Home
ಸುದ್ದಿಜಾಲ

ಸ್ಯಾಮ್‌ಸಂಗ್‌ನ ಈ ಜನಪ್ರಿಯ ಟ್ಯಾಬ್‌ಗೆ ಈಗ ಬೃಹತ್‌ ರಿಯಾಯಿತಿ: ಭಾರೀ ಹಣ ಉಳಿತಾಯ!

ಸ್ಯಾಮ್‌ಸಂಗ್ ನಿನ್ನೆಯಷ್ಟೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ 2023 (Samsung Galaxy Unpacked Event 2023) ನಲ್ಲಿ ಹಲವಾರು ಸ್ಮಾರ್ಟ್‌ ಡಿವೈಸ್‌ಗಳನ್ನು ಅನಾವರಣ ಮಾಡಿದ್ದು, ಗ್ರಾಹಕರು ಈ ಸಂತಸದೊಂದಿಗೆ ಮತ್ತೊಂದು ಖುಷಿಯ ಸುದ್ದಿ ಪಡೆದಿದ್ದಾರೆ. ಅದೇನೆಂದರೆ ಸ್ಯಾಮ್‌ಸಂಗ್‌ನ ಈ ಟ್ಯಾಬ್‌ ಮೇಲೆ ಪ್ರಮುಖ ಇ-ಕಾಮರ್ಸ್‌ ಸೈಟ್‌ 20% ರಿಯಾಯಿತಿ ನೀಡಿದೆ.

ಹೌದು, ಸ್ಯಾಮ್‌ಸಂಗ್‌ ಡಿವೈಸ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದ್ದು, ಈ ನಡುವೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್ S7 FE (Samsung Galaxy Tab S7 FE) ಗೆ ಭರ್ಜರಿ ರಿಯಾಯಿತಿ ನೀಡಲಾಗಿದೆ. ಈ ಡಿವೈಸ್‌ 6 GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ನಲ್ಲಿ ಕಾಣಿಸಿಕೊಂಡಿದ್ದು, ಅಡ್ರಿನೋ 619 GPU ಬಲ ಪಡೆಯುವ ಮೂಲಕ ಅತ್ಯುತ್ತಮ ಕಾರ್ಯಕ್ಷಮತೆ ನೀಡಲಿದೆ. ಹಾಗಿದ್ರೆ, ಈ ಡಿವೈಸ್‌ನ ಪ್ರಮುಖ ಫೀಚರ್ಸ್‌ ಹಾಗೂ ಇದರ ಆಫರ್ ಬೆಲೆ ಎಷ್ಟು ಎಂದು ತಿಳಿಯೋಣ ಬನ್ನಿ.

ಸ್ಯಾಮ್‌ಸಂಗ್‌ನ ಈ ಜನಪ್ರಿಯ ಟ್ಯಾಬ್‌ಗೆ ಈಗ ಬೃಹತ್‌ ರಿಯಾಯಿತಿ: ಭಾರೀ ಹಣ ಉಳಿತಾಯ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್ S7 FE ಡಿಸ್‌ಪ್ಲೇ ವಿವರ: ಈ ಟ್ಯಾಬ್‌ ಅನ್ನು ಖರೀದಿ ಮಾಡುವ ಮುನ್ನ ಇದರ ಫೀಚರ್ಸ್‌ ಕಡೆ ಗಮನಹರಿಸಿವುದಾದರೆ ಇದು 12.4 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಡಿಸ್‌ಪ್ಲೆ ಹೊಂದಿದೆ. ಹಾಗೆಯೇ 2560 x 1600 ಪಿಕ್ಸೆಲ್‌ನ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಇದ್ದು, WQXGA ರೆಸಲ್ಯೂಶನ್ ಅನ್ನು ಹೊಂದಿದೆ. ಇದರೊಂದಿಗೆ 243 PPI ಪಿಕ್ಸೆಲ್ ಸಾಂದ್ರತೆ ಮತ್ತು 84.91% ಸ್ಕ್ರೀನ್-ಟು-ಬಾಡಿ ಅನುಪಾತದಿಂದ ಕೂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್ S7 FE ಪ್ರೊಸೆಸರ್‌ ಮಾಹಿತಿ : ಈ ಟ್ಯಾಬ್‌ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 778G ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಅಡ್ರಿನೋ 619 GPU ಬಲ ಪಡೆದುಕೊಂಡಿದೆ. ಈ ಮೂಲಕ ಉತ್ತಮ ಗುಣಮಟ್ಟದ ವಿಡಿಯೋಗಳನ್ನು ನೋಡಲು ಹಾಗೂ ಗೇಮ್ ಆಡಲು ಅನುಕೂಲವಾಗಿದೆ. ಇದರ ಜೊತೆಗೆ 6 GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಬೆಂಬಲದ ಮೂಲಕ 1TB ವರೆಗೆ ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್ S7 FE ಕ್ಯಾಮೆರಾ ರಚನೆ: ಈ ಸ್ಯಾಮ್‌ಸಂಗ್‌ ಟ್ಯಾಬ್‌ ನ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಇದು ಸಿಂಗಲ್‌ ರಿಯರ್‌ ಹಾಗೂ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅದರಲ್ಲಿ 8 ಮೆಗಾಪಿಕ್ಸೆಲ್‌ ರಿಯರ್‌ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮರಾ ಆಯ್ಕೆ ಇದ್ದು, ಮೀಟಿಂಗ್‌ನಲ್ಲಿ ಭಾಗಿಯಾದಾಗ ಅಥವಾ ಚಿತ್ರಗಳನ್ನು ಸೆರೆಹಿಡಿಯುವಾಗ ಉತ್ತಮ ಅನುಭವ ಪಡೆದುಕೊಳ್ಳಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್ S7 FE ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಉಳಿದಂತೆ ಈ ಟ್ಯಾಬ್ 10,090mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರೊಂದಿಗೆ ಬ್ಲೂಟೂತ್ ಆವೃತ್ತಿ v5.0, ಯುಎಸ್‌ಬಿ 3.2 ಜನ್‌ 1, ವೈ ಫೈ ಆವೃತ್ತಿ 802.11 ac/b/g/n ಯ ಕನೆಕ್ಟಿವಿಟಿ ಆಯ್ಕೆ ಪಡೆದಿದ್ದು, ಇದರೊಂದಿಗೆ ಇನ್ನೂ ಹಲವು ಫೀಚರ್ಸ್‌ಗಳನ್ನು ಈ ಟ್ಯಾಬ್‌ ಹೊಂದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್ S7 FE ಬೆಲೆ ಹಾಗೂ ಆಫರ್‌ ವಿವರ: ಈ ಡಿವೈಸ್‌ ಅನ್ನು ನೀವು ಇದೀಗ 47,999 ರೂ.ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ಇದಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ 20% ಡಿಸ್ಕೌಂಟ್‌ ನೀಡಲಾಗಿದೆ. ಇದರ ಸಾಮಾನ್ಯ ದರ 59,999 ರೂ.ಗಳಾಗಿದೆ. ಇದರೊಂದಿಗೆ ನೀವು ಕೆಲವು ಬ್ಯಾಂಕ್‌ ಕಾರ್ಡ್‌ಗಳು ಹಾಗೂ ವಿನಿಮಯ ಆಫರ್‌ನೊಂದಿಗೆ ಇನ್ನೂ ಅಗ್ಗದ ಬೆಲೆಗೆ ಖರೀದಿ ಮಾಡಬಹುದು. ಅಂದರೆ 33,200ರೂ.ವರೆಗೆ ಉಳಿಸಬಹುದು.

ಸ್ಯಾಮ್‌ಸಂಗ್‌ನ ಈ ಜನಪ್ರಿಯ ಟ್ಯಾಬ್‌ಗೆ ಈಗ ಬೃಹತ್‌ ರಿಯಾಯಿತಿ: ಭಾರೀ ಹಣ ಉಳಿತಾಯ!

ಇದರೊಂದಿಗೆ ಫ್ಲಿಪ್‌ಕಾರ್ಟ್‌ನಲ್ಲಿ ರೆಡ್ಮಿ ನೋಟ್ 11 (Redmi Note 11) ಕ್ಕೂ 28% ರಿಯಾಯಿತಿ ನೀಡಲಾಗಿದೆ. ಈ ಫೋನ್‌ 17,999ರೂ.ಗಳ ಬೆಲೆ ಹೊಂದಿದ್ದು, 12,790ರೂ.ಗಳ ಆಫರ್‌ ಬೆಲೆ ಪಡೆದಿದೆ. ಈ ಫೋನ್‌ಗೂ ಸಹ ಬ್ಯಾಂಕ್‌ ಆಫರ್‌ ಹಾಗೂ ವಿನಿಮಯ ಆಫರ್‌ ಸಹ ಇದ್ದು, ಈ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ ಅನ್ನು ಖರೀದಿ ಮಾಡಬಹುದಾಗಿದೆ.

Best Mobiles in India

English summary
There is a huge demand for Samsung devices in the market, meanwhile Samsung Galaxy Tab S7 FE has been given a huge discount.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+