Samsung Galaxy Tab S9 series: ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S9 ಸೀರಿಸ್ ಅನಾವರಣ, ಬೊಂಬಾಟ್ ಫೀಚರ್ಸ್
ಸ್ಯಾಮ್‌ಸಂಗ್ (Samsung) ಪ್ರಿಯರಲ್ಲಿ ಕುತೂಹಲ ಹೆಚ್ಚು ಮಾಡಿದ್ದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ 2023 ನಲ್ಲಿ ಆಕರ್ಷಕ ಡಿವೈಸ್‌ಗಳನ್ನು ಲಾಂಚ್ ಮಾಡಲಾಗಿದೆ. ಈ ನಡುವೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S9 ಸೀರಿಸ್‌ನಲ್ಲಿನ ಡಿವೈಸ್‌ಗಳು ಬಹಳ ವಿಶೇಷ ಎನಿಸಿದ್ದು, ಇವು ಹಳೆಯ ಮಾದರಿಯ ಡಿವೈಸ್‌ಗಳಿಗಿಂತ ಬಹಳ ಭಿನ್ನವಾಗಿ ಕಾಣಿಸಿಕೊಂಡಿವೆ.
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಮತ್ತು ಗ್ಯಾಲಕ್ಸಿ Z ಫೋಲ್ಡ್ 5 ಫೋಲ್ಡಬಲ್ ಫೋನ್‌ಗಳೊಂದಿಗೆ S9 ಸೀರಿಸ್‌ನ (Samsung Galaxy Tab S9 series) ಮೂರು ಹೊಸ ಟ್ಯಾಬ್ಲೆಟ್‌ಗಳನ್ನು ಲಾಂಚ್ ಮಾಡಲಾಗಿದೆ. ಈ ಡಿವೈಸ್‌ಗಳು ಎಸ್ ಪೆನ್ ಆಯ್ಕೆಯೊಂದಿಗೆ ಕಾಣಿಸಿಕೊಂಡಿದ್ದು, ಸ್ನಾಪ್‌ಡ್ರಾಗನ್ 8 ಜನ್ 2 SoC ಪ್ರೊಸೆಸರ್ ಬಲ ಪಡೆದುಕೊಂಡಿವೆ. ಹಾಗಿದ್ರೆ, ಬನ್ನಿ ಈ ಟ್ಯಾಬ್‌ಗಳ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S9 ಸರಣಿ ಡಿಸ್‌ಪ್ಲೇ ವಿವರ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S9+ 12.4 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಸ್ಟ್ಯಾಂಡರ್ಡ್ ಮಾದರಿಯು 11 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಜೊತೆಗೆ ಟ್ಯಾಬ್ S9 ಅಲ್ಟ್ರಾ 14.6 ಇಂಚಿನ ಡಿಸ್‌ಪ್ಲೇ ಹೊಂದುವ ಮೂಲಕ ಬಹಳ ವಿಶೇಷ ಎನಿಸಿದೆ. ಈ ಎಲ್ಲಾ ಡಿವೈಸ್‌ಗಳು 120Hz ರಿಫ್ರೆಶ್ ರೇಟ್ ಬೆಂಬಲವನ್ನು ಹೊಂದಿವೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S9 ಸರಣಿ ಪ್ರೊಸೆಸರ್: ಇವುಗಳ ಪ್ರೊಸೆಸರ್ ವಿಚಾರಕ್ಕೆ ಬರುವುದಾದರೆ ಈ ಮೂರು ಟ್ಯಾಬ್‌ಗಳು ಸಹ ಇತ್ತೀಚಿನ ಸ್ನಾಪ್‌ಡ್ರಾಗನ್ 8 ಜನ್ 2 ಚಿಪ್‌ಸೆಟ್ ಬಲ ಪಡೆದುಕೊಂಡಿವೆ. ಇದು ಈ ಟ್ಯಾಬ್‌ಗಳ ದೊಡ್ಡ ಅಪ್‌ಗ್ರೇಡ್‌ಗಳಲ್ಲಿ ಒಂದಾಗಿದೆ. ಈ ಮೂಲಕ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಈ ಟ್ಯಾಬ್‌ಗಳಲ್ಲಿ ನಿರೀಕ್ಷೆ ಮಾಡಬಹುದಾಗಿದೆ. ಇನ್ನು ವಿವಿಧ ಸ್ಟೋರೇಜ್ ಆಯ್ಕೆ ಇದ್ದು, ಅದರಲ್ಲಿ 16GB RAM ಹಾಗೂ 1TB ಇಂಟರ್ ಸ್ಟೋರೇಜ್ ಪ್ರಮುಖ ಎನಿಸಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S9 ಸರಣಿ ಕ್ಯಾಮೆರಾ ಫೀಚರ್ಸ್: ಟ್ಯಾಬ್ S9 ಡಿವೈಸ್ ರಿಯರ್ ಮತ್ತು ಮುಂಭಾಗದಲ್ಲಿ ಸಿಂಗಲ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅಂದರೆ ರಿಯರ್‌ನಲ್ಲಿ 13 ಮೆಗಾಪಿಕ್ಸೆಲ್ ಆಟೋಫೋಕಸ್ ಕ್ಯಾಮೆರಾ ಆಯ್ಕೆ ಇದ್ದರೆ ಮುಂಭಾಗದಲ್ಲಿ 12 ಮೆಗಾಪಿಕ್ಸೆಲ್ ಸೆನ್ಸರ್ ಆಯ್ಕೆ ನೀಡಲಾಗಿದೆ. ಗ್ಯಾಲಕ್ಸಿ ಟ್ಯಾಬ್ S9+ ಹಿಂಭಾಗದಲ್ಲಿ ಎರಡು 12 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಹೊಂದಿದ್ದರೆ ಸೆಲ್ಪಿಗಾಗಿ 12 ಮೆಗಾಪಿಕ್ಸೆಲ್ ಸೆನ್ಸರ್ ಆಯ್ಕೆ ಹೊಂದಿದೆ.
ಹಾಗೆಯೇ ಟ್ಯಾಬ್ S9 ಅಲ್ಟ್ರಾ ನಲ್ಲಿ ವಿಭಿನ್ನ ಡ್ಯುಯಲ್ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಹಾಗೂ 13 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಎರಡು 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದ ಆಯ್ಕೆ ನೀಡಲಾಗಿದೆ. ಈ ಮೂಲಕ ಮೂರು ಟ್ಯಾಬ್‌ಗಳಲ್ಲಿ ಈ ಟ್ಯಾಬ್ ಮಾತ್ರ ಕ್ಯಾಮೆರಾ ವಿಚಾರದಲ್ಲಿ ಬಹಳ ಭಿನ್ನತೆ ಪಡೆದುಕೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S9 ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಇನ್ನು ಸ್ಟ್ಯಾಂಡರ್ಡ್ ಮಾದರಿಯು 8,400mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದರೆ ಪ್ಲಸ್ ಮಾದರಿಯು 10,090mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಅಲ್ಟ್ರಾ 11,200mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆಯುವ ಮೂಲಕ ವಿಶೇಷ ಎನಿಸಿದೆ. ಇದರೊಂದಿಗೆ ಸ್ಯಾಮ್‌ಸಂಗ್ ಎಸ್ ಪೆನ್ ಮತ್ತು ಯುಎಸ್‌ಬಿ ಟೈಪ್-ಸಿ ಕೇಬಲ್ ಆಯ್ಕೆಯನ್ನು ನೀಡಿದೆ.
ಉಳಿದಂತೆ ಈ ಡಿವೈಸ್‌ಗಳು ಇತ್ತೀಚಿನ ಆಂಡ್ರಾಯ್ಡ್ 13 ಓಎಸ್ ಅನ್ನು ರನ್ ಮಾಡಲಿದ್ದು, ಎಲ್ಲಾ ಡಿವೈಸ್‌ಗಳಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹಾಗೂ ಎಕೆಜಿ ಮತ್ತು ಡಾಲ್ಬಿ ಅಟ್ಮಾಸ್ ಗೆ ಬೆಂಬಲ ಪಡೆದುಕೊಂಡಿದೆ. ಅಷ್ಟು ಮಾತ್ರವಲ್ಲದೆ ಕ್ವಾಡ್ ಸ್ಟೀರಿಯೋ ಸ್ಪೀಕರ್ ಮೂಲಕ ಉತ್ತಮ ಸೌಂಡ್ ಅನುಭವ ಲಭ್ಯ ಆಗಲಿದೆ. ಬನ್ನಿ ಈ ಡಿವೈಸ್‌ಗಳ ಬೆಲೆಗಳ ಕಡೆ ಗಮನಹರಿಸೋಣ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S9 ಬೆಲೆ ಹಾಗೂ ಲಭ್ಯತೆ: ಗ್ಯಾಲಕ್ಸಿ ಟ್ಯಾಬ್ S9 ಬೇಸ್ ಮಾಡೆಲ್‌ಗಾಗಿ $799.99 (ಅಂದಾಜು 65,700ರೂ.ಗಳು) ಪ್ರಾರಂಭವಾಗುತ್ತದೆ. ಗ್ಯಾಲಕ್ಸಿ ಟ್ಯಾಬ್ S9+ ಬೆಲೆ $999.99 (ಅಂದಾಜು 82,100ರೂ.ಗಳು) ಹಾಗೂ ಅಲ್ಟ್ರಾ $1,199.99 (ಅಂದಾಜು 98,500ರೂ.ಗಳು) ಬೆಲೆ ಹೊಂದಿರಬಹುದು ಎಂದು ನಂಬಲಾಗಿದೆ. ಆದರೆ S9 ಸರಣಿಯ ಭಾರತದ ಬೆಲೆಗಳು ನಾಳೆ ಖಚಿತಗೊಳ್ಳಲಿವೆ.
ಗ್ಯಾಲಕ್ಸಿ ಟ್ಯಾಬ್ ಟ್ಯಾಬ್ S9 ಸರಣಿಯು ಯುಎಸ್ ನಲ್ಲಿಇಂದಿನಿಂದ ಮುಂಗಡ ಆರ್ಡರ್‌ಗಳಿಗೆ ಸಿದ್ಧವಾಗಿದ್ದು, ಆಗಸ್ಟ್ 11 ರಿಂದ ಖರೀದಿಸಲು ಲಭ್ಯವಿರುತ್ತದೆ. ಎಲ್ಲಾ ಮೂರು ಟ್ಯಾಬ್‌ಗಳು ಬೀಜ್ ಮತ್ತು ಗ್ರ್ಯಾಫೈಟ್ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಕಂಡುಬರುತ್ತವೆ.


Click it and Unblock the Notifications








