Subscribe to Gizbot

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್‌3ಯನ್ನು ಜೆಲ್ಲಿಬೀನ್‌ 4.3ಗೆ ಅಪ್‌ಡೇಟ್‌ ಮಾಡಿ

Posted By:

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌3 ಬಳಸುವ ಬಳಕೆದಾರರಿಗೆ ಗುಡ್‌ನ್ಯೂಸ್‌‌. ನೀವು ನಿಮ್ಮ ಸ್ಮಾರ್ಟ್‌ಫೋನನ್ನು ಈಗ ಆಂಡ್ರಾಯ್ಡ್‌‌ 4.3ಗೆ ಜೆಲ್ಲಿ ಬೀನ್‌ ಓಎಸ್‌ಗೆ ಅಪ್‌ಡೇಟ್‌ ಮಾಡಬಹುದು.

ಗ್ರಾಹಕರು ಎರಡು ರೀತಿಯಲ್ಲಿ ಆಂಡ್ರಾಯ್ಡ್‌4.3ಗೆ ಜೆಲ್ಲಿಬೀನ್‌ ಅಪ್‌ಡೇಟ್‌ ಮಾಡಬಹುದಾಗಿದ್ದು OTA(Over The Air) ಅಪ್‌ಡೇಟ್‌ನಲ್ಲಿ ಬಳಕೆದಾರರು ಮೊಬೈಲ್‌ ಡೇಟಾದ ಮೂಲಕ ನೇರವಾಗಿ ಅಪ್‌ಡೇಟ್‌ ಮಾಡಬಹುದು.
ಹೀಗೆ ಅಪ್‌ಡೇಟ್‌ ಮಾಡಿ: settings>about phone>system update

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್‌3ಯನ್ನು ಜೆಲ್ಲಿಬೀನ್‌ 4.3ಗೆ ಅಪ್‌ಡೇಟ್‌ ಮಾಡಿ

ಡೆಸ್ಕ್‌ಟಾಪ್‌ ಕಂಪ್ಯೂಟರ್‌ ಮುಖಾಂತರ ಅಪ್‌ಡೇಟ್‌ ಮಾಡುವವರು ಹೀಗೆ ಅಪ್‌ಡೇಟ್‌ ಮಾಡಿಕೊಳ್ಳಬಹುದು.

ಮೊದಲು ನೀವು ನಿಮ್ಮ ಕಂಪ್ಯೂಟರ್‌ನಲ್ಲಿ ಕೀಸ್‌(Kies)ಸಾಫ್ಟ್‌ವೇರ್‌ನ್ನು ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿಕೊಳ್ಳಿ.
ಸಾಫ್ಟ್‌ವೇರ್‌ ಡೌನ್‌ಲೋಡ್‌ ಮಾಡಿದ ಬಳಿಕ ಹ್ಯಾಂಡ್‌ಸೆಟ್‌ನ್ನು ಮೈಕ್ರೋ ಯುಎಸ್‌ಬಿ ಕೇಬಲ್‌ ಮೂಲಕ ಕಂಪ್ಯೂಟರ್‌ಗೆ ಕನೆಕ್ಟ್‌ ಮಾಡಿ.
ಕಂಪ್ಯೂಟರ್‌ನಲ್ಲಿರುವ ಕೀಸ್‌ ಸಾಫ್ಟ್‌ವೇರ್‌ನ್ನು ಓಪನ್‌ ಮಾಡಿ.
ಕೀಸ್‌ ಸಾಫ್ಟ್‌ವೇರ್‌ ನಿಮ್ಮ ಹ್ಯಾಂಡ್‌ಸೆಟ್‌ ಕನೆಕ್ಟ್‌ ಆದ ಮೇಲೆ ಆಟೋಮ್ಯಾಟಿಕ್‌ ಆಗಿ ಸದ್ಯ ಲೇಟೆಸ್ಟ್‌ ಆಗಿರುವ ಆಂಡ್ರಾಯ್ಡ್‌ ಓಎಸ್‌ನ್ನು ಚೆಕ್‌ ಮಾಡಿ ಅಪ್‌ಡೇಟ್‌ ಮಾಡುತ್ತದೆ.


ಇದನ್ನೂ ಓದಿ:ಗೂಗಲ್‌ ನೆಕ್ಸಸ್‌ -5 ಸ್ಮಾರ್ಟ್‌ಫೋನನ್ನು ಗ್ರಾಹಕರು ಯಾಕೆ ಖರೀದಿಸಬೇಕು?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot