Samsung Galaxy Unpacked 2025 ಕಾರ್ಯಕ್ರಮಕ್ಕೆ ಮುಹೂರ್ತ ಫಿಕ್ಸ್!
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಕಂಪನಿಯ ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ (Samsung Galaxy Unpacked 2025) ಇದೇ ಜನವರಿ 22 ರಂದು ಪ್ರಾರಂಭ ಆಗಲಿದೆ ಎಂದು ತಿಳಿದುಬಂದಿದೆ. ಅಂದಹಾಗೆ ಈ ಕಾರ್ಯಕ್ರಮವು ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.
ಹೌದು, ಸ್ಯಾಮ್‌ಸಂಗ್ ಸಂಸ್ಥೆಯ ಸ್ಯಾಮ್‌ಸಂಗ್ ಅನ್‌ಪ್ಯಾಕ್ಡ್ ಈವೆಂಟ್ 2025 ಈ ಅದ್ಧೂರಿ ಕಾರ್ಯಕ್ರಮವು ಜನವರಿ 22 ರಂದು ನಡೆಯಲಿದೆ. ಅಂದಹಾಗೆ ಈ ಬಹುನಿರೀಕ್ಷಿತ ಕಾರ್ಯಕ್ರಮದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S25, ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಪ್ಲಸ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕಾರ್ಯಕ್ರಮದ ಲೈವ್ ವೀಕ್ಷಣೆ
ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ ಜನವರಿ 22 ರಂದು ಭಾರತೀಯ ಕಾಲಮಾನ ರಾತ್ರಿ 11:30 ರಿಂದ ಪ್ರಾರಂಭ ಆಗಲಿದೆ. ಆಸಕ್ತ ಗ್ರಾಹಕರು ಸಂಸ್ಥೆಯ ಅಧಿಕೃತ YouTube ಚಾನೆಲ್ ಮೂಲಕ ನೇರ ವೀಕ್ಷಣೆ ಮಾಡಬಹುದು. ಹಾಗಾದರೇ ಸ್ಯಾಮ್‌ಸಂಗ್ ಅನ್‌ಪ್ಯಾಕ್ಡ್ ಈವೆಂಟ್ 2025 ಕಾರ್ಯಕ್ರಮದ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯಲ್ಲಿ ಮೂರು ಫೋನ್‌ಗಳು ಲಾಂಚ್ ಆಗುವ ಸಾಧ್ಯತೆಗಳು ಇವೆ. ಅವುಗಳು ಕ್ರಮವಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S25, ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಪ್ಲಸ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಎಂದು ನಿರೀಕ್ಷಿಸಲಾಗಿದೆ. ಈ ಫೋನ್‌ಗಳು ಇತ್ತೀಚಿನ ಸ್ನಾಪ್‌ಡ್ರಾಗನ್ X ಎಲೈಟ್ SoC ( Snapdragon X Elite SoC ) ಚಿಪ್‌ಸೆಟ್ ಪ್ರೊಸೆಸರ್ ಪವರ್ ಒಳಗೊಂಡಿರಲಿವೆ.
ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿ ಜೊತೆಗೆ Galaxy AI ಪರಿಚಿತವಾಗಲಿದೆ. ಇನ್ನು ಈ ನೂತನ ಸರಣಿಯ ಫೋನ್‌ಗಳು ಆಂಡ್ರಾಯ್ಡ್ 15 ಓಎಸ್ (Android 15) ಆಧಾರಿತ One UI 7 ಸಪೋರ್ಟ್ ಅನ್ನು ಒಳಗೊಂಡಿರಲಿವೆ ಎನ್ನಲಾಗಿದೆ. ಈ ಸರಣಿಯ ಪೈಕಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಮೊಬೈಲ್ 16GB RAM ಮತ್ತು 1TB ಆಂತರಿಕ ಸ್ಟೋರೇಜ್ ವೇರಿಯಂಟ್ ಆಯ್ಕೆಯಲ್ಲಿ ಎಂಟ್ರಿ ಕೊಡುವ ನಿರೀಕ್ಷೆಗಳು ಇವೆ.
ಅದೇ ರೀತಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಫೋನ್ 50 ಮೆಗಾ ಪಿಕ್ಸಲ್ ಅಲ್ಟ್ರಾವೈಡ್ ಲೆನ್ಸ್ ಪಡೆದಿರಲಿದೆ. ಹಾಗೆಯೇ 3x ಆಪ್ಟಿಕಲ್ ಜೂಮ್ ಸಪೋರ್ಟ್ ನ 50 ಮೆಗಾ ಪಿಕ್ಸಲ್ ಟೆಲಿಫೋಟೋ ಕ್ಯಾಮೆರಾ ವ್ಯವಸ್ಥೆಯನ್ನು ಪಡೆದಿರುವ ನಿರೀಕ್ಷೆಗಳು ಇವೆ.


Click it and Unblock the Notifications








