Home
ಸುದ್ದಿಜಾಲ

smartphone: ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 vs ಒನ್‌ಪ್ಲಸ್‌ 12! ಈ ಫೋನ್‌ಗಳಲ್ಲಿ ಯಾವುದು ಬೆಸ್ಟ್‌?

ಸ್ಮಾರ್ಟ್‌ಫೋನ್‌ಗಳ (smartphone) ವಿಭಾಗದಲ್ಲಿ ಸ್ಯಾಮ್‌ಸಂಗ್‌ ಹಾಗೂ ಒನ್‌ಪ್ಲಸ್‌ (Samsung, OnePlus) ಉತ್ತಮ ಫೋನ್‌ಗಳನ್ನು ಲಾಂಚ್‌ ಮಾಡುವ ಮೂಲಕ ಅಗ್ರ ಸ್ಥಾನ ಪಡೆದುಕೊಂಡಿವೆ. ಈ ನಡುವೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಹಾಗೂ ಒನ್‌ಪ್ಲಸ್‌ 12 ಫೋನ್‌ಗಳ ಲಾಂಚ್‌ಗೆ ಕ್ಷಣಗಣನೆ ಆರಂಭ ಆಗಿದ್ದು, ಈ ಫೋನ್‌ಗಳ ಬಗ್ಗೆ ಸಾಕಷ್ಟು ಮಾಹಿತಿ ಈಗಾಗಲೇ ಲೀಕ್‌ ಆಗಿವೆ.

ಹೌದು, 2024 ರಲ್ಲಿ ಲಾಂಚ್‌ ಆಗುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಪೈಕಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಹಾಗೂ ಒನ್‌ಪ್ಲಸ್‌ 12 ಫೋನ್‌ಗಳು (Samsung Galaxy S24, OnePlus 12 phones) ಭಾರೀ ಸಂಚಲನವನ್ನೇ ಉಂಟು ಮಾಡಲಿವೆ ಎನ್ನಲಾಗಿದೆ. ಯಾಕೆಂದರೆ ಈ ಫೋನ್‌ಗಳು ಲಾಂಚ್‌ ಆಗುವ ಮುನ್ನವೇ ಇವುಗಳ ಖರೀದಿಗೆ ಗ್ರಾಹಕರು ಕಾತುರದಿಂದ ಕಾದು ಕುಳಿತಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣ ಈ ಫೋನ್‌ಗಳು ಹೊಂದಿರುವ ಆಕರ್ಷಕ ಫೀಚರ್ಸ್‌. ಹಾಗಿದ್ರೆ, ಈ ಎರಡೂ ಫೋನ್‌ಗಳು ಯಾವೆಲ್ಲಾ ಫೀಚರ್ಸ್‌ ಆಯ್ಕೆ ಪಡೆದಿವೆ? ಈ ಫೋನ್‌ಗಳ ಲೀಕ್‌ ಮಾಹಿತಿಯಲ್ಲಿ ಏನಿದೆ ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24vsಒನ್‌ಪ್ಲಸ್‌ 12!ಈ ಫೋನ್‌ಗಳಲ್ಲಿ ಯಾವುದು ಬೆಸ್ಟ್?

ಯಾವ ಫೋನ್‌ ಉತ್ತಮ?: ಮುಂಬರುವ 2024 ರ ಪ್ರಮುಖ ಸ್ಮಾರ್ಟ್‌ಫೋನ್‌ಗಳಾದ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಹಾಗೂ ಒನ್‌ಪ್ಲಸ್‌ 12 ಪ್ರಭಾವಶಾಲಿ ಫೀಚರ್ಸ್ ಅನ್ನು ಹೊಂದಿರಲಿವೆ ಎಂಬುದು ಈಗಾಗಲೇ ತಿಳಿದ ವಿಚಾರ. ಈ ನಡುವೆ ಖರೀದಿದಾರರಿಗೆ ಈ ಫೋನ್‌ಗಳ ಆಪರೇಟಿಂಗ್ ಸಿಸ್ಟಂ, ಕ್ಯಾಮರಾ ಗುಣಮಟ್ಟ, ವಿನ್ಯಾಸ ಮತ್ತು ವಿಶಿಷ್ಟ ಕಾರ್ಯಚಟುವಟಿಕೆಗಳು ಹೇಗಿರಲಿವೆ ಎಂದು ತಿಳಿಯುವುದು ಅನಿವಾರ್ಯವಾಗಿದೆ.

