Samsung: ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A9, A9 ಪ್ಲಸ್ ಲಾಂಚ್! 64GB ಸ್ಟೋರೇಜ್... 7040mAh ಬ್ಯಾಟರಿ
ಸ್ಯಾಮ್‌ಸಂಗ್ (Samsung) ಆಗಾಗ್ಗೆ ಹೊಸ ಹೊಸ ಸ್ಮಾರ್ಟ್‌ಡಿವೈಸ್‌ಗಳನ್ನು ಭಾರತದಲ್ಲಿ ಅನಾವರಣ ಮಾಡುವ ಮೂಲಕ ಬಹಳ ಸಂಚಲನವನ್ನೇ ಉಂಟು ಮಾಡುತ್ತಿದೆ. ಈ ನಡುವೆ ಹೊಸ ಸ್ಮಾರ್ಟ್‌ಡಿವೈಸ್‌ವೊಂದನ್ನು ಅಂದರೆ ಎರಡು ವೇರಿಯಂಟ್‌ನ ಟ್ಯಾಬ್ ಅನ್ನು ಲಾಂಚ್ ಆಡುವ ಮೂಲಕ ಸ್ಯಾಮ್‌ಸಂಗ್ ಪ್ರಿಯರಿಗೆ ಸಂತಸ ನೀಡಲಾಗಿದೆ.
ಹೌದು, ಸ್ಯಾಮ್‌ಸಂಗ್ ಇದೀಗ ಮಾರುಕಟ್ಟೆಗೆ ಎರಡು ಹೊಸ ಟ್ಯಾಬ್ಲೆಟ್ ಮಾದರಿಗಳನ್ನು ಪರಿಚಯಿಸಿದೆ. ಅಷ್ಟೇ ಅಲ್ಲದೆ ಇವುಗಳ ಸೇಲ್ ಅನ್ನು ಸಹ ಈಗಲೇ ಆರಂಭ ಮಾಡಿದ್ದು, ಗ್ಯಾಲಕ್ಸಿ ಟ್ಯಾಬ್ A9 ಸರಣಿಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A9 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A9 ಪ್ಲಸ್‌ನ (Samsung Galaxy Tab A9 and Samsung Galaxy Tab A9 Plus) ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇವುಗಳ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಸರಣಿಯ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಡಿವೈಸ್ ಅಂದರೆ ಟ್ಯಾಬ್ A9 ಮತ್ತು ಟ್ಯಾಬ್ A9 ಪ್ಲಸ್ ಟ್ಯಾಬ್ಲೆಟ್‌ಗಳು ಕ್ರಮವಾಗಿ 8.7 ಇಂಚಿನ WQXGA ಮತ್ತು 11 ಇಂಚಿನ WQXGA ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿವೆ. ಇದರೊಂದಿಗೆ ಪ್ಲಸ್ ರೂಪಾಂತರವು 90Hz ರಿಫ್ರೆಶ್ ರೇಟ್ ಮತ್ತು ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಕಾಣಿಸಿಕೊಂಡಿದೆ. ಈ ಎರಡೂ ಟ್ಯಾಬ್ಲೆಟ್‌ಗಳು ಟೆಕ್ಸ್ಚರ್ಡ್ ಬ್ಯಾಕ್ ಪ್ಯಾನೆಲ್ ಮತ್ತು ಒಂದೇ ರೀತಿಯ ವಿನ್ಯಾಸವನ್ನು ಹೊಂದಿವೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಪ್ರೊಸೆಸರ್ ಮಾಹಿತಿ: ಇವುಗಳ ಪ್ರೊಸೆಸರ್ ವಿಚಾರಕ್ಕೆ ಬರುವುದಾದರೆ A9 ಮಾದರಿಯು ಹಿಲಿಯೋ G99 ಚಿಪ್ (Helio G99 chip) ಅನ್ನು ಹೊಂದಿದ್ದರೆ, A9 ಪ್ಲಸ್ ಮಾದರಿಯು ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ (Snapdragon 695 processor) ಬಲ ಪಡೆದುಕೊಂಡಿದೆ. ಈ ಎರಡೂ ಟ್ಯಾಬ್ಲೆಟ್‌ಗಳು ಆಂಡ್ರಾಯ್ಡ್ 13 ಓಎಸ್ ಆಧಾರಿತ ಒನ್ UI 5.1.1 ನಲ್ಲಿ ರನ್ ಆಗಲಿವೆ. ಉಳಿದಂತೆ ಇವುಗಳ ಸಾಮಾನ್ಯ ವೇರಿಯಂಟ್ 4GB RAM + 64GB ಇಂಟರ್ ಸ್ಟೋರೇಜ್ ಆಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಕ್ಯಾಮೆರಾ ರಚನೆ: ಇನ್ನು ಈ ಟ್ಯಾಬ್‌ಗಳು ಭಿನ್ನ ಕ್ಯಾಮೆರಾ ಫೀಚರ್ಸ್ ಪಡೆದುಕೊಂಡಿವೆ. ಅಂದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A9 ಟ್ಯಾಬ್ಲೆಟ್ ಮಾದರಿಯು 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದರೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A9 ಪ್ಲಸ್ 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಬ್ಯಾಟರಿ ಹಾಗೂ ಇತರೆ: ಈ ಗ್ಯಾಲಕ್ಸಿ ಟ್ಯಾಬ್ A9 5100mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಗ್ಯಾಲಕ್ಸಿ ಟ್ಯಾಬ್ A9 ಪ್ಲಸ್ ಡಿವೈಸ್ 15W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ 7,040mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ವಿಭಿನ್ನ ಸ್ಪೀಕರ್ ಸಿಸ್ಟಮ್ ಆಯ್ಕೆ ಹಾಗೂ ಸುಧಾರಿತ ವೈಫೈ, ಬ್ಲೂಟೂತ್ ಆವೃತ್ತಿಯನ್ನು ಹೊಂದಿವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಬೆಲೆ ಹಾಗೂ ಲಭ್ಯತೆ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A9 ನ 4GB RAM + 64GB ಇಂಟರ್ ಸ್ಟೋರೇಜ್‌ನ ವೈ-ಫೈ ವೇರಿಯಂಟ್‌ನ ಬೆಲೆ 12,999 ರೂ. ಗಳಾಗಿದ್ದರೆ ಇದೇ 4GB RAM + 64GB ಇಂಟರ್ ಸ್ಟೋರೇಜ್ ಆಯ್ಕೆಯ LTE ವೇರಿಯಂಟ್ ಬೆಲೆ 15,999 ರೂ.ಗಳಾಗಿದೆ.
ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A9 ಪ್ಲಸ್‌ನ ಭಾರತದ ಬೆಲೆ 4GB RAM + 64GB ಇಂಟರ್ ಸ್ಟೋರೇಜ್‌ನ ವೈ ಫೈ ವೇರಿಯಂಟ್ ಬೆಲೆ 18,999ರೂ.ಗಳಾಗಿದೆ. ಜೊತೆಗೆ 8GB RAM + 128GB ಇಂಟರ್ ಸ್ಟೋರೇಜ್ ಆಯ್ಕೆಯ ವೈ ಫೈ ವೇರಿಯಂಟ್ 20,999 ರೂ.ಗಳಾಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A9 ಪ್ಲಸ್ ಟ್ಯಾಬ್ಲೆಟ್‌ನ 4GB RAM + 64GB ಇಂಟರ್ನಲ್ ಸ್ಟೋರೇಜ್‌ನ 5G ವೇರಿಯಂಟ್ ಬೆಲೆ 22,999ರೂ. ಹಾಗೂ 8GB RAM + 128GB ಇಂಟರ್ನಲ್ ಸ್ಟೋರೇಜ್‌ನ 5G ವೇರಿಯಂಟ್ ಬೆಲೆ 24,999 ರೂ. ಗಳಾಗಿದೆ.

ಈ ಎರಡೂ ಸ್ಮಾರ್ಟ್ ಡಿವೈಸ್‌ಗಳು ಸಿಲ್ವರ್, ಗ್ರ್ಯಾಫೈಟ್ ಮತ್ತು ಡಾರ್ಕ್ ಬ್ಲೂ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಲಭ್ಯ ಇದ್ದು, ಮಾರಾಟದ ಕೊಡುಗೆಗಳಿಗೆ ಸಂಬಂಧಿಸಿದಂತೆ, ಆಯ್ದ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಮೂಲಕ ಖರೀದಿ ಮಾಡಿದ್ರೆ ನೀವು 1,000ರೂ.ವರೆಗೂ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








