Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್‌ ಗ್ಯಾಲಕ್ಸಿ S25 ಅಲ್ಟ್ರಾ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಫೀಚರ್ಸ್‌ ಲೀಕ್‌!

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳು (Samsung smartphone) ವಿವಿಧ ರೀತಿಯಲ್ಲಿ ಬಳಕೆದಾರರ ಗಮನ ಸೆಳೆಯುತ್ತವೆ. ಈ ನಡುವೆ ಮುಂಬರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S25 ಅಲ್ಟ್ರಾ (Samsung Galaxy S25 Ultra) ಸ್ಮಾರ್ಟ್‌ಫೋನ್‌ ಬಗ್ಗೆ ಆಕರ್ಷಕ ಫೀಚರ್ಸ್‌ಗಳು ಆಗಾಗ್ಗೆ ಲೀಕ್‌ ಆಗುತ್ತಲೇ ಇದ್ದು, ಇದೀಗ ಇದರ ಕ್ಯಾಮೆರಾ ಫೀಚರ್ಸ್‌ ಎಲ್ಲರ ಗಮನ ಸೆಳೆಯುತ್ತಿದೆ.

ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಹಿಂದಿನ ಸರಣಿಗಿಂತ ಭಿನ್ನವಾಗಿ ಮೂರರ ಬದಲು ನಾಲ್ಕು ಕ್ಯಾಮೆರಾಗಳನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಅದರಲ್ಲೂ ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ 3x ಟೆಲಿ ಕ್ಯಾಮೆರಾದೊಂದಿಗೆ ಬರಲಿದೆ ಎಂದು ಎಂದು ಟಿಪ್‌ಸ್ಟರ್ ಐಸ್ ಯೂನಿವರ್ಸ್‌ಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗಿದ್ರೆ, ಕ್ಯಾಮೆರಾಗಳು ಏನೆಲ್ಲಾ ಫೀಚರ್ಸ್ ಪಡೆದಿರಲಿವೆ ಬನ್ನಿ ನೋಡೋಣ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S25 ಅಲ್ಟ್ರಾ ಕ್ಯಾಮೆರಾ ಫೀಚರ್ಸ್‌ ಲೀಕ್‌..

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ: ಕೆಲವು ದಿನಗಳ ಹಿಂದೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾಗಾಗಿ ಟೆಲಿ ಕ್ಯಾಮೆರಾವನ್ನು ಇರಿಸುವ ಸುದ್ದಿ ಆನ್‌ಲೈನ್‌ನಲ್ಲಿ ಸದ್ದು ಮಾಡುತ್ತಿದೆ. ಈಗ, ವಿಶ್ವಾಸಾರ್ಹ ಲೀಕರ್ ಐಸ್ ಯೂನಿವರ್ಸ್ ಮುಂದಿನ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಇನ್ನೂ ನಾಲ್ಕು ಕ್ಯಾಮೆರಾಗಳನ್ನು ಹೊಂದಿರುತ್ತದೆ ಎಂದು ಖಚಿತಪಡಿಸಿದೆ. ಗ್ಯಾಲಕ್ಸಿ S25 ಲಾಂಚ್‌ ಇನ್ನೂ ತಿಂಗಳುಗಳ ಕಾಲ ದೂರ ಇದೆ.

ಐಸ್ ಯೂನಿವರ್ಸ್ ಪ್ರಕಾರ, ಸ್ಯಾಮ್‌ಸಂಗ್ ಇನ್ನೂ ಗ್ಯಾಲಕ್ಸಿ S 25 ಅಲ್ಟ್ರಾವನ್ನು ಕ್ವಾಡ್ ಕ್ಯಾಮೆರಾ ರಚನೆಯೊಂದಿಗೆ ರವಾನಿಸಲು ಯೋಜಿಸಿದೆ. ಅದಾಗ್ಯೂ ಈ ಮೊದಲು ಗ್ಯಾಲಕ್ಸಿ S24 ಅಲ್ಟ್ರಾ ಗ್ಯಾಲಕ್ಸಿ S23 ಅಲ್ಟ್ರಾದಲ್ಲಿ (Galaxy S24 Ultra Galaxy S23 Ultra) ನೀಡಲಾಗಿದ್ದ ಫೀಚರ್ಸ್‌ ಅನ್ನು ಕೈಬಿಡುವುದಿಲ್ಲವಂತೆ. ಅಂದರೆ 3x ಮಾಡ್ಯೂಲ್ ಕಣ್ಮರೆಯಾಗುವುದಿಲ್ಲ ಎಂದು ಲೀಕರ್ ಖಚಿತವಾಗಿ ಹೇಳಿರುವುದು ಮಾತ್ರವಲ್ಲದೆ, ಅಪ್‌ಗ್ರೇಡ್ ಸಹ ಇದರಲ್ಲಿ ಲಭ್ಯ ಇರಲಿದೆ ಎಂದು ತಿಳಿದುಬಂದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S25 ಅಲ್ಟ್ರಾ ಕ್ಯಾಮೆರಾ ಫೀಚರ್ಸ್‌ ಲೀಕ್‌..

ಗ್ಯಾಲಕ್ಸಿ S21 ಅಲ್ಟ್ರಾ (Galaxy S21 Ultra) ಪ್ರಾರಂಭವಾದಾಗಿನಿಂದ, 10 ಮೆಗಾಪಿಕ್ಸೆಲ್‌ 3x ಕ್ಯಾಮೆರಾವು ಹೆಚ್ಚಾಗಿ ಬದಲಾಗದೆ ಉಳಿದಿದೆ. ನಿಖರವಾದ ನಾಭಿದೂರ (67 ಅಥವಾ 70 ಮಿಮೀ) ಮತ್ತು ಸೆನ್ಸರ್ ಗಾತ್ರವು ಸ್ವಲ್ಪ ಬದಲಾಗಿದೆ. ಆದರೆ, ಹೆಚ್ಚೇನು ಅಲ್ಲ. ಅದೇ ರೀತಿ, S20 ಅಲ್ಟ್ರಾದಿಂದ 12 ಮೆಗಾಪಿಕ್ಸೆಲ್‌ 120° ಅಲ್ಟ್ರಾ ವೈಡ್ ಕ್ಯಾಮೆರಾದೊಂದಿಗೆ ನಾವು ಯಾವುದೇ ಬದಲಾವಣೆ ಗಮನಿಸಿಲ್ಲ ಎಂದು ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ.

ಆದರೆ ಪ್ರಾಥಮಿಕ ಕ್ಯಾಮೆರಾ S20 ಅಲ್ಟ್ರಾದ 108 ಮೆಗಾಪಿಕ್ಸೆಲ್‌ HM1 ಸೆನ್ಸರ್‌ನಿಂದ S21 ನ 108 ಮೆಗಾಪಿಕ್ಸೆಲ್ HM3 ಮತ್ತು S22 ಅಲ್ಟ್ರಾದ S23 ಮತ್ತು S24 ಅಲ್ಟ್ರಾದ 200 ಮೆಗಾಪಿಕ್ಸೆಲ್‌ HP2 ವರೆಗೆ ಅನೇಕ ಬದಲಾವಣೆಗಳು ಕಂಡುಬಂದಿವೆ. ಈ ಹಿಂದೆ, 200 ಮೆಗಾಪಿಕ್ಸೆಲ್‌ ಮುಖ್ಯ ಸೆನ್ಸರ್‌ ಕಿರು ಶ್ರೇಣಿಯ ಜೂಮ್ ಸ್ನ್ಯಾಪ್‌ಗಳಿಗಾಗಿ ಟೆಲಿ ಶೂಟರ್ ಅನ್ನು ಡಿಚ್ ಮಾಡಲು ಸಹಾಯ ಮಾಡುತ್ತದೆ ಎಂದು ಟೆಕ್‌ ವಲಯದಲ್ಲಿ ಕೆಲವು ಮಾತುಗಳು ಕೇಬಂದಿದ್ದವು.

