ಸ್ಯಾಮ್’ಸಂಗ್ ಗ್ಯಾಲಕ್ಸಿ S8 ರಲ್ಲಿ ಈವರೆಗಿನ ಅತ್ಯಂತ ಬೆಸ್ಟ್ ಫೋನ್ ಡಿಸ್ಪ್ಲೇ!
ಶೀಘ್ರದಲ್ಲೇ ಬಿಡುಗಡೆಗೊಳ್ಳಲಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ S8 ಹಾಗೂ ಗ್ಯಾಲಕ್ಸಿ S8+ ರಲ್ಲಿ ಬಳಸಲಾದ ‘ಇನ್’ಫಿನಿಟಿ ಡಿಸ್ಪ್ಲೇ’(Infinity Display) ಸುದ್ದಿಯಾಗುತ್ತಿದೆ.
ತನ್ನದೇ ಆದ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗುತ್ತಿರುವ ಸ್ಯಾಮ್’ಸಂಗ್ ಸ್ಮಾರ್ಟ್’ಫೋನ್’ಗಳು ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ. ಇನ್ನು ಶೀಘ್ರದಲ್ಲೇ ಬಿಡುಗಡೆಗೊಳ್ಳಲಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ S8 ಹಾಗೂ ಗ್ಯಾಲಕ್ಸಿ S8+ ಕೂಡಾ ಸದ್ಯ ಸುದ್ದಿಯಲ್ಲಿದೆ ಇದಕ್ಕೆ ಕಾರಣವಾಗಿದ್ದು ಇವುಗಳಲ್ಲಿ ಬಳಸಲಾದ 'ಇನ್’ಫಿನಿಟಿ ಡಿಸ್ಪ್ಲೇ’(Infinity Display).

ತನ್ನ ವಿಭಿನ್ನ ಹೆಸರಿನಿಂದಲೇ ಗುರುತಿಸಿಕೊಂಡಿರುವ ಈ ಡಿಸ್ಪ್ಲೇ ಏನೆಲ್ಲಾ ವಿಶೇಷತೆ ಹೊಂದಿರಬಹುದು ಎನ್ನುವ ಅನುಮಾನ ಜನರಲ್ಲೂ ಇದೆ. ಆದರೆ ಪ್ರತಿಷ್ಠಿತ ಕಂಪೆನಿಯೊಂದು ಜನರ ಈ ಅನುಮಾನವನ್ನು ದೂರ ಮಾಡಿದೆ.
ಸ್ಯಾಮ್ಸಂಗ್, ಆಪಲ್ ಕಂಪೆನಿಗಳನ್ನು ಮೀರಿಸಿದ ಶಿಯೋಮಿ!! ಭಾರತದ ನಂ 1 ಪಟ್ಟ?

ಪ್ರತಿಷ್ಠಿತ ಡಿಸ್ಪ್ಲೇ ಟೆಸ್ಟಿಂಗ್ ಕಂಪೆನಿಗಳಲ್ಲಿ ಗುರುತಿಸಿಕೊಂಡಿರುವ ಡಿಸ್ಪ್ಲೇ ಮೇಟ್(DisplayMate) ಮಾರುಕಟ್ಟೆಯಲ್ಲಿ ಪ್ರಸ್ತುತ ಲಭ್ಯವಿರುವ ಡಿಸ್ಪ್ಲೇಗಳಲ್ಲಿ ಸ್ಯಾಮ್’ಸಂಗ್ ಬಳಸಿರುವ Infinity Display ಯು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಘೋಷಿಸಿದೆ. ಇಷ್ಟೇ ಅಲ್ಲದೆ ಗ್ಯಾಲಕ್ಸಿ S8 ಗೆ ಅತ್ಯುನ್ನತ ಗ್ರೇಡ್ 'A+’ ನ್ನೂ ನೀಡಿದೆ.

ಇನ್ನು ಸ್ಯಾಮ್’ಸಂಗ್ ಸದ್ಯದಲ್ಲೇ ಬಿಡುಗಡೆ ಮಾಡಲಿರುವ ಗ್ಯಾಲಕ್ಸಿ S8 ಹಾಗೂ ಗ್ಯಾಲಕ್ಸಿ S8+ ಯನ್ನು ಖರೀದಿಸುವ ಕನಸು ಕಾಣುವವರಿಗೆ ಈ ಸುದ್ದಿ ಖುಷಿ ನೀಡಲಿದೆ ಎಂದರೆ ತಪ್ಪಾಗುವುದಿಲ್ಲ.
Comments
Best Mobiles in India
English summary
Samsung has introduced 'Infinity Display' in it's recently launched Galaxy S8 and Galaxy S8+ smartphones. Now it is known as the best phone display ever.
Story first
published: Saturday, April 8, 2017, 11:26 [IST]


Click it and Unblock the Notifications








