ಸದ್ಯದಲ್ಲೇ ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್3 ಸ್ಲಿಮ್ ಬಿಡುಗಡೆ
ಗೆಲಾಕ್ಸಿ ಎಸ್3 ಮಾರುಕಟ್ಟೆಯಲ್ಲಿ ಕ್ಲಿಕ್ ಆಗುತ್ತಿದ್ದಂತೆ, ಸ್ಯಾಮ್‌ಸಂಗ್ ಅದೇ ಹೆಸರಿನ ಸರಣಿಯಲ್ಲಿ ಎಸ್3 ಸ್ಲಿಮ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮುಂದಾಗುತ್ತಿದೆ.ಗೆಲಾಕ್ಸಿ ಎಸ್3 ಸ್ಲಿಮ್ ಸ್ಮಾರ್ಟ್‌ಫೋನ್ ಬಗ್ಗೆ ಪೋರ್ಚುಗಲ್ ಸ್ಯಾಮ್‌ಸಂಗ್ ವೆಬ್‌ಸೈಟ್ ಮಾಹಿತಿ ಪ್ರಕಟಿಸಿದೆ.
4.5 ಇಂಚಿನ ಟಿಎಫ್‌ಟಿ ಸ್ಕ್ರೀನ್ ಹೊಂದಿದ್ದು, ಎಕ್ಸಲರೋ ಮೀಟರ್,ಕಂಪಾಸ್,ಪ್ರಾಕ್ಸಿಮಿಟಿ ಸೆನ್ಸರ್‌ಗಳನ್ನು ಒಳಗೊಂಡಿದೆ. ಹಿಂದುಗಡೆ ಎಲ್‌ಇಡಿ ಫ್ಲ್ಯಾಶ್ ಹೊಂದಿರುವ 5 ಎಂಪಿ ಕ್ಯಾಮೆರಾ,ಮುಂದುಗಡೆ ವಿಜಿಎ ಕ್ಯಾಮೆರಾವನ್ನು ಸ್ಯಾಮ್‌ಸಂಗ್ ಈ ಸ್ಮಾರ್ಟ್‌ಫೋನಿಗೆ ನೀಡಿದೆ.

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್3 ಸ್ಲಿಮ್
ವಿಶೇಷತೆ:
4.5 ಇಂಚಿನ ಟಿಎಫ್‌ಟಿ ಕ್ಯೂಎಚ್‌ಡಿ ಸ್ಕ್ರೀನ್(960 x 540 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2 Ghz ಕ್ವಾಡ್ ಕೋರ್ ಪ್ರೊಸೆಸರ್
8 ಜಿಬಿ ಆಂತರಿಕ ಮೆಮೊರಿ
1 ಜಿಬಿ ರ್‍ಯಾಮ್
ಹಿಂದುಗಡೆ 5 ಎಂಪಿ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
ಮುಂದುಗಡೆ ವಿಜಿಎ ಕ್ಯಾಮೆರಾ
32 ಜಿಬಿವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
2100 mAh ಬ್ಯಾಟರಿ
ಇದನ್ನೂ ಓದಿ: ಗೂಗಲ್ ಟ್ರೆಂಡ್ಸ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ರಾಜಕೀಯ ನಾಯಕರು


Click it and Unblock the Notifications