Samsung Galaxy Unpacked: ಉಚಿತ ಲೈವ್ ವೀಕ್ಷಣೆ ಹೇಗೆ?..ಹೊಸ ನಿರೀಕ್ಷೆ ಏನು?
ಜನಪ್ರಿಯ ಸ್ಯಾಮ್‌ಸಂಗ್ ಕಂಪನಿಯ ಬಹುನಿರೀಕ್ಷಿತ 'ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ 2023' (Samsung Galaxy Unpacked 2023) ಕಾರ್ಯಕ್ರಮವು ಇಂದು (ಜು. 26) ರಂದು ಭಾರತೀಯ ಕಾಲಮಾನ ಸಂಜೆ 4:30 ಗಂಟೆಗೆ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ಸ್ಯಾಮ್‌ಸಂಗ್ ಸಂಸ್ಥೆಯು ತನ್ನ ಗ್ಯಾಲಕ್ಸಿ Z ಫ್ಲಿಪ್ 5, ಗ್ಯಾಲಕ್ಸಿ Z ಫೋಲ್ಡ್ 5 ಫೋನ್‌ಗಳ ಜೊತೆ ಗ್ಯಾಲಕ್ಸಿ ವಾಚ್ 6, ಗ್ಯಾಲಕ್ಸಿ ಟ್ಯಾಬ್ 9 ಸರಣಿ ಅನಾವರಣ ಮಾಡುವ ನಿರೀಕ್ಷೆ ಇದೆ.
ಸ್ಯಾಮ್‌ಸಂಗ್ ಕಂಪನಿಯ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಕಾರ್ಯಕ್ರಮದ ಭಾರೀ ಕುತೂಹಲ ಮೂಡಿಸಿದೆ. ಗ್ರಾಹಕರು ಕಾರ್ಯಕ್ರಮದ ಲೈವ್‌ಸ್ಟ್ರೀಮ್ ಅನ್ನು ಆನ್‌ಲೈನ್ ಮೂಲಕ ಉಚಿತವಾಗಿ ವೀಕ್ಷಣೆ ಮಾಡಬಹುದಾಗಿದೆ. ಗ್ರಾಹಕರು ಸ್ಯಾಮ್‌ಸಂಗ್‌ನ ಅಧಿಕೃತ ಯೂಟ್ಯೂಬ್ ಚಾನೆಲ್ ಮತ್ತು ಸ್ಯಾಮ್‌ಸಂಗ್ ನ್ಯೂಸ್‌ರೂಮ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಲೈವ್‌ಸ್ಟ್ರೀಮ್ ಲಭ್ಯ. ಅಂದಹಾಗೆ ಸ್ಯಾಮ್‌ಸಂಗ್ ದಕ್ಷಿಣ ಕೊರಿಯಾದಿಂದ ಕಾರ್ಯಕ್ರಮ ಹೋಸ್ಟ್ ಮಾಡುತ್ತಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ 2023 ಕಾರ್ಯಕ್ರಮದ ನಿರೀಕ್ಷೆಗಳು ಏನು?
ಸ್ಯಾಮ್‌ಸಂಗ್ ಈ ಕಾರ್ಯಕ್ರಮದಲ್ಲಿ ಹಲವು ಉತ್ಪನ್ನಗಳನ್ನು ಅನಾವರಣ ಮಾಡುವ ನಿರೀಕ್ಷೆಗಳಿವೆ ಅವು ಯಾವವೆಂದರೆ;
* ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಸ್ಮಾರ್ಟ್‌ಫೋನ್ ಬಿಡುಗಡೆ ಖಚಿತ
* ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಫೋನ್ ಲಾಂಚ್ ಪಕ್ಕಾ
* ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S9 ಸರಣಿ ಲಾಂಚ್ - ಈ ಸರಣಿಯು ಗ್ಯಾಲಕ್ಸಿ ಟ್ಯಾಬ್ S9, ಗ್ಯಾಲಕ್ಸಿ ಟ್ಯಾಬ್ S9 ಪ್ಲಸ್ ಮತ್ತು ಗ್ಯಾಲಕ್ಸಿ ಟ್ಯಾಬ್ S9 ಅಲ್ಟ್ರಾ ಹೊಂದಿರಲಿದೆ.
* ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 6 ಸರಣಿಯ ಬಿಡುಗಡೆಯ ನಿರೀಕ್ಷೆ ಇದೆ
ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ ಆನ್‌ಲೈನ್‌ನಲ್ಲಿ ವೀಕ್ಷಣೆ ಹೇಗೆ?
ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ ಅನ್ನು ಗ್ರಾಹಕರು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು. ಗ್ರಾಹಕರು ಜುಲೈ 26 ರ (ಇಂದು) ಸಂಜೆ 4:30 ಗಂಟೆಗೆ ಸ್ಯಾಮ್‌ಸಂಗ್‌ನ ಅಧಿಕೃತ ಯೂಟ್ಯೂಬ್ ಚಾನೆಲ್ ಮತ್ತು ಸ್ಯಾಮ್‌ಸಂಗ್ ನ್ಯೂಸ್‌ರೂಮ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಉಚಿತವಾಗಿ ಲೈವ್‌ಸ್ಟ್ರೀಮ್ ವೀಕ್ಷಣೆ ಮಾಡಬಹುದು. ಅಂದಹಾಗೆ ಸ್ಯಾಮ್‌ಸಂಗ್ ದಕ್ಷಿಣ ಕೊರಿಯಾದಿಂದ ಕಾರ್ಯಕ್ರಮ ಹೋಸ್ಟ್ ಮಾಡುತ್ತಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಮತ್ತು ಗ್ಯಾಲಕ್ಸಿ Z ಫೋಲ್ಡ್ 5 ಫೋನಿನ ನಿರೀಕ್ಷಿತ ಫೀಚರ್ಸ್ :
ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಪ್ರಮುಖ ಬದಲಾವಣೆಯೊಂದಿಗೆ ಮಾರುಕಟ್ಟೆ ಎಂಟ್ರಿ ಪಡೆಯುವ ಸಾಧ್ಯತೆಗಳು ಇವೆ. ಮುಖ್ಯವಾಗಿ ದೊಡ್ಡ ಡಿಸ್‌ಪ್ಲೇ ಮಾದರಿಯನ್ನು ಪಡೆಯಲಿದೆ ಎಂದು ಹೇಳಲಾಗುತ್ತಿದೆ. ವಿಶಾಲ ಡಿಸ್‌ಪ್ಲೇ ಗೆ ಪೂರಕವಾದ ರಚನೆ ಮತ್ತು ವಿನ್ಯಾಸವನ್ನು ಹೊಂದಿರುವ ನಿರೀಕ್ಷೆಗಳಿವೆ.
ಹಾಗೆಯೇ ಸ್ನ್ಯಾಪ್‌ಡ್ರಾಗನ್ 8 ಜೆನ್ 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ ಇದರ ಜೊತೆಗೆ ವೇಗವಾದ ಮೆಮೊರಿ ಆಯ್ಕೆ ಅನ್ನು ಒಳಗೊಂಡಿರಬಹುದು. ಸ್ಯಾಮ್‌ಸಂಗ್ ಸಂಸ್ಥೆಯ ಅತ್ಯುತ್ತಮ ಬ್ಯಾಟರಿ ಬ್ಯಾಕಪ್‌ಗಾಗಿ ಗ್ಯಾಲಕ್ಸಿ Z ಫೋಲ್ಡ್ 5 ಮತ್ತು ಗ್ಯಾಲಕ್ಸಿ Z ಫ್ಲಿಪ್ 5 ಫೋನಿನಲ್ಲಿ ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಸೇರಿಸುವ ಸಾಧ್ಯತೆಗಳು ಹೆಚ್ಚಿವೆ. ಆದಾಗ್ಯೂ, ಬ್ಯಾಟರಿ ವೇಗದ ವಿಷಯದಲ್ಲಿ ಹೆಚ್ಚಿನ ಬದಲಾವಣೆಗಳನ್ನು ನಿರೀಕ್ಷೆ ಕಡಿಮೆ ಎನ್ನಬಹುದು.
ಗ್ಯಾಲಕ್ಸಿ Z ಫೋಲ್ಡ್ 5 ಫೋನಿನಲ್ಲಿ ಗ್ಯಾಲಕ್ಸಿ Z ಫೋಲ್ಡ್ 5 ಈಗಾಗಲೇ ಗ್ಯಾಲಕ್ಸಿ S23 ಅಲ್ಟ್ರಾದಲ್ಲಿ ಬಳಸುತ್ತಿರುವ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಅನ್ನು ನೀಡುವ ನಿರೀಕ್ಷೆಗಳು ಇವೆ. ಪೋನಿನ ಪ್ರಾಥಮಿಕ ಕ್ಯಾಮರಾವು ಅಲ್ಟ್ರಾ-ವೈಡ್ ಕ್ಯಾಮರಾ ಮತ್ತು ಟೆಲಿಫೋಟೋ ಜೊತೆಗೂಡಿರುವ ಸಾಧ್ಯತೆಗಳು ಇವೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S9 ಸರಣಿ ನಿರೀಕ್ಷೆಗಳು ಏನು?
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S9 ಸಂಸ್ಥೆಯ ಹೈ ಎಂಡ್ ಮಾದರಿಯ ಟ್ಯಾಬ್ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಈ ಸರಣಿಯು ಗ್ಯಾಲಕ್ಸಿ ಟ್ಯಾಬ್ S9, ಗ್ಯಾಲಕ್ಸಿ ಟ್ಯಾಬ್ S9 ಪ್ಲಸ್ ಮತ್ತು ಗ್ಯಾಲಕ್ಸಿ ಟ್ಯಾಬ್ S9 ಅಲ್ಟ್ರಾ ಮಾಡೆಲ್‌ಗಳನ್ನು ಒಳಗೊಂಡಿರುವ ಸಾಧ್ಯತೆಗಳಿವೆ.


Click it and Unblock the Notifications