ಈ ನಡುವೆ ಒನ್‌ಪ್ಲಸ್ ಇತ್ತೀಚೆಗೆ ಪ್ರಭಾವಶಾಲಿ ಫೋಲ್ಡಬಲ್ ಫೋನ್ ಆದ ಒನ್‌ಪ್ಲಸ್ ಓಪನ್‌ (OnePlus Open) ಅನ್ನು ಲಾಂಚ್‌ ಮಾಡುವ ಮೂಲಕ ಟೆಕ್ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಕಾರಣಕ್ಕೆ ಮುಂಬರುವ ಒನ್‌ಪ್ಲಸ್‌ 12 ಫೋನ್‌ನಲ್ಲಿ ಗ್ರಾಹಕರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ನಾವೇನು ಕಡಿಮೆ ಇಲ್ಲ ಎಂಬಂತೆ ಸ್ಯಾಮ್‌ಸಂಗ್‌ ಸಹ ತನ್ನ ಗ್ಯಾಲಕ್ಸಿ S24 ಸರಣಿಯಲ್ಲಿ ವಿಶೇಷ ಫೀಚರ್ಸ್‌ ಆಯ್ಕೆ ನೀಡುವ ಮೂಲಕ ಲಾಂಚ್‌ಗೆ ಎಲ್ಲಾ ತಯಾರಿ ನಡೆದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24vsಒನ್‌ಪ್ಲಸ್‌ 12!ಈ ಫೋನ್‌ಗಳಲ್ಲಿ ಯಾವುದು ಬೆಸ್ಟ್?

ಒನ್‌ಪ್ಲಸ್‌ 12: ಒನ್‌ಪ್ಲಸ್‌ನ ಲೀಕ್ ಮಾಹಿತಿ ವಿಚಾರಕ್ಕೆ ಬಂದರೆ ಈ ಫೋನ್‌ ಕ್ವಾಲ್ಕಾಮ್‌ನ ಇತ್ತೀಚಿನ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ. ಈ ಮೂಲಕ ಉನ್ನತ ದರ್ಜೆಯ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ. ಅಷ್ಟೇ ಅಲ್ಲದೆ BOE X1 OLED LTPO ಡಿಸ್‌ಪ್ಲೇ ಸ್ಫಟಿಕ-ಸ್ಪಷ್ಟ 2K ರೆಸಲ್ಯೂಶನ್ ಅನ್ನು ನೀಡುತ್ತದೆ. ಇದರೊಂದಿಗೆ ಈ ಫೋನ್ 64 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಅನ್ನು ಸಹ ಹೊಂದಲಿದೆ ಎಂದು ಈಗಾಗಲೇ ಮಾಹಿತಿ ದೃಢವಾಗಿದೆ.

ಜೊತೆಗೆ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ ಮತ್ತು ಸೋನಿ LYTIA LYT808 ಪ್ರಾಥಮಿಕ ರಿಯರ್‌ ಕ್ಯಾಮೆರಾ ಆಯ್ಕೆ ಪಡೆಯುವುದರಿಂದ, ಈ ಫೋನ್‌ ಒಂದು ರೀತಿಯಲ್ಲಿ ಪವರ್‌ಹೌಸ್‌ನಂತೆ ಕೆಲಸ ಮಾಡಲಿದೆ ಎಂದು ಹೇಳಲಾಗಿದೆ. ಅದರಲ್ಲೂ BOE ನ X1 ಓರಿಯೆಂಟಲ್ ಪರದೆಯು 2K ರೆಸಲ್ಯೂಶನ್ ಮತ್ತು 2,600 ನಿಟ್ಸ್‌ ನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆಯನ್ನು ಇದು ಪಡೆಯಲಿದ್ದು, ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡಲಿದೆ ಎಂದು ತೋರುತ್ತದೆ.

ಈ ಸ್ಮಾರ್ಟ್‌ಫೋನ್ ಮುಂದಿನ ವರ್ಷ ಜನವರಿಯಲ್ಲಿ ಲಾಂಚ್‌ ಆಗಲಿದೆ ಎನ್ನಲಾಗಿದ್ದು, ಆಂಡ್ರಾಯ್ಡ್‌ 14 ಆಧಾರಿತ ಆಕ್ಸಿಜನ್‌ ಓಎಸ್‌ 14 ಹಾಗೂ ಟ್ರಿಪಲ್‌ ರಿಯರ್ ಕ್ಯಾಮೆರಾ ರಚನೆ, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 100W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 5,400mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆಯಲಿದೆ ಎಂದು ಲೀಕ್‌ ಮಾಹಿತಿಗಳಲ್ಲಿ ಉಲ್ಲೇಖ ಮಾಡಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24vsಒನ್‌ಪ್ಲಸ್‌ 12!ಈ ಫೋನ್‌ಗಳಲ್ಲಿ ಯಾವುದು ಬೆಸ್ಟ್?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24: ಸ್ಯಾಮ್‌ಸಂಗ್ ವಿಚಾರಕ್ಕೆ ಬಂದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24, S24+ ಮತ್ತು S24 ಅಲ್ಟ್ರಾ ಅನ್ನು ಜನವರಿ 17, 2024 ರಂದು USA ನ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಅನಾವರಣಗೊಳಿಸಲು ಯೋಜಿಸಲಾಗಿದೆ. ಗ್ಯಾಲಕ್ಸಿ S24 ಲೈನ್‌ಅಪ್ ಅಲ್ಯೂಮಿನಿಯಂ ಬದಲಿಗೆ ಟೈಟಾನಿಯಂ ಫ್ರೇಮ್‌ಗಳನ್ನು ಹೊಂದಿರಬಹುದು ಎನ್ನಲಾಗಿದ್ದು, ಇದು ಗಟ್ಟಿಮುಟ್ಟಾದ ಮತ್ತು ಪ್ರೀಮಿಯಂ ನಿರ್ಮಾಣವನ್ನು ಖಚಿತಪಡಿಸುತ್ತದೆ.

ಹಾಗೆಯೇ S24 ಮತ್ತು S24+ ನ ಜಾಗತಿಕ ಮಾದರಿಗಳು ಅಕ್ಸಿನೋಸ್ ಚಿಪ್‌ಗಳಲ್ಲಿ ರನ್ ಆಗಲಿದೆ ಎನ್ನಲಾಗಿದೆ. ಆದರೆ, ಭಾರತೀಯ ವೇರಿಯಂಟ್‌ ಕಸ್ಟಮ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್ ಅನ್ನು ಹೊಂದಿರಬಹುದು ಎನ್ನಲಾಗಿದ್ದು, ಇದರ ನಡುವೆ S24 ಅಲ್ಟ್ರಾ ಇದೇ ಪ್ರೊಸೆಸರ್‌ ಅನ್ನು ಹೊಂದಿರಬಹುದು ಎಂದು ಮಾಹಿತಿ ಬಹಿರಂಗವಾಗಿದೆ. ಈ ಫೋನ್ ಬಿಡುಗಡೆ ದಿನಾಂಕ ಮತ್ತು ಹೆಚ್ಚಿನ ವಿವರಗಳಿಗೆ ಸಂಬಂಧಿಸಿದಂತೆ ಸ್ಯಾಮ್‌ಸಂಗ್‌ನಿಂದ ಅಧಿಕೃತ ದೃಢೀಕರಣ ಬರಬೇಕಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24vsಒನ್‌ಪ್ಲಸ್‌ 12!ಈ ಫೋನ್‌ಗಳಲ್ಲಿ ಯಾವುದು ಬೆಸ್ಟ್?

ಹಾಗಿದ್ರೆ ಈ ಫೀಚರ್ಸ್‌ ಆಧಾರದಲ್ಲಿ ಯಾವುದು ಬೆಸ್ಟ್‌?: ಎರಡೂ ಫೋನ್‌ಗಳು ಪ್ರಭಾವಶಾಲಿ ಫೀಚರ್ಸ್‌ ಅನ್ನು ಹೊಂದಿವೆ ಎಂಬುದು ಈ ಮೂಲಕ ತಿಳಿದುಬರುತ್ತದೆ. ಅಂದರೆ ಒನ್‌ಪ್ಲಸ್‌ 12 ಕ್ವಾಲ್ಕಮ್‌ನ ಇತ್ತೀಚಿನ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌, ಉತ್ತಮ ಗುಣಮಟ್ಟದ ಡಿಸ್‌ಪ್ಲೇ, ಅತ್ಯುತ್ತಮ ಕ್ಯಾಮೆರಾ ಸಾಮರ್ಥ್ಯ, ವೇಗದ ಚಾರ್ಜಿಂಗ್ ಬೆಂಬಲ, ದೃಢವಾದ ಬ್ಯಾಟರಿ ಮತ್ತು ನಿರೀಕ್ಷಿತ ಆಂಡ್ರಾಯ್ಡ್ 14 ನೊಂದಿಗೆ ಬರಲಿದೆ ಎಂದು ವದಂತಿಗಳಿವೆ.

ಮತ್ತೊಂದೆಡೆ ಗ್ಯಾಲಕ್ಸಿ S24 ಸರಣಿಯು ಅದರ ಸಂಭಾವ್ಯ ಟೈಟಾನಿಯಂ ಫ್ರೇಮ್‌ಗಳು, ಬಹು ವೇರಿಯಂಟ್‌ ಆಯ್ಕೆ ಹಾಗೂ ಉತ್ತಮ ಪ್ರೊಸೆಸರ್ ಆಯ್ಕೆ ಹೊಂದುವ ಸಾಧ್ಯತೆ ಇದ್ದು, ನಯವಾದ ವಿನ್ಯಾಸ, ಕ್ಯಾಮರಾ ಗುಣಮಟ್ಟ ಮತ್ತು ಜಾಗತಿಕ ಸ್ನಾಪ್‌ಡ್ರಾಗನ್ ನೀಡುವುದಕ್ಕೆ ಹೆಸರುವಾಸಿಯಾಗಿದೆ. ಈ ಮೂಲಕ ತನ್ನದೇ ಆದ ವಿಭಿನ್ನ ಬಳಕೆದಾರರನ್ನು ಆಕರ್ಷಿಸಬಹುದು ಎಂದು ತೋರುತ್ತದೆ.ಅಂದರೆ ಇದರಲ್ಲಿ ಬೆಲೆ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಪರಿಣಾಮ ಎರಡೂ ಫೋನ್‌ಗಳು ಉತ್ತಮವಾಗಿದ್ದು, ಅವರ ಅಗತ್ಯಕ್ಕೆ ತಕ್ಕಂತೆ ಖರೀದಿ ಮಾಡಬಹುದಾಗಿದೆ. ಅದಾಗ್ಯೂ ಅಧಿಕೃತ ಫೀಚರ್ಸ್ ಏನು ಅನ್ನೋದನ್ನು ಕಾದು ನೋಡಬೇಕಿದೆ.

Best Mobiles in India

English summary
Samsung Galaxy S24 and OnePlus 12 smartphone are going to be launched in a few days and the leaked features of these phones are making a lot of noise in the market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+