿಸಬೇಕಾದ ವಿಷಯ ಏನೆಂದರೆ ಈ ವಾಸನೆಯು S24 ಅಲ್ಟ್ರಾ ಮಾದರಿಗೆ ಮಾತ್ರಸೀಮಿತವಾಗಿಲ್ಲ. ಗ್ಯಾಲಕ್ಸಿ S23 ಅಲ್ಟ್ರಾ ಮತ್ತು S22 ಅಲ್ಟ್ರಾ ನಂತಹ ಹಿಂದಿನ ಜನ್‌ನ ಡಿವೈಸ್‌ಗಳಲ್ಲೂ ಈ ಸಮಸ್ಯೆ ಇತ್ತಂತೆ. ಈ ಸಂಬಂಧ 9to5Google ವರದಿ ಮಾಡಿದೆ. ಜೊತೆಗೆ ಹಳೆಯ ನೋಟ್ S20 ಅಲ್ಟ್ರಾ ಸ್ಟೈಲಸ್‌ನಲ್ಲಿ ಯಾವುದೇ ವಾಸನೆ ಇಲ್ಲ ಎಂದು ತಿಳಿಸಿದ್ದು, ಹೊಸ ಮಾದರಿಗಳು ರಬ್ಬರೀಕೃತ ಲೇಪನ ಹೊಂದಿದ್ದು, ಇದೇ ಈ ವಾಸನೆಗೆ ಕಾರಣ ಇರಬಹುದು ಎಂದು ತಿಳಿಸಿದೆ.


Click it and Unblock the Notifications