ಅದರಂತೆ ಕೆಲವು ವದಂತಿಗಳನ್ನು ನಂಬುವುದಾದರೆ ಗ್ಯಾಲಕ್ಸಿ S25 ಅಲ್ಟ್ರಾ ಅದರ ಹಿಂದಿನ ಅದೇ HP2 ಸೆನ್ಸರ್‌ ಅನ್ನು ಬಳಸುತ್ತದೆ. ಆದರೆ, ಹೆಚ್ಚಿನ ಬೆಳಕನ್ನು ಸೆರೆಹಿಡಿಯಲು ಹೆಚ್ಚುವರಿ ವರ್ಧನೆಗಳನ್ನು ಬಳಕೆ ಮಾಡಬಹುದು ಎಂದು ತಿಳಿದುಬಂದಿದೆ. ಈ ವರ್ಧನೆಯು ಸ್ಯಾಮ್‌ಸಂಗ್ 3x ಟೆಲಿ ಕ್ಯಾಮೆರಾವನ್ನು ತೊಡೆದುಹಾಕುತ್ತದೆ ಎಂದು ಜನರು ನಂಬುವಂತೆ ಮಾಡಲಾಗಿದೆ. ಮತ್ತೊಂದು ವಿಶ್ವಾಸಾರ್ಹ ಟಿಪ್‌ಸ್ಟರ್ ಎಕ್ಸ್‌ನಲ್ಲಿ S25 ನಾಲ್ಕು ಕ್ಯಾಮೆರಾಗಳನ್ನು ಹೊಂದಿದೆ ಎಂದು ಹೇಳಿಕೊಂಡಿದ್ದಾರೆ. ಆದಾಗ್ಯೂ, ಗ್ಯಾಲಕ್ಸಿ S25 ಅಲ್ಟ್ರಾ ನಾಲ್ಕು ಕ್ಯಾಮೆರಾಗಳಿಗಿಂತ ಮೂರು ಕ್ಯಾಮೆರಾಗಳನ್ನು ಮಾತ್ರ ಹೊಂದಿರುತ್ತದೆ ಎಂದು ಲೀಕರ್ ಬೆನೆಟ್‌ಬುಹ್ನರ್ ಉಲ್ಲೇಖ ಮಾಡಿದ್ದಾರೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S25 ಅಲ್ಟ್ರಾ ಕ್ಯಾಮೆರಾ ಫೀಚರ್ಸ್‌ ಲೀಕ್‌..

ಗ್ಯಾಲಕ್ಸಿ S25 ಅಲ್ಟ್ರಾ ಸ್ಮಾರ್ಟ್‌ಫೋನ್‌ ಮುಂದಿನ ಜನವರಿಯಲ್ಲಿ ಲಾಂಚ್ ಆಗಲಿದೆ ಎನ್ನಲಾಗಿದ್ದು, ಈ ಲಾಂಚ್‌ ಬಹು ದೂರ ಇದ್ದರೂ ಸಹ ಈಗಾಗಲೇ ಮಾರುಕಟ್ಟೆಯನ್ನು ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿದೆ. ಇದರಿಂದಾಗಿ ಈ ಫೋನ್‌ನ ಕ್ಯಾಮೆರಾ ಫೀಚರ್ಸ್‌ ಮುಂದಿನ ದಿನಗಳಲ್ಲಿ ಬದಲಾಗಬಹುದು. ಈ ಫೋನ್‌ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕು ಎಂದರೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.

Best Mobiles in India

English summary
Samsung Galaxy S25 Ultra is known to have four cameras instead of three unlike the previous series. In particular, tipster Ice Universe has mentioned that this Samsung Galaxy S25 Ultra will come with a 3x telephoto camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+