ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್ 2 ಘೋಷಣೆ; 700 ದಿನಗಳ ಬ್ಯಾಟರಿ ಬ್ಯಾಕಪ್!
ಸ್ಯಾಮ್‌ಸಂಗ್ ನ ಗ್ಯಾಲಕ್ಸಿ ಫೋನ್‌ಗಳು ಎಷ್ಟು ಜನಪ್ರಿಯತೆ ಪಡೆಯುತ್ತಿವೆಯೇ ಅಷ್ಟೇ ಪ್ರಮಾಣದಲ್ಲಿ ಇದರ ಇತರೆ ಡಿವೈಸ್‌ಗಳಿಗೂ ಸಹ ಭಾರೀ ಬೇಡಿಕೆ ಇದೆ. ಈ ನಡುವೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್ 2 (Samsung Galaxy SmartTag2) ಅನ್ನು ಲಾಂಚ್ ಮಾಡಲಿದೆ. ನೀವು ಈ ಅಚ್ಚರಿಪಡುವ ವಿಷಯ ಏನೆಂದರೆ ಇದು 700 ದಿನಗಳ ಬ್ಯಾಟರಿ ಬ್ಯಾಕಪ್ ನೀಡಲಿದೆ.
ಹೌದು, ಸ್ಮಾರ್ಟ್‌ಟ್ಯಾಗ್ ಬಳಕೆ ಇಂದಿನ ದಿನಗಳಲ್ಲಿ ಅಗತ್ಯವೂ ಆಗಿದ್ದು, ಈ ನಡುವೆ ಪ್ರಮುಖ ಬ್ರ್ಯಾಂಡ್‌ಗಳು ಇವುಗಳನ್ನು ಸುಧಾರಿತ ಫೀಚರ್ಸ್‌ನೊಂದಿಗೆ ಅನಾವರಣ ಮಾಡಿಕೊಂಡು ಬಂದಿವೆ. ಅದರಂತೆ ಸ್ಯಾಮ್‌ಸಂಗ್ ಸಹ ಜನವರಿ 2021 ರಲ್ಲಿ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಸಮಾರಂಭದಲ್ಲಿ ಲಾಂಚ್ ಮಾಡಲಾಗಿತ್ತು. ಕಂಪನಿಯು ಇದೀಗ ಅದರ ಉತ್ತರಾಧಿಕಾರಿಯಾದ ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್ 2 ಬಗ್ಗೆ ಘೋಷಣೆ ಮಾಡಿದೆ.

ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್ 2 : ಈ ಹೊಸ ಡಿವೈಸ್ ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್ 2 ಅನ್ನು ಅಕ್ಟೋಬರ್ 11 ರಂದು ಜಾಗತಿಕವಾಗಿ ಲಾಂಚ್ ಮಾಡಲು ಸ್ಯಾಮ್‌ಸಂಗ್ ಸಿದ್ಧವಾಗಿದೆ. ಇದು ಹಿಂದಿನ ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್ ಮಾಡೆಲ್‌ಗಳಿಗಿಂತ ಎರಡು ಪಟ್ಟು ಹೆಚ್ಚು ಬ್ಯಾಟರಿ ಬ್ಯಾಕಪ್ ಹೊಂದಿರುವುದು ವಿಶೇಷವಾಗಿದೆ. ಅಂದರೆ 700 ದಿನಗಳವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ ಎಂದು ತಿಳಿಸಲಾಗಿದೆ.
ಮೊದಲೇ ತಿಳಿಸಿದಂತೆ ಇದರ ಪೂರ್ವವರ್ತಿಗಿಂತ ಹೊಸ ಟ್ರ್ಯಾಕಿಂಗ್ ಫೀಚರ್ಸ್ ಆಯ್ಕೆಯನ್ನು ಇದು ಹೊಂದಿದ್ದು, ಬೆಲೆಬಾಳುವ ವಸ್ತುಗಳನ್ನು ಪರಿಶೀಲಿಸಲು ಅಥವಾ ಸಾಕುಪ್ರಾಣಿಗಳ ಮೇಲೆ ನಿಗಾ ಇಡಲು ಇದನ್ನು ಬಳಕೆ ಮಾಡಬಹುದು ಎಂದು ಕಂಪೆನಿ ಮಾಹಿತಿ ನೀಡಿದೆ. ಈ ಡಿವೈಸ್ ಲಾಸ್ಟ್ ಮೋಡ್ ಫೀಚರ್ಸ್ ಹೊಂದಿದ್ದು, ಬಳಕೆದಾರರು ತಮ್ಮ ಸಂಪರ್ಕ ಮಾಹಿತಿಯನ್ನು ಟೆಕ್ಸ್ಟ್ ಮೆಸೆಜ್ ಸಹಾಯದಿಂದ ಸೇರಿಸಲು ಅನುಮತಿಸುತ್ತದೆ.
ಇಷ್ಟೇ ಅಲ್ಲದೆ ಈ ಟ್ಯಾಗ್ ಕಳೆದುಹೋದರೆ ಅದನ್ನು ವಾಪಸ್ ಪಡೆಯಲು ಸಹ ಅನುಕೂಲ ಮಾಡಿಕೊಡಲಾಗಿದೆ. ಅಂದರೆ ಯಾರಾದರೂ ಸಹ ಈ ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್ ಅನ್ನು ಸ್ಕ್ಯಾನ್ ಮಾಡಿ ಮಾಲೀಕರ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ಫೀಚರ್ಸ್ NFC ರೀಡರ್ ಮತ್ತು ವೆಬ್ ಬ್ರೌಸರ್‌ನೊಂದಿಗೆ ಎಲ್ಲಾ ಮೊಬೈಲ್ ಡಿವೈಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ಆಂಡ್ರಾಯ್ಡ್ ಫೋನ್ ಎಚ್ಚರಿಕೆ ನೀಡುತ್ತದೆ: ಇದರೊಂದಿಗೆ ಕಂಪಾಸ್ ವ್ಯೂ ಫೀಚರ್ಸ್‌ಗೆ ಕೆಲವು ನವೀಕರಣಗಳನ್ನು ಸಹ ನೀಡಲಾಗಿದೆ. ಈ ಮೂಲಕ ನಿರ್ದೇಶನಗಳನ್ನು ಟ್ರ್ಯಾಕ್ ಮಾಡಲು ಸುಲಭವಾಗಿದೆ. ಇನ್ನು ಸ್ಯಾಮ್‌ಸಂಗ್ ಸ್ಮಾರ್ಟ್‌ಥಿಂಗ್ಸ್ ಫೈಂಡ್ ಆಪ್‌ಗೂ ಸುಧಾರಣೆಗಳನ್ನು ತರಲಾಗಿದ್ದು, ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಪ್‌ಗೆ ಶಾರ್ಟ್‌ಕಟ್ ಅನ್ನು ಸೇರಿಸಬಹುದು. ಇದು ಪೂರ್ಣ-ಪರದೆಯ ನಕ್ಷೆ ವೀಕ್ಷಣೆ ಮತ್ತು ವರ್ಧಿತ ಇಂಟರ್ಫೇಸ್ ಅನ್ನು ನೀಡುತ್ತದೆ.
ಇದರೊಂದಿಗೆ ಬಳಕೆದಾರರ ಗೌಪ್ಯತೆಯನ್ನು ಸುರಕ್ಷಿತಗೊಳಿಸಲು ಸ್ಯಾಮ್‌ಸಂಗ್ ಬದ್ಧವಾಗಿದೆ ಎಂದು ತಿಳಿಸಿದೆ. ಡಿವೈಸ್‌ನ ಸ್ಥಳವನ್ನು ಬಳಕೆದಾರರ ಅನುಮತಿಯೊಂದಿಗೆ ಮಾತ್ರ ಲಭ್ಯವಾಗುವಂತೆ ಮಾಡುತ್ತದೆ. ಸ್ಮಾರ್ಟ್‌ಥಿಂಗ್ಸ್ ಫೈಂಡ್ ಬಳಕೆದಾರರ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಿದ್ದು, ಹೆಚ್ಚುವರಿ ಭದ್ರತೆಗಾಗಿ ಸ್ಯಾಮ್ಸಂಗ್ ನಾಕ್ಸ್ ಬೆಂಬಲ ಸಹ ಪಡೆದಿದೆ. ಇದಲ್ಲದೆ, ಲಾಸ್ಟ್ ಮೋಡ್ ಅನ್ನು ನಿಷ್ಕ್ರಿಯಗೊಳಿಸುವುದರಿಂದ ಮಾಲೀಕರ ಸಂಪರ್ಕ ಮಾಹಿತಿಯನ್ನು ತಕ್ಷಣವೇ ಮರೆಮಾಡುತ್ತದೆ ಮತ್ತು ಡಿವೈಸ್‌ನಿಂದ ಮಾಲೀಕರು ಬಿಟ್ಟ ಮೆಸೆಜ್ ಅನ್ನು ಅಳಿಸಿಹಾಕುತ್ತದೆ.
700 ದಿನಗಳ ಬ್ಯಾಟರಿ ಬ್ಯಾಕಪ್: ಇನ್ನು ಈ ಡಿವೈಸ್‌ನ ಪ್ರಮುಖ ವಿಷಯಕ್ಕೆ ಬಂದರೆ ಬ್ಯಾಟರಿಯ ಬ್ಯಾಕಪ್. ಈ ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್ 2 ವಿದ್ಯುತ್ ಉಳಿತಾಯ ಮೋಡ್‌ನಲ್ಲಿ 700 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದ್ದು, ಸಾಮಾನ್ಯ ಮೋಡ್‌ನಲ್ಲಿ 500 ದಿನಗಳವರೆಗೆ ಬ್ಯಾಟರಿ ಬ್ಯಾಕಪ್ ನೀಡಲಿದೆ ಎಂದು ಕಂಪೆನಿ ತಿಳಿಸಿದೆ. ಇದು ಹಿಂದಿನ ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್ ಮಾಡೆಲ್‌ಗಳಲ್ಲಿ ನೀಡಲಾಗಿದ್ದ ಬ್ಯಾಟರಿ ಬಾಳಿಕೆಗಿಂತ ಎರಡುಪಟ್ಟು ಹೆಚ್ಚಾಗಿದೆ. ಪರಿಣಾಮ ನೀವು ಅದೆಷ್ಟೋ ತಿಂಗಳಿಗೆ ಒಮ್ಮೆ ಚಾರ್ಜ್ ಮಾಡಿದ್ರೆ ಸಾಕು.

ಈ ವಿಶೇಷ ಡಿವೈಸ್‌ಗೆ $29.99 ಗಳನ್ನು ನಿಗದಿ ಮಾಡಲಾಗುತ್ತದೆ ಎನ್ನಲಾಗಿದೆ. ಅದರಂತೆ ಭಾರತದಲ್ಲಿ ಇದರ ಬೆಲೆ 2,495ರೂ.ಗಳಾಗಿರಲಿದೆ. ಜೊತೆಗೆ ಈ ಡಿವೈಸ್ ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಕಾಣಿಸಿಕೊಂಡಿದೆ. ಇದನ್ನು ನೀವು ಖರೀದಿ ಮಾಡಲು ಕೆಲವೇ ದಿನಗಳು ಕಾದರೆ ಸಾಕು. ನಿಮ್ಮ ಕೈಗೆ ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್ 2 ಸಿಗಲಿದ್ದು, ಈ ಮೂಲಕ ಬೆಲೆಬಾಳುವ ವಸ್ತುಗಳನ್ನು ಜೋಪಾನವಾಗಿ ನಿಮ್ಮ ಬಳಿಯೇ ಇರಿಸಿಕೊಳ್ಳಬಹುದು.


Click it and Unblock the Notifications








