Subscribe to Gizbot

ಸ್ಯಾಮ್ಸಂಗ್, ಆಪಲ್ ಕಂಪೆನಿಗಳನ್ನು ಮೀರಿಸಿದ ಶಿಯೋಮಿ!! ಭಾರತದ ನಂ 1 ಪಟ್ಟ?

Written By:

ಸ್ಯಾಮ್ಸಂಗ್ ಮತ್ತು ಆಪಲ್ ನಂತಹ ಜನಪ್ರಿಯ ಬ್ರಾಂಡ್‌ಗಳನ್ನು ಸೋಲಿಸಿ, 2017 ರಲ್ಲಿ ಭಾರತದ ಗ್ರಾಹಕರ ಹೆಚ್ಚು ಆದ್ಯತೆಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿ ಶಿಯೋಮಿ ಬದಲಾಗಿದೆ.!! ಈ ಬಗ್ಗೆ ಪ್ರಖ್ಯಾತ ಮೊಬೈಲ್ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಸ್ಟ್ರಾಟರ್ಜಿ ಅನಾಲಿಟಿಕ್ಸ್ ವರದಿ ನೀಡಿದೆ.!!

ಭಾರತದಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವವರ ಶೇಕಡಾ 26 ಜನರು ತಮ್ಮ ಆದ್ಯತೆಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿ ಶಿಯೋಮಿಯನ್ನು ಆಯ್ಕೆ ಮಾಡಿತ್ತಿದ್ದಾರೆ ಎಂದು ಸ್ಟ್ರಾಟರ್ಜಿ ಅನಾಲಿಟಿಕ್ಸ್ ಸಂಸ್ಥೆ ಹೇಳಿದ್ದು, ಭಾರತದಲ್ಲಿ ಅತ್ಯಧಿಕ ಸ್ಮಾರ್ಟ್‌ಫೋನ್ ಮಾರಾಟಗಾರ ಕಂಪೆನಿಗಳಲ್ಲಿ ನಂ 1 ಪಟ್ಟ ಅಲಂಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸ್ಯಾಮ್ಸಂಗ್, ಆಪಲ್ ಕಂಪೆನಿಗಳನ್ನು ಮೀರಿಸಿದ ಶಿಯೋಮಿ!! ಭಾರತದ ನಂ 1 ಪಟ್ಟ?

ಈ 6 ಚಿತ್ರಗಳನ್ನ ಜೀವನದಲ್ಲಿ ಒಮ್ಮೆಯಾದರೂ ನೋಡ್ಬೇಕು!!

ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಸಂಸ್ಥೆಯ ಜನಪ್ರಿಯತೆ ಗಮನಾರ್ಹವಾದುದು. 2017 ರಲ್ಲಿ ಖರೀದಿಸಲು ಹುಡುಕುತ್ತಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಅತ್ಯಂತ ಆದ್ಯತೆಯ ಸ್ಮಾರ್ಟ್‌ಫೋನ್‌ ಆಗಿದ್ದು, ಶಿಯೋಮಿ ಕಂಪೆನಿ ಶೇಕಡ 125 ಪರ್ಸೆಂಟ್ ಬೆಳವಣಿಗೆ ಹೊಂದಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಸ್ಟ್ರಾಟಜಿ ಅನಲಿಟಿಕ್ಸ್ ವಿಶ್ಲೇಷಕ ರಾಜೀವ್ ನಾಯರ್ ಹೇಳಿದ್ದಾರೆ.

ಸ್ಯಾಮ್ಸಂಗ್, ಆಪಲ್ ಕಂಪೆನಿಗಳನ್ನು ಮೀರಿಸಿದ ಶಿಯೋಮಿ!! ಭಾರತದ ನಂ 1 ಪಟ್ಟ?

ಭಾರತದಲ್ಲಿ ಶಿಯೋಮಿಯ ಸ್ಮಾರ್ಟ್‌ಫೋನ್‌ಗಳು ಕೆಲವೇ ಸೆಕೆಂಡ್‌ಗಳಲ್ಲಿ ಖರ್ಚಾಗುತ್ತಿದ್ದು, ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ.! ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಶಿಯೋಮಿ ಎಂದೂ ರಾಜಿಯಾಗಿಲ್ಲ. ಹಾಗಾಗಿಯೇ ಶಿಯೋಮಿ ಭಾರತದಲ್ಲಿ ಇಷ್ಟು ಪ್ರಸಿದ್ದವಾಗಲು ಕಾರಣ ಎಂದು ಶಿಯೋಮಿ ಕಂಪೆನಿಯ ಭಾರತದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮನು ಜೈನ್ ಹೇಳಿದರು.

English summary
Xiaomi gained 26 per cent share in the most preferred smartphone brand beating Samsung and Apple. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot